ಪಾಟ್ನಾ: ನಿತೀಶ್ ಕುಮಾರ್-ತೇಜಸ್ವಿ ಯಾದವ್ ನೇತೃತ್ವದ ನೂತನ ಬಿಹಾರ ಸರ್ಕಾರದ ಸಂಪುಟ ವಿಸ್ತರಣೆ ಆಗಸ್ಟ್ 16 ರಂದು ನಡೆಯಲಿದೆ ಎನ್ನಲಾಗಿದೆ.
ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಮುರಿದ ನಂತರ ಆರ್ಜೆಡಿ ಮೂಲಕ ಈಗ ನೂತನ ಸರ್ಕಾರ ರಚಿಸಿರುವ ನಿತೀಶ್ ಕುಮಾರ್-ತೇಜಸ್ವಿ ಯಾದವ್ ಜೋಡಿ ಈಗ ಆಗಸ್ಟ್ 16 ರಂದು ಸಂಪುಟ ವಿಸ್ತರಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: K Sudhakar : '60 ವರ್ಷ ಮೇಲ್ಪಟ್ಟವರು ಅತೀ ಬೇಗ 3ನೇ ಡೋಸ್, ಮಾಸ್ಕ್ ಕಡ್ಡಾಯ'
2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಿತೀಶ್ ಕುಮಾರ್ ಅವರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಮತ್ತು ಅಧಿಕಾರದ ಹಸಿವು ಅವರನ್ನು ತಮ್ಮ ಪಕ್ಷದೊಂದಿಗಿನ ಮೈತ್ರಿಯಿಂದ ದೂರ ಸರಿಯುವಂತೆ ಮಾಡಿದೆ ಎಂದು ಈಗ ಬಿಜೆಪಿ ದೂರಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಯು ಬಿಜೆಪಿ ಪಕ್ಷವು ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಅವರನ್ನು ಸಿಎಂ ಮಾಡಿದಂತೆ ಇಲ್ಲಿಯೂ ಕೂಡ ಅದೇ ಪರಿಸ್ಥಿತಿಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ
ಮಾಧ್ಯಮ ವರದಿಗಳ ಪ್ರಕಾರ ಹೊಸ ಜೆಡಿಯು-ಆರ್‌ಜೆಡಿ ಕ್ಯಾಬಿನೆಟ್ ಕುರಿತು ಇನ್ನೂ ಯಾವುದೇ ಅಧಿಕೃತ ಮಾಹಿತಿಗಳಿಲ್ಲ, ಆದರೆ ಈಗ ನಿತೀಶ್ ಕುಮಾರ್ ಮತ್ತು ಯಾದವ್ ಇಬ್ಬರೂ ತಮ್ಮ ಹೊಸ ವ್ಯವಸ್ಥೆಯ ರೂಪುರೇಷೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕರೋನಾ ಹೆಚ್ಚಳ: ರಾಷ್ಟ್ರ ರಾಜಧಾನಿಯಲ್ಲಿ ಮಾಸ್ಕ್ ಕಡ್ಡಾಯ
ವರದಿಗಳ ಪ್ರಕಾರ ಸಚಿವ ಸಂಪುಟದಲ್ಲಿ ಜೆಡಿಯುನಿಂದ 9 ಮತ್ತು ಆರ್ಜೆಡಿಯಿಂದ 9 ಸಚಿವರಿರಲಿದ್ದಾರೆ. ಇದೆ ವೇಳೆ ತೇಜಸ್ವಿ ಯಾದವ್ ಅವರು ಗೃಹ ಖಾತೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.ಸ್ಪೀಕರ್ ಹುದ್ದೆಯನ್ನು ತಮ್ಮ ಪಕ್ಷಕ್ಕೆ ನೀಡಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.