ಪಟಾಕಿ ಸಿಡಿತಕ್ಕೆ ಬಿಜೆಪಿ ಸಂಸದೆ ರಿಟಾ ಬಹುಗುಣ ಜೋಶಿ ಮೊಮ್ಮಗಳ ಸಾವು

ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಆರು ವರ್ಷದ ಮೊಮ್ಮಗಳು ಸುಟ್ಟ ಗಾಯಗಳಿಂದ ಇಂದು ಮುಂಜಾನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಿಧನರಾಗಿದ್ದಾರೆ. 

Last Updated : Nov 17, 2020, 05:03 PM IST
ಪಟಾಕಿ ಸಿಡಿತಕ್ಕೆ ಬಿಜೆಪಿ ಸಂಸದೆ ರಿಟಾ ಬಹುಗುಣ ಜೋಶಿ ಮೊಮ್ಮಗಳ ಸಾವು title=

ನವದೆಹಲಿ: ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಆರು ವರ್ಷದ ಮೊಮ್ಮಗಳು ಸುಟ್ಟ ಗಾಯಗಳಿಂದ ಇಂದು ಮುಂಜಾನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಿಧನರಾಗಿದ್ದಾರೆ.

ಸೋಮವಾರ ಪಟಾಕಿ ಸಿಡಿತದಿಂದಾಗಿ ಮಗುವಿಗೆ ಸುಟ್ಟ ಗಾಯಗಳಾಗಿವೆ.ಆಕೆಗೆ ಶೇಕಡಾ 60 ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದು, ಪ್ರಯಾಗರಾಜ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ವೈದ್ಯರು ಮತ್ತು ಕುಟುಂಬ ಸದಸ್ಯರು ನಿರಾಕರಿಸಿದ್ದಾರೆ. ಇಂದು ಮಗುವನ್ನು ದೆಹಲಿಗೆ ಏರ್ ಲಿಫ್ಟ್ ಮಾಡುವ ಯೋಜನೆ ಇದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

Diwali 2020: ದೇಶಾದ್ಯಂತ 72 ಸಾವಿರ ಕೋಟಿ ರೂ. ವ್ಯಾಪಾರ, ಚೀನಾಗೆ ಆದ ಹಾನಿ ಎಷ್ಟು ಗೊತ್ತಾ?

ಅವರ ಸಾವಿಗೆ ಸಂತಾಪ ಸೂಚಿಸಿದ ಮೌರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಗು ಆಟವಾಡುತ್ತಿದ್ದಾಗ ಈ ದುರಂತ ನಡೆದಿದೆ ಎಂದು ನನಗೆ ತಿಳಿಸಲಾಗಿದೆ.ನಾವು ಅವಳನ್ನು ದೆಹಲಿಗೆ ಸ್ಥಳಾಂತರಿಸುವುದನ್ನು ನಿರ್ಧರಿಸಿದ್ದೇವೆ ಆದರೆ ಅಂತಹ ಸುದ್ದಿಯನ್ನು ನಾವು ನಿರೀಕ್ಷಿಸಿರಲಿಲ್ಲ. ನನಗೆ ನಿಜಕ್ಕೂ ಆಘಾತವಾಗಿದೆ, ಜನರು ಜಾಗೃತರಾಗಿರಬೇಕು ಎಂದು ಅವರು ತಿಳಿಸಿದರು.

Diwali 2020: 499 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಈ ರಾಶಿಯ ಜನರಿಗೆ ಲಾಭ

71 ವರ್ಷದ ರಿಟಾ ಜೋಶಿ ಅವರು 24 ವರ್ಷಗಳ ಕಾಲ ತಮ್ಮ ಪಕ್ಷವಾದ ಕಾಂಗ್ರೆಸ್ ತೊರೆದ ನಂತರ 2016 ರಲ್ಲಿ ಬಿಜೆಪಿಗೆ ಸೇರಿದ್ದರು. ಅವರು 2007 ರಿಂದ 2012 ರವರೆಗೆ ಐದು ವರ್ಷಗಳ ಕಾಲ ಕಾಂಗ್ರೆಸ್ಸಿನ ಯುಪಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಜೋಶಿ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಯಾಗರಾಜ್ ದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು.ಅವರು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಮವತಿ ನಂದನ್ ಬಹುಗುಣ ಅವರ ಪುತ್ರಿಯಾಗಿದ್ದಾರೆ.

Trending News