ಲಕ್ನೋ: ಕೆಲವು ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆ ನಿಡುವವವರಿಗೆ ಪ್ರಧಾನಿ ಮೋದಿ ಎಚ್ಚರಿಕೆಯ ಮಾತನಾಡಿದ್ದರು. ಆದರೆ ಈಗ ಸ್ವತಃ ಬಿಜೆಪಿ ಪಕ್ಷದ ನಾಯಕರೆ ಮತ್ತೆ ಅಂತಹ ಹೇಳಿಕೆಗಳನ್ನು ನಿಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರನ್ನು "ಸುರ್ಪನಖಾ" ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ಪಶ್ಚಿಮ ಬಂಗಾಳ ಜಮ್ಮು ಕಾಶ್ಮೀರದ ರೀತಿ ಪರಿವರ್ತನೆಯಾಗುತ್ತಿದ್ದು ಈಗ ಅಲ್ಲಿ ಹಿಂದೂಗಳು ವಲಸೆ ಹೋಗುವ ಸ್ಥಿತಿ ಬಂದಿದೆ ಎಂದರು.ಅಲ್ಲದೆ ಬಂಗಾಳದಲ್ಲಿ ಹೆಚ್ಚುತ್ತಿರುವ ಹತ್ಯೆಗಳಿಗೆ ಟೀಕಿಸಿದ ಅವರು ಹಿಂದೂಗಳು ಬಂಗಾಳದಲ್ಲಿ ಸುರಕ್ಷಿತವಿಲ್ಲ ಎಂದರು
ಸುರೇಂದ್ರ ಸಿಂಗ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೆ ಮೊದಲೇನಲ್ಲ, ಈ ಹಿಂದೆ 2024 ರ ವೇಳೆಗೆ ಭಾರತ ದೇಶ ಹಿಂದು ದೇಶವಾಗಿ ಪರಿವರ್ತನೆಯಾಗಲಿದೆ,ಯಾರಿಗಾದರೂ ವಂದೇ ಮಾತರಂ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುವವರು ಪಾಕಿಸ್ತಾನಿಗಳು ಎಂದು ಹೇಳಿಕೆ ನೀಡಿದ್ದರು.
ಇದೆ ಸಂದರ್ಭದಲ್ಲಿ ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕರ ಪರವಾಗಿ ಮಾತನಾಡಿದ ಅವರು "ನಾನು ಮಾನಸಿಕ ದೃಷ್ಟಿಕೋನದಿಂದ ಮಾತನಾಡುತ್ತಿದ್ದೇನೆ; ಮೂವರು ಮಕ್ಕಳ ತಾಯಿಯನ್ನು ಯಾರೂ ಅತ್ಯಾಚಾರ ಮಾಡಲಾರರು, ಅದು ಸಾಧ್ಯವಿಲ್ಲ, ಇದು ಕೇವಲ ಒಂದು ಪಿತೂರಿ ಎಂದು ಅವರು ತಿಳಿಸಿದರು.