OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ?

ಶಾಲಾ ಬಸ್ ಚಾಲಕನಾಗಿರುವ ಈತ ತನ್ನ ವಿಶಿಷ್ಟ ಸಾಮರ್ಥ್ಯದಿಂದ ಆ ಸ್ಥಳದ ಸೆಲೆಬ್ರಿಟಿ ಎನಿಸಿಕೊಂಡಿದ್ದಾನೆ.

Last Updated : Dec 4, 2018, 10:40 AM IST
OMG! ನಾಲಿಗೆಯಿಂದ ತನ್ನ ಹಣೆಯನ್ನೇ ಮುಟ್ಟಿಸೋ ವ್ಯಕ್ತಿ ಬಗ್ಗೆ ಗೊತ್ತಾ? title=

ನವದೆಹಲಿ: ನಾವೆಲ್ಲಾ ಚಿಕ್ಕವರಾಗಿದ್ದಾಗ ನಾಲಿಗೆಯಿಂದ ಮೂಗು ಮುಟ್ಟಿಸುವ ಪ್ರಯತ್ನವನ್ನು ಮಾಡಿಯೇ ಇರುತ್ತೇವೆ. ಆದರೆ ಇಲ್ಲೊಬ್ಬ ತನ್ನ ನಾಲಿಗೆಯಿಂದ ಮೂಗನ್ನಲ್ಲ, ತನ್ನ ಹಣೆಯನ್ನು ಮುಟ್ಟಿಸುವ ಪ್ರಯತ್ನ ಮಾಡಿ ಸೈ ಎನಿಸಿಕೊಂಡಿದ್ದಾನೆ! ವಿಚಿತ್ರ ಅನಿಸುತ್ತಿದೆಯಲ್ಲವೇ? ಆದರೂ, ಇದು ಸತ್ಯ.

ನೇಪಾಳದ ಯಗ್ಯಾ ಬಹದೂರ್ ಕತುವಾಲ್(35) ಎಂಬಾತನೇ ತನ್ನ ನಾಲಿಗೆಯಿಂದ ಹಣೆಯನ್ನು ಮುಟ್ಟಿಸುವಂತಹ ಸಾಮರ್ಥ್ಯ ಹೊಂದಿರುವ ವಿಶೇಷ ವ್ಯಕ್ತಿ. ಶಾಲಾ ಬಸ್ ಚಾಲಕನಾಗಿರುವ ಈತ ತನ್ನ ವಿಶಿಷ್ಟ ಸಾಮರ್ಥ್ಯದಿಂದ ಆ ಸ್ಥಳದ ಸೆಲೆಬ್ರಿಟಿ ಎನಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಅದೇ ವಿಶೇಷತೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸುದ್ದಿಯಾಗಿರುವ ಈತ, ಗಿನ್ನಿಸ್ ರೆಕಾರ್ಡ್ ಮಾಡುವ ಇರಾದೆಯನ್ನೂ ಹೊಂದಿದ್ದಾನೆ.

Trending News