ರತ್ನಗಿರಿಯಲ್ಲಿ ಬೃಹತ್ ಗಾತ್ರದ ಮೀನು ಪತ್ತೆ! ತೂಕ ಎಷ್ಟು ಗೊತ್ತಾ?

ಮಹಾರಾಷ್ಟ್ರದ ರತ್ನಗಿರಿಯ ಮೀನುಗಾರರೊಬ್ಬರು ಬೀಸಿದ್ದ ಬಲೆಗೆ ಬರೋಬ್ಬರಿ 500 ಕೆ.ಜಿ. ತೂಕದ 4 ವಘಿಲ್ ಮೀನುಗಳು ಸಿಕ್ಕಿವೆ. 

Last Updated : Jan 9, 2019, 04:02 PM IST
ರತ್ನಗಿರಿಯಲ್ಲಿ ಬೃಹತ್ ಗಾತ್ರದ ಮೀನು ಪತ್ತೆ! ತೂಕ ಎಷ್ಟು ಗೊತ್ತಾ? title=

ರತ್ನಗಿರಿ: ಸಾಮಾನ್ಯವಾಗಿ ಮೀನುಗಾರಿಕೆ ಸಂದರ್ಭದಲ್ಲಿ ಸಿಗುವ ಮೀನುಗಳಲ್ಲಿ ಬೃಹತ್ ಗಾತ್ರದ ಮೀನು ಎಂದರೆ 100 ಕೆ.ಜಿ. ಅಥವಾ 200 ಕೆ.ಜಿ. ಇರಬಹುದು. ಆದ್ರೆ ಮಹಾರಾಷ್ಟ್ರದ ರತ್ನಗಿರಿಯ ಮೀನುಗಾರರೊಬ್ಬರು ಬೀಸಿದ್ದ ಬಲೆಗೆ ಬರೋಬ್ಬರಿ 500 ಕೆ.ಜಿ. ತೂಕದ 4 ವಘಿಲ್ ಮೀನುಗಳು ಸಿಕ್ಕಿವೆ.  ಈ ಮೀನುಗಳನ್ನು ಕ್ರೇನ್ ಬಳಸಿ ದಡಕ್ಕೆ ತರಲಾಗಿದೆ. 

ವಘಿಲ್ ಮೀನುಗಳು ಸಾಮಾನ್ಯವಾಗಿ 50-60 ಕೆ.ಜಿ ತೂಗುತ್ತವೆ. ಆದರೆ, ಇಂದು ಬಲೆಯಲ್ಲಿ ಸಿಕ್ಕ ಸಿಕ್ಕ ನಾಲ್ಕು ಮೀನುಗಳಲ್ಲಿ ಪ್ರತಿಯೊಂದೂ ಬರೋಬ್ಬರಿ 500 ಕೆ.ಜಿ. ತೂಕ ಇವೆ. ದೈತ್ಯ ಗಾತ್ರದ ಮೀನುಗಳು ಸಿಕ್ಕ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆಯೇ ಜನರು ಮೀನುಗಳನ್ನು ನೋಡಲು ಮುಗಿಬಿದ್ದಿದ್ದಾರೆ. 

ಈ ದೈತ್ಯ ಗಾತ್ರದ ಒಂದೊಂದು ಮೀನಿನ ಬೆಲೆ ಬರೋಬ್ಬರಿ 15 ಸಾವಿರದಿಂದ 20 ಸಾವಿರ ರೂ.ಗಳು!

Trending News