Ayodhya Ram Mandir : ಡಿಸೆಂಬರ್ 2023ರಿಂದ ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರಿಗೆ ಶ್ರೀರಾಮ ದರ್ಶನ

ಮೂಲಗಳ ಪ್ರಕಾರ, ರಾಮಮಂದಿರದ ಗರ್ಭಗುಡಿ ನಿರ್ಮಾಣ ಕಾರ್ಯವು 2023ರ  ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025 ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ.

Written by - Ranjitha R K | Last Updated : Aug 4, 2021, 07:51 PM IST
  • ಶ್ರೀರಾಮ ಭಕ್ತರಿಗೊಂದು ಶುಭ ಸುದ್ದಿ
  • ಡಿಸೆಂಬರ್ 2023 ರ ವೇಳೆಗೆ ಗರ್ಭಗುಡಿ ನಿರ್ಮಾಣ ಪೂರ್ಣ
  • 1000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಭವ್ಯ ರಾಮ ಮಂದಿರ
Ayodhya Ram Mandir : ಡಿಸೆಂಬರ್ 2023ರಿಂದ  ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರಿಗೆ ಶ್ರೀರಾಮ ದರ್ಶನ title=
ಡಿಸೆಂಬರ್ 2023 ರ ವೇಳೆಗೆ ಗರ್ಭಗುಡಿ ನಿರ್ಮಾಣ ಪೂರ್ಣ (file photo)

ನವದೆಹಲಿ : ಅಯೋಧ್ಯೆಯಲ್ಲಿ ಶ್ರೀ ರಾಮನ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೆ ಒಳ್ಳೆಯ ಸುದ್ದಿ ಇದೆ. ಅಯೋಧ್ಯೆಯ ರಾಮ ಮಂದಿರದಲ್ಲಿ (Ayodhya Ram mandir) ಶ್ರೀ ರಾಮನ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿರುವ ರಾಮ ಭಕ್ತರ ಆಸೆ ಶೀಘ್ರದಲ್ಲೇ ಈಡೇರಲಿವೆ. ಡಿಸೆಂಬರ್ 2023 ರಿಂದ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಬಹುದು. ಶ್ರೀ ರಾಮನ ದರ್ಶನ ಪಡೆಯಬಹುದು. 

ಮೂಲಗಳ ಪ್ರಕಾರ, ರಾಮಮಂದಿರದ (Ram mandir) ಗರ್ಭಗುಡಿ ನಿರ್ಮಾಣ ಕಾರ್ಯವು 2023ರ  ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ. 2025 ರ ವೇಳೆಗೆ ಭವ್ಯ ರಾಮ ಮಂದಿರದ ನಿರ್ಮಾಣ ಕೂಡ ಪೂರ್ಣಗೊಳ್ಳಲಿದೆ. ಮಗುವಿನ ರೂಪದಲ್ಲಿ ಗರ್ಭಗುಡಿಯಲ್ಲಿ ಶ್ರೀ ರಾಮನನ್ನು ಪ್ರತಿಷ್ಟಾಪಿಸಲಾಗುವುದು.  ಮೊದಲ ಮಹಡಿಯಲ್ಲಿ ರಾಮನ ಆಸ್ಥಾನ ಇರುತ್ತದೆ. ಇಲ್ಲಿ ಶ್ರೀರಾಮನ ಜೊತೆಯಲ್ಲಿ ಸೀತಾ ಮಾತೆ (Seetha maa) ಕೂಡಾ ವಿರಾಜಮಾನರಾಗಲಿದ್ದಾರೆ. ಇಡೀ ಪ್ರದೇಶ 110 ಎಕರೆಗಳನ್ನು ಒಳಗೊಂಡಿದೆ. ರಾಮ ಮಂದಿರದ ಮುಖ್ಯ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾಗುವುದು. 

ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಸಂಬಳದಲ್ಲಿ ಶೇ.28 ರಷ್ಟು DA ಹಣ ಜಮಾ!

