'ಶೀಘ್ರದಲ್ಲೇ ಠಾಕ್ರೆ ಸರ್ಕಾರ ಪತನ'

ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿ

Last Updated : Nov 24, 2020, 06:41 PM IST
  • 'ಈ ಮೈತ್ರಿ ಸರ್ಕಾರವು ತನ್ನಿಂದ ತಾನೇ ಶೀಘ್ರದಲ್ಲೇ ಪತನಗೊಳ್ಳಲಿದೆ'
  • ನೇತೃತ್ವದ ಮಹಾವಿಕಾಸ ಅಘಾಡಿ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿ
  • 'ಇದೊಂದು ಮೂರು ಪಕ್ಷಗಳ ಅಸ್ವಾಭಾವಿಕವಾದ ಮೈತ್ರಿ- ಮಾಜಿ ಸಿಎಂ ದೇವೇಂದ್ರ ಫಡಣವೀಸ್‌
'ಶೀಘ್ರದಲ್ಲೇ ಠಾಕ್ರೆ ಸರ್ಕಾರ ಪತನ' title=

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ ಅಘಾಡಿ(MVA) ಸರ್ಕಾರವು ಒಂದು ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, ಈ ಸಂದರ್ಭದಲ್ಲೇ 'ಈ ಮೈತ್ರಿ ಸರ್ಕಾರವು ತನ್ನಿಂದ ತಾನೇ ಶೀಘ್ರದಲ್ಲೇ ಪತನಗೊಳ್ಳಲಿದೆ' ಎಂದು ಬಿಜೆಪಿ ಹೇಳಿದೆ.

ಆದರೆ, ಬಿಜೆಪಿ(BJP) ನಾಯಕರ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಶಿವಸೇನಾ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಒಳಗೊಂಡಿರುವ ಎಂವಿಎ, 'ಇದು ಬಿಜೆಪಿಯ ಕನಸಷ್ಟೇ. ಎಂವಿಎ ಆಡಳಿತಾವಧಿಯನ್ನು ಪೂರ್ಣಗೊಳಿಸಲಿದೆ. ರಾಜ್ಯದಲ್ಲಿ 'ಆಪರೇಷನ್‌ ಕಮಲ' ಯಶಸ್ವಿಯಾಗಲು ಬಿಡುವುದಿಲ್ಲ' ಎಂದು ತಿಳಿಸಿದೆ.

ಕೊರೋನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ 'ಬಿಗ್ ಶಾಕ್'.!

ಈ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ದೇವೇಂದ್ರ ಫಡಣವೀಸ್‌, 'ಇದೊಂದು ಮೂರು ಪಕ್ಷಗಳ ಅಸ್ವಾಭಾವಿಕವಾದ ಮೈತ್ರಿ. ನಾವು ಪರಿಣಾಮಕಾರಿಯಾದ ವಿರೋಧಪಕ್ಷದ ಪಾತ್ರವನ್ನು ನಿಭಾಯಿಸುತ್ತಿದ್ದೇವೆ. ನಾನು ಯಾವುದೇ ದಿನಾಂಕವನ್ನು ಹೇಳುವುದಿಲ್ಲ. ಸರ್ಕಾರ ಪತನಗೊಂಡ ತಕ್ಷಣದಲ್ಲೇ, ಮತ್ತಷ್ಟು ಪರಿಣಾಮಕಾರಿಯಾದ, ಪರ್ಯಾಯ ಸರ್ಕಾರವು ಅಧಿಕಾರವಹಿಸಿಕೊಳ್ಳಲಿದೆ' ಎಂದರು.

RT-PCR Corona Test:ಎಲ್ಲ ರಾಜ್ಯಗಳಲ್ಲಿ ಟೆಸ್ಟ್ ಶುಲ್ಕ ರೂ.400 ನಿಗದಿಪಡಿಸಿ, ಕೇಂದ್ರ ಸರ್ಕಾರಕ್ಕೆ SC ನೋಟಿಸ್

ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಜೊತೆಗಿನ ಮೈತ್ರಿಯನ್ನು ತೊರೆದು ಹೊರಬಂದಿದ್ದ ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ, ಸೈದ್ಧಾಂತಿಕ ವಿರೋಧಿಗಳಾದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆ ಕೈಜೋಡಿಸಿದ್ದರು. ಕಳೆದ ವರ್ಷ ನ.28ರಂದು ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಪ್ರಮಾಣವಚನ ಸ್ವೀಕರಿಸಿದ್ದರು. 'ಮುಂದಿನ ಎರಡು ಮೂರು ತಿಂಗಳೊಳಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಪ್ರಸ್ತುತ ನಡೆಯುತ್ತಿರುವ ಪರಿಷತ್‌ ಚುನಾವಣೆಗಳು ಮುಗಿಯಲಿ ಎಂದಷ್ಟೇ ಕಾಯುತ್ತಿದ್ದೇವೆ' ಎಂದು ಕೇಂದ್ರ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ ಹೇಳಿದ್ದರು.

ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ ಮೋದಿ

Trending News