ಮಾರ್ಚ್ 5ಕ್ಕೆ PF ಕುರಿತ ಈ ದೊಡ್ಡ ಸುದ್ದಿ ಹೊರಬೀಳುವ ಸಾಧ್ಯತೆ!

ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಮಾರ್ಚ್ 5 ರಂದು ಸಭೆ ಸೇರಲಿದೆ. ಸಭೆಯಲ್ಲಿ ಇಪಿಎಫ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಲಾಗುತ್ತಿದೆ.

Last Updated : Mar 2, 2020, 02:06 PM IST
ಮಾರ್ಚ್ 5ಕ್ಕೆ PF ಕುರಿತ ಈ ದೊಡ್ಡ ಸುದ್ದಿ ಹೊರಬೀಳುವ ಸಾಧ್ಯತೆ! title=

ನವದೆಹಲಿ: ಭವಿಷ್ಯನಿಧಿ ಖಾತೆದಾರರಿಗೆ ಶೀಘ್ರವೇ ಒಂದು ಒಳ್ಳೆಯ ಸುದ್ದಿ ಬರಲಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಸಕ್ತ ಹಣಕಾಸು ವರ್ಷದ ಬಡ್ಡಿದರಗಳನ್ನು ಶೀಘ್ರ ಪ್ರಕಟಿಸುವ ಸಾಧ್ಯತೆ ಇದ್ದು, ಈ ವರ್ಷವೂ ಕೂಡ ಬಡ್ಡಿದರಗಳಲ್ಲಿ ಯಾವುದೇ ರೀತಿಯ ಕಡಿತ ಇರುವುದಿಲ್ಲ ಎನ್ನಲಾಗಿದೆ. ಹಿಂದಿನ ಹಣಕಾಸು ವರ್ಷದಂತೆ, ಈ ಬಾರಿಯೂ ನಿಮ್ಮ ಪಿಎಫ್ ಖಾತೆಗೆ ಶೇ .8.65 ರಷ್ಟು ದರದಲ್ಲಿ ಬಡ್ಡಿ ಸಿಗಲಿದೆ. ಮೂಲಗಳ ಪ್ರಕಾರ, ಪ್ರಸ್ತುತ, ಬಡ್ಡಿದರವನ್ನು ಶೇಕಡಾ 8.65 ಕ್ಕೆ ಇಡಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಹೀಗಾಗಿ ಬಡ್ಡಿದರವನ್ನು ಎಷ್ಟಕ್ಕೆ ನಿಗದಿಪಡಿಸಬೇಕು ಎಂಬ ನಿರ್ಣಯ ಮಾರ್ಚಿ 5 ಕ್ಕೆ ಹೊರಬೀಳಲಿದೆ.

CBT ಸಭೆಯಲ್ಲಿ ಈ ನಿರ್ಣಯ ಹೊರಬೀಳುವ ಸಾಧ್ಯತೆ
ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (ಸಿಬಿಟಿ) ಮಾರ್ಚ್ 5 ರಂದು ಸಭೆ ಸೇರಲಿದೆ. ಸಭೆಯಲ್ಲಿ ಇಪಿಎಫ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಲಾಗುತ್ತಿದೆ. ಮೂಲಗಳ ಪ್ರಕಾರ, ಸಭೆಯಲ್ಲಿ ಬಡ್ಡಿದರವನ್ನು ಕಾಯ್ದುಕೊಳ್ಳುವ ಸಾಧ್ಯತೆ ಇದೆ. 2019-20ರ ಆರ್ಥಿಕ ವರ್ಷದಲ್ಲಿ ಇಪಿಎಫ್ ಮೇಲಿನ ಬಡ್ಡಿ ದರ ಶೇಕಡಾ 8.65 ರಷ್ಟು ಇರಬೇಕು ಹಾಗೂ ಈ ನಿರ್ಧಾರಕ್ಕೆ ಕಾರ್ಮಿಕ ಸಚಿವರೂ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ಜಾಗತಿಕ ಆರತಿಗ ಹಿನ್ನೆಡೆಯ ಭೀತಿಯ ಹಿನ್ನೆಲೆ ಈ ಬಾರಿ ಇಪಿಎಫ್‌ಒ ತನ್ನ ಬಡ್ಡಿದರ ಎಂಬ ಭೀತಿ ಪಸರಿಸಿತ್ತು.

ಬದಲಾವಣೆಯ ಸಾಧ್ಯತೆ ಯಾಕೆ ಇಲ್ಲ
ಮೂಲಗಳ ಪ್ರಕಾರ, ಮಾರ್ಚ್ 5 ರಂದು ನಡೆಯಲಿರುವ ಸಿಬಿಟಿ ಸಭೆಯ ಕಾರ್ಯಸೂಚಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಸುದ್ದಿ ಸಂಸ್ಥೆ ಪಿಟಿಐನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಇಪಿಎಫ್‌ಒನ ಒಟ್ಟು ಆದಾಯದ ಅಂದಾಜು ಮಾಡುವುದು ಕಷ್ಟ. ಆದ್ದರಿಂದ, ಹೊಸ ಬಡ್ಡಿದರವನ್ನು ನಿರ್ಧರಿಸಲು ಸಂಸ್ಥೆಗೆ ಸ್ವಲ್ಪ ಕಷ್ಟಕರವಾಗಲಿದೆ ಎನ್ನಲಾಗಿದೆ. ಹಿಂದಿನ ಹಣಕಾಸು ವರ್ಷದಂತೆ ಬಡ್ಡಿದರವನ್ನು ಕಾಯ್ದುಕೊಳ್ಳಲು ಇದನ್ನು ಪರಿಗಣಿಸಲು ಇದು ಪ್ರಮುಖ ಕಾರಣವಾಗಿದೆ.

ಬಡ್ಡಿದರ ಸಣ್ಣ ಉಳಿತಾಯ ಯೋಜನೆಗಳಿಗೆ ಸಮನಾಗಿ ಇರಲಿದೆ
ಇಪಿಎಫ್ ಬಡ್ಡಿದರವನ್ನು ಸಣ್ಣ ಉಳಿತಾಯ ಯೋಜನೆಗಳಿಗೆ ಸಮನಾಗಿಡಲು ಹಣಕಾಸು ಸಚಿವಾಲಯವು ಕಾರ್ಮಿಕ ಸಚಿವಾಲಯಕ್ಕೆ ಮನವರಿಕೆ ಮಾಡಲು ಈ ಮೊದಲಿನಿಂದಲೂ ಕೂಡ ಪ್ರಯತ್ನಿಸುತ್ತಿದೆ. ಸಣ್ಣ ಉಳಿತಾಯ ಯೋಜನೆಗಳು, ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ಇತರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು ಒಳಗೊಂಡಿದೆ.

ಯಾವ ವರ್ಷ EPF ಬಡ್ಡಿದರ ಎಷ್ಟಿತ್ತು?
ಇದು 2013-14 ಮತ್ತು 2014-15ರ ಆರ್ಥಿಕ ವರ್ಷಗಳಲ್ಲಿ ಶೇ 8.75 ರಷ್ಟಿತ್ತು.
ಇದು 2015-16ರ ಹಣಕಾಸು ವರ್ಷದಲ್ಲಿ ಶೇ 8.8 ರಷ್ಟಿತ್ತು.
2016-17ರ ಹಣಕಾಸು ವರ್ಷದಲ್ಲಿ ಶೇ 8.65 ರಷ್ಟು ಬಡ್ಡಿದರ.
2017-18ರ ