ನವದೆಹಲಿ : ಪಂಜಾಬ್ನಲ್ಲಿ ವಿಧಾನಸಭಾ ಚುನಾವಣೆಯ ಕಾವು ಆರಂಭವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ತಮ್ಮ ಗೆಲುವಿನ ಹರಕೆ ಹೊತ್ತಿವೆ. ಈ ಮಧ್ಯೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಂಜಾಬ್ಗೆ ಸಂಬಂಧಿಸಿದಂತೆ ಎನ್ಡಿಎ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದ್ದಾರೆ. ಪಂಜಾಬ್ ಗಡಿ ರಾಜ್ಯವಾಗಿರುವುದರಿಂದ ಭದ್ರತೆಯ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿದ್ದು, ಭದ್ರತೆಯ ವಿಚಾರವೇ ಅಲ್ಲಿ ಪ್ರಮುಖವಾಗಿದೆ ಎಂದರು.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಖಾತೆಯಲ್ಲಿವೆ 37 ಸ್ಥಾನಗಳು
ಈ ಚುನಾವಣೆ ಪಂಜಾಬ್ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಜೆಪಿ ನಡ್ಡಾ(JP Nadda) ಹೇಳಿದ್ದಾರೆ. ಪಂಜಾಬ್ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ಎನ್ಡಿಎಯಿಂದ 37 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು 15 ಸ್ಥಾನಗಳನ್ನು ಸುಖದೇವ್ ಸಿಂಗ್ ಧಿಂಡ್ಸಾ ಅವರ ಶಿರೋಮಣಿ ಅಕಾಲಿದಳ (ಯುನೈಟೆಡ್) ಗೆ ನೀಡಲಾಗಿದೆ ಎಂದು ಹೇಳಿದರು. ಪಂಜಾಬ್ನ 65 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ನಡ್ಡಾ ಹೇಳಿದ್ದಾರೆ.
ಇದನ್ನೂ ಓದಿ : ಜನವರಿ 26 ಈ ಪ್ರದೇಶದಲ್ಲಿ ಇರುವುದಿಲ್ಲ ಮೆಟ್ರೋ ಸೇವೆ, ಮನೆಯಿಂದ ಹೊರಡುವ ಮುನ್ನ ತಿಳಿದುಕೊಳ್ಳಿ
ಪ್ರಧಾನಿ ಮೋದಿ ಅವರಿಗೆ ಪಂಜಾಬ್ ಮೇಲೆ ವಿಶೇಷವಾದ ಬಾಂಧವ್ಯವಿದ್ದು, ಈಗ ರಾಜ್ಯವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಿದೆ, ಇದಕ್ಕಾಗಿ ಅಲ್ಲಿ ಸ್ಥಿರ ಸರ್ಕಾರದ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ತಿಳಿಸಿದರು. ಪಂಜಾಬ್ನಲ್ಲಿ ದೇಶವಿರೋಧಿ ಷಡ್ಯಂತ್ರಗಳು ನಡೆಯುತ್ತಿವೆ ಆದರೆ ಈ ಚುನಾವಣೆಯು ಮುಂಬರುವ ಪೀಳಿಗೆಯನ್ನು ಸುರಕ್ಷಿತವಾಗಿಡುವ ಚುನಾವಣೆ ಎಂದು ಸಾಬೀತುಪಡಿಸುತ್ತದೆ ಎಂದು ಹೇಳಿದರು.
ಪಂಜಾಬ್ನಲ್ಲಿ ಶಾಶ್ವತ ಸರ್ಕಾರ ಒದಗಿಸುವ ಗುರಿ
ಈ ಚುನಾವಣೆ(Punjab Assembly Election 2022) ಮತ್ತು ಪಂಜಾಬ್ ನಮಗೆ ಬಹಳ ಮುಖ್ಯ ಮತ್ತು ಪಂಜಾಬ್ನ ಶಾಶ್ವತ ಸರ್ಕಾರ ನಮಗೆ ಮುಖ್ಯವಾಗಿದೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು. ಪಂಜಾಬ್ನ ಜನರು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ, ಗುರು ಗೋವಿಂದ್ ಸಿಂಗ್ ಅವರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ, ಗುರು ತೇಜ್ ಬಹದ್ದೂರ್ ಜಿ ಅವರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ಸಾಧ್ಯವಿಲ್ಲ. ಇದರೊಂದಿಗೆ ಮಾಸ್ಟರ್ ತಾರಾ ಸಿಂಗ್ ಕೂಡ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಪಂಜಾಬ್ ವಿಧಾನಸಭೆ ಚುನಾವಣೆಗೆ 34 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಬಿಡುಗಡೆ ಮಾಡಿದೆ. ಪಕ್ಷದ ಈ ಪಟ್ಟಿಯಲ್ಲಿ 12 ರೈತ ಕುಟುಂಬದ ಮುಖಂಡರು, 13 ಸಿಖ್ಖರು ಮತ್ತು ಎಂಟು ದಲಿತರಿಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ : Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ : ಫೆಬ್ರವರಿಯಲ್ಲಿ 12 ದಿನ ಬ್ಯಾಂಕ್ ಬಂದ್!
ಅಮರಿಂದರ್ ಸಿಂಗ್(Captain Amarinder Singh) ಅವರು 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಅಜಿತ್ಪಾಲ್ ಸಿಂಗ್ ಅವರನ್ನು ನಾಕೋಡರ್ ಮತ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲಾಗಿದೆ. ಅಮರಿಂದರ್ ಸ್ವತಃ ಪಟಿಯಾಲ ನಗರದಿಂದ ಸ್ಪರ್ಧೆ ಗಿಳಿದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.