ರೈಲು ದುರಂತ: ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಬಿಹಾರ ಸಿಎಂ

ಭಾನುವಾರ ಬೆಳಗ್ಗೆ 3:58 ಗಂಟೆಗೆ ಸಹದಾಯಿ ಬುಜರ್ಗ್‌ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. 

Last Updated : Feb 3, 2019, 01:05 PM IST
ರೈಲು ದುರಂತ: ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ ಬಿಹಾರ ಸಿಎಂ title=

ಪಾಟ್ನಾ:  ಸೀಮಾಂಚಲ ಎಕ್ಸ್‌ಪ್ರೆಸ್ ರೈಲು ಬಿಹಾರದ ಸಹದಾಯಿ ಬುಜರ್ಗ್‌ ಎಂಬಲ್ಲಿ ಹಳಿತಪ್ಪಿದ್ದು ದುರಂತದಲ್ಲಿ ಈವರೆಗೂ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000ರೂ.ಪರಿಹಾರ ನೀಡುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.

ಸೀಮಾಂಚಲ್‌ ಎಕ್ಸ್‌ಪ್ರೆಸ್‌ ದುರಂತಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಮೃತರಿಗೆ ಸಂತಾಪ ಸೂಚಿಸಿದರು. ಜೊತೆಗೆ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000ರೂ.ಪರಿಹಾರ ನೀಡುವುದಾಗಿ ಘೋಷಿಸಿದರು. ಇದಲ್ಲದೆ ಗಾಯಾಳುಗಳಿಗೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದಾಗಿ ತಿಳಿಸಿದರು.

ಬಿಹಾರದ ಕಾತಿಹಾರ್ ಬಳಿ ರೈಲು ಆಗಮಿಸುತ್ತಿದ್ದಂತೆಯೇ ಎರಡು ಕೋಚ್ ಗಳನ್ನು ಕೂಡಿಸುವ ಕೊಂಡಿ ಕಳಚಿತ್ತು.  ಆದರೆ ಅದನ್ನು ಸೂಕ್ತ ರೀತಿಯಲ್ಲಿ ಮರು ಜೋಡಣೆ ಮಾಡುವ ಬದಲು ಕಳಪೆ ಜೋಡಣೆ ಮಾಡಲಾಗಿದೆ ಇದೇ ಬೋಗಿಗಳು ಹಳಿ ತಪ್ಪುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. 

Trending News