1000 ಕೋಟಿ ವೆಚ್ಚದಲ್ಲಿ ಮಂದಿರ್ ನಿರ್ಮಾಣ : 
ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 1000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಇಲ್ಲಿಯವರೆಗೆ, NRI ಗಳು ಕಳುಹಿಸಿದ ದೇಣಿಗೆ (Donation) ಬಿಟ್ಟು, ಸುಮಾರು 3000 ಕೋಟಿ ರೂಪಾಯಿಗಳನ್ನು ರಾಮಮಂದಿರ ಟ್ರಸ್ಟ್‌ ವತಿಯಿಂದ (Ram Mandit Trust) ದೇಣಿಗೆಯಾಗಿ ಸ್ವೀಕರಿಸಲಾಗಿದೆ.  ರಾಮ ಮಂದಿರ ನಿರ್ಮಾಣದಲ್ಲಿ ಸ್ಟೀಲ್ ಅನ್ನು ಬಳಸುತ್ತಿಲ್ಲ. ದೇವಸ್ಥಾನದಲ್ಲಿ ಉಕ್ಕಿನ ಬದಲು ತಾಮ್ರವನ್ನು ಬಳಸಲಾಗುವುದು. ಕಾರ್ ಸೇವಕ ಪುರಂನಲ್ಲಿ, ಕೆತ್ತಿದ ಕಲ್ಲುಗಳ 70 ಪ್ರತಿಶತವನ್ನು ಬಳಸಲಾಗುತ್ತದೆ. ಉಳಿದ ಕಲ್ಲುಗಳನ್ನು ರಾಜಸ್ಥಾನದ ಬನ್ಶಿ ಪಹರ್‌ಪುರದಿಂದ ತರಿಸಲಾಗುವುದು.  

ಮಂದಿರದ ಕೆಳಗೆ 3 ಮಹಡಿಗಳವರೆಗೆ ಉತ್ಖನನ : 
ದೇವಾಲಯದ ನಿರ್ಮಾಣಕ್ಕಾಗಿ ಆಳವಾದ ಉತ್ಖನನದ ಕೆಲಸದಿಂದಾಗಿ ಒಂದು ವರ್ಷದಲ್ಲಿ ದೇವಾಲಯ ನಿರ್ಮಾಣ ವಿಳಂಬವಾಯಿತು. ಈ ಉತ್ಖನನವನ್ನು ಭೂಮಿಯಿಂದ ಕೆಳಗೆ ಸುಮಾರು  3 ಮಹಡಿಗಳವರೆಗೆ ಮಾಡಲಾಗಿದೆ. ಐಐಟಿಯ (IIT) ವಿವಿಧ ಸಂಸ್ಥೆಗಳಿಂದ ಸಲಹೆಗಳನ್ನು ಪಡೆದು, ಈ ಕಾರ್ಯ ಮಾಡಲಾಗಿದೆ. ದೇವಾಲಯವು ಭೂಕಂಪ ನಿರೋಧಿಯಾಗಿರಬೇಕು. ಪುರಾತನ ಮತ್ತು ಆಧುನಿಕ ತಂತ್ರಜ್ಞಾನಗಳ ಮಿಶ್ರಣವಾಗಿರಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ದೇವಾಲಯದ ಆವರಣದಲ್ಲಿ ಮ್ಯೂಸಿಯಂ (Museum), ಸಂಶೋಧನಾ ಕೇಂದ್ರ (Research Center) ಮತ್ತು ಆರ್ಕೈವ್ ಸೆಂಟರ್ (Archive Center) ಕೂಡ ಇರುತ್ತದೆ.

ಇದನ್ನೂ ಓದಿ : ನಿಮ್ಮ ಬಳಿಯೂ ಈ ಬ್ಯಾಂಕಿನ ರುಪೆ ಪ್ಲಾಟಿನಮ್ ಡೆಬಿಟ್ ಕಾರ್ಡ್ ಇದ್ದರೆ ಸಿಗಲಿದೆ ಎರಡು ಲಕ್ಷ ರೂಪಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News