ಗಾಂಧಿ ಬಗ್ಗೆ ಗಾಂಧಿ ನಾಡಿನಲ್ಲಿಯೇ ಪಾಠ ಮಾಡಲು ಅವಕಾಶವಿಲ್ಲ - ಇತಿಹಾಸಕಾರ ರಾಮಚಂದ್ರ ಗುಹಾ

ಅಹಮದಾಬಾದ್ ವಿವಿಯಲ್ಲಿ ಗಾಂಧಿ ಅಧ್ಯಯನಕ್ಕೆ ಸಂಬಂಧಿಸಿದ ಕೋರ್ಸ್ಗೆ ಉಪನ್ಯಾಸ ನೀಡಲು ನೇಮಕವಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಈಗ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈಗ ಅವರು ಹಿಂದೆ ಸರಿದಿದ್ದಾರೆ.

Last Updated : Nov 2, 2018, 12:27 PM IST
ಗಾಂಧಿ ಬಗ್ಗೆ ಗಾಂಧಿ ನಾಡಿನಲ್ಲಿಯೇ ಪಾಠ ಮಾಡಲು ಅವಕಾಶವಿಲ್ಲ - ಇತಿಹಾಸಕಾರ ರಾಮಚಂದ್ರ ಗುಹಾ title=

ನವದೆಹಲಿ: ಅಹಮದಾಬಾದ್ ವಿವಿಯಲ್ಲಿ ಗಾಂಧಿ ಅಧ್ಯಯನಕ್ಕೆ ಸಂಬಂಧಿಸಿದ ಕೋರ್ಸ್ಗೆ ಉಪನ್ಯಾಸ ನೀಡಲು ನೇಮಕವಾಗಿದ್ದ ಇತಿಹಾಸಕಾರ ರಾಮಚಂದ್ರ ಗುಹಾ ಈಗ ಬಲಪಂಥೀಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಈಗ ಅವರು ಹಿಂದೆ ಸರಿದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಗುಹಾ" ಕೆಲವು ಸಂಗತಿಗಳು ನನ್ನ ನಿಯಂತ್ರನದಲ್ಲಿ ಇರದಿರುವುದರಿಂದ ನಾನು ಈಗ ಅಹಮದಾಬಾದ್ ವಿವಿಗೆ ನಾನು ಹೋಗುತ್ತಿಲ್ಲ, ನಾನು ವಿವಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ.ಈ ವಿವಿ ಉತ್ತಮ ಭೋದಕ ಸಿಬ್ಬಂಧಿಯನ್ನು ಮತ್ತು ಕುಲಪತಿಗಳನ್ನು ಹೊಂದಿದೆ. ಗಾಂಧಿಯ ಸ್ಫೂರ್ತಿ ಇನ್ನೊಮ್ಮೆ ಅವರ ನೆಲದಲ್ಲಿ ಹುಟ್ಟಿಬರಲಿ" ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ಗಾಂಧಿಯ ಜೀವನ ಚರಿತ್ರೆ ಬರೆದ ಲೇಖಕನಿಗೆ ಗಾಂಧಿ ಸ್ವಂತ ನೆಲದಲ್ಲಿಯೇ ಭೋದಿಸುವ ಅವಕಾಶವಿಲ್ಲ ಎಂದು ಗುಹಾ ಟ್ವೀಟ್ ಮಾಡಿದ್ದಾರೆ. ರಾಮಚಂದ್ರ ಗುಹಾ ಗಾಂಧೀ ಕುರಿತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಇತ್ತೀಚಿಗೆ "Gandhi: The Years That Changed the World, 1914-1948". ಎನ್ನುವ ಕೃತಿಯನ್ನು ರಚಿಸಿದ್ದರು.

Trending News