ಸಿಎಂ ಆಗಿ ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಭಗವಂತ್ ಮಾನ್ ಮಹತ್ವದ ನಿರ್ಧಾರ, ಮಾಜಿ ಸಚಿವರ ಭದ್ರತೆ ಹಿಂದಕ್ಕೆ

Punjab Assembly Election 2022: ಭಗವಂತ್ ಮಾನ್ ಅವರು ತಮ್ಮದೇ ಪಕ್ಷದ ಮಾಜಿ ಶಾಸಕ ಅಮರ್‌ಜಿತ್ ಸಿಂಗ್ ಅವರ ಭದ್ರತೆಯನ್ನು ಹಿಂಪಡೆದಿದ್ದಾರೆ. ಸುಮಾರು 369 ಸೈನಿಕರು ಮತ್ತು ಕಮಾಂಡೋಗಳನ್ನು ಭದ್ರತೆಯಿಂದ ತೆಗೆದುಹಾಕಲಾಗಿದೆ.

Written by - Ranjitha R K | Last Updated : Mar 12, 2022, 03:17 PM IST
  • ಪಂಜಾಬ್‌ನಲ್ಲಿ AAP 92 ಸ್ಥಾನಗಳನ್ನು ಗೆದ್ದಿದೆ
  • ಮಾರ್ಚ್ 16 ರಂದು ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
  • 122 ನಾಯಕರಿಂದ ಭದ್ರತೆ ಹಿಂದಕ್ಕೆ
ಸಿಎಂ ಆಗಿ ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಭಗವಂತ್ ಮಾನ್ ಮಹತ್ವದ ನಿರ್ಧಾರ, ಮಾಜಿ ಸಚಿವರ ಭದ್ರತೆ ಹಿಂದಕ್ಕೆ  title=
122 ನಾಯಕರಿಂದ ಭದ್ರತೆ ಹಿಂದಕ್ಕೆ (file photo)

ಚಂಡೀಗಢ : ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನವೇ ಭಗವಂತ್ ಮಾನ್ (Bhagawant Mann) ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಎಲ್ಲಾ ಮಾಜಿ ಸಚಿವರು ಮತ್ತು ಶಾಸಕರ ಭದ್ರತೆಯನ್ನು ಹಿಂಪಡೆಯಲು ಭಗವಂತ್ ಮಾನ್ ನಿರ್ಧರಿಸಿದ್ದಾರೆ (MLA Security). ಭಗವಂತ್ ಮಾನ್ ಸುಮಾರು 122 ನಾಯಕರ ಭದ್ರತೆಯನ್ನು ಹಿಂಪಡೆದಿದ್ದಾರೆ.

ರಾಜಾ ವಡಿಂಗ್ ಗೆ ಅತ್ಯಧಿಕ ಭದ್ರತೆ :
ಸುಮಾರು 369 ಪೊಲೀಸ್ (Police) ಸಿಬ್ಬಂದಿ ಮತ್ತು ಕಮಾಂಡೋಗಳನ್ನು ಭದ್ರತೆಯಿಂದ ತೆಗೆದುಹಾಕಲಾಗಿದೆ (MLA Security). ಈ ಪಟ್ಟಿಯ ಪ್ರಕಾರ ರಾಜಾ ವಡಿಂಗ್ ಅವರಿಗೆ ಹೆಚ್ಚಿನ ಭದ್ರತೆ ವಹಿಸಲಾಗಿತ್ತು.

ಇದನ್ನೂ ಓದಿ : UGC Big Announcement: ವಿಶ್ವವಿದ್ಯಾಲಯಗಳಲ್ಲಿ ಪಾಠ ಹೇಳಲು PhD ಅನಿವಾರ್ಯವಲ್ಲ

ವೇಣು ಪ್ರಸಾದ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ : 
ಭಗವಂತ್ ಮಾನ್ (Bhagwant Maan) ಅವರು ತಮ್ಮದೇ ಪಕ್ಷದ ಮಾಜಿ ಶಾಸಕ ಅಮರ್ ಜೀತ್ ಸಿಂಗ್ (Amar Jeeth Singh) ಅವರ ಭದ್ರತೆಯನ್ನು ಹಿಂಪಡೆದಿದ್ದಾರೆ. ಇದಲ್ಲದೇ ವೇಣು ಪ್ರಸಾದ್ (Venu Prasad) ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಭಗವಂತ್ ಮಾನ್ ನೇಮಕ ಮಾಡಿದ್ದಾರೆ. 

ಪಂಜಾಬ್‌ನಲ್ಲಿ ಎಎಪಿ ಬಹುಮತ :
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಭಾರೀ ಬಹುಮತ ಲಭಿಸಿದೆ. ಪಂಜಾಬ್‌ನ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನ ಆಪ್  ಗೆದ್ದಿದೆ. ಪಕ್ಷದ  ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮಾರ್ಚ್ 16 ರಂದು 12.30 ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ  : JCB ಇರಲಿ, ಕ್ರೇನ್ ಇರಲಿ 11 ಬಗೆಯ ವಾಹನ ಓಡಿಸುವುದರಲ್ಲಿ ನಿಪುಣರು71 ವರ್ಷದ ಈ ಅಜ್ಜಿ!

ಭಗವಂತ್ ಮಾನ್ ಅವರು ಶಹೀದ್ ಭಗತ್ ಸಿಂಗ್ ಅವರ ಗ್ರಾಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಗವಂತ್ ಮಾನ್ ಅವರು ಇಂದು ಪಂಜಾಬ್‌ನ ರಾಜಭವನದಲ್ಲಿ ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ತಮ್ಮ ಸರ್ಕಾರವು ಉತ್ತಮ ಸಚಿವ ಸಂಪುಟವನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ. ಆದರೂ ಅವರು ಇನ್ನೂ ಮಂತ್ರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News