ನಮ್ಮ ತಂದೆ ಜೈಲಿಗೆ ಹೋಗಲು ನಿತೀಶ್ ಕುಮಾರ್, ಬಿಜೆಪಿ ಕಾರಣ -ತೇಜಸ್ವಿ ಯಾದವ್

ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರು ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸಲು ಕಾರಣರಾಗಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.

Last Updated : May 14, 2019, 02:46 PM IST
ನಮ್ಮ ತಂದೆ ಜೈಲಿಗೆ ಹೋಗಲು ನಿತೀಶ್ ಕುಮಾರ್, ಬಿಜೆಪಿ  ಕಾರಣ -ತೇಜಸ್ವಿ ಯಾದವ್  title=
file photo

ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರು ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸಲು ಕಾರಣರಾಗಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಶ್ವಿ ಯಾದವ್ ಆರೋಪಿಸಿದ್ದಾರೆ.

"ನಳಂದದಲ್ಲಿ ನಿತೀಶ್ ಕುಮಾರ್ ಅವರು, ನಾವು ಲಾಲು ಜೈಲಿನಿಂದ ಹೊರಬರಲು ಅನುಮತಿ ನೀಡುವುದಿಲ್ಲವೆಂದು ಹೇಳಿದ್ದಾರೆ. ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರು ನನ್ನ ತಂದೆಯನ್ನು ಜೈಲಿಗೆ ಕಳುಹಿಸಲು ಕಾರಣರಾಗಿದ್ದಾರೆ ಎಂದು ಈ ಹೇಳಿಕೆ ತೋರಿಸುತ್ತದೆ" ಎಂದು ತೇಜಶ್ವಿ ಯಾದವ್ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದರು.

"ಮಾಜಿ ಸಿಬಿಐ ನಿರ್ದೇಶಕ ಕೂಡ  ಜೆಡಿ (ಯು) ಮತ್ತು ಬಿಜೆಪಿ ಪಕ್ಷಗಳು ಲಾಲು ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಕಳುಹಿಸುವುದಕ್ಕೆ ಕಾರಣಕರ್ತರಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಆರ್ಜೆಡಿ ನಾಯಕ ಆರೋಪಿಸಿದರು.ಲಾಲೂ ಪ್ರಸಾದ್ ಯಾದವ್ ಅವರು 1991 ಮತ್ತು 1996 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪಶುಪಾಲನಾ ಇಲಾಖೆಯಲ್ಲಿನ ಬಹು-ಕೋಟಿ ಮೇವು ಹಗರಣ ಪ್ರಕರಣದ ವಿಚಾರವಾಗಿ ಅವರಿಗೆ ಜೈಲು ಶಿಕ್ಷೆ ನೀಡಲಾಗಿದೆ. 

 "ಲಾಲು ಯಾದವ್ ವಿರುದ್ಧದ ಪ್ರಕರಣವು ಹೈಕೋರ್ಟ್ನಲ್ಲಿದೆ ಎಂದು ನಿತೀಶ್ ಕುಮಾರ್ ಅರ್ಥೈಸಿಕೊಳ್ಳಬೇಕು, ಆದ್ದರಿಂದ ಅವರು ಜೈಲಿಂದ ಹೊರಗೆ ಬರಬೇಕೋ ಅಥವಾ ಬೇಡವೋ ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ ಹೊರತು ನೀತಿಶ್ ಕುಮಾರ್ ಅಥವಾ ನರೇಂದ್ರ ಮೋದಿ ಅಲ್ಲ ಎಂದು ತೇಜಸ್ವಿ ಯಾದವ್ ಕಿಡಿಕಾರಿದರು.

ಇನ್ನು ಪಶ್ಚಿಮ ಬಂಗಾಳದ ಹಿಂಸಾಚಾರದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಯಾದವ್  "ಹಿಂಸಾಚಾರವನ್ನು ಬಿಜೆಪಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ನಡೆಸಿದ್ದಾರೆ ಎಂದರು.
 

Trending News