Harris Rauf: ಟಿ-20 ವಿಶ್ವಕಪ್ 2024 ರ, ಪಾಕಿಸ್ತಾನ vs ಕೆನಡಾ ನಡುವಿನ ಪಂದ್ಯ ಮಂಗಳವಾರ(ಜೂನ್ 11) ರಂದು ನೂಯಾರ್ಕನ ನಸ್ಸೌ ಕೌಂಟಿ ಅಂತಾರಾಷ್ಟೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಬಿರುಸಿನ ಬೌಲಿಂಗ್ ಮಾಡುವ ಮೂಲಕ ಪಾಕ್ ತಂಡ ಕೆನಡಾ ತಂಡದ ಬ್ಯಾಟರ್ಗಳ ಬೆವರಿಳಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ತಂಡ ಬಿರುಸಿನ ಬೌಲಿಂಗ್ ಮೂಲಕ ಎದುರಾಳಿ ತಂಡವನ್ನ ನಡುಗಿಸಿತ್ತು. ಪಾಕ್ ಬೌಲರ್ಗಳ ದಾಳಿಗೆ ಸಿಲುಕಿದ ಕೆನಡಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಲಷ್ಟೆ ಶಕ್ತವಾಯಿತು.
ಇದನ್ನೂ ಓದಿ: T20 Worldcup 2024: ಪಾಕಿಸ್ತಾನ ತಂಡಕ್ಕೆ ಮೊದಲ ಗೆಲುವು: ಬ್ಯಾಟಿಂಗ್ನಲ್ಲಿ ಮುಗ್ಗರಿಸಿದ ಕೆನಡಾ.
ಕೆನಡಾ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್ ಹ್ಯಾರಿಸ್ ರೌಫ್ ಹೊಸ ದಾಖಲೆಯನ್ನ ಸೃಷ್ಟಿಸುವಲ್ಲಿ ಯಶಸ್ವಿಯಾದರು. ಟಿ20 ಯಲ್ಲಿ ವೇಗವಾಗಿ 100 ವಿಕೆಟ್ ಪಡೆಯುವ ಮೂಲಕ ಈ ದಾಖಲೆ ಸೃಷ್ಟಿಸಿದ ಮೂರನೆ ಬೌಲರ್ ಎನಿಸಿಕೊಂಡರು.
ಮಂಗಳವಾರ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾರಿಸ್ ನಾಲ್ಕು ಓವರ್ಗಳ ಬೌಲಿಂಗ್ ಮಾಡಿದರು. ನಾಲ್ಕು ಓವರ್ಗಳಲ್ಲಿ 26 ರನ್ ಅಷ್ಟೇ ನೀಡಿ 2 ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನ ಮುಡಿಗೇರಿಕೊಂಡರು.
71 ಪಂದ್ಯಗಳಲ್ಲಿ ವಿಕೆಟ್ ಉರುಳಿಸುವ ಮೂಲಕ ಹ್ಯಾರಿಸ್ ರೌಫ್ ಒಟ್ಟಾಗಿ 100 ವಿಕೆಟ್ ಕಲೆಹಾಕಿ ಈ ಮೈಲುಗಲ್ಲನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.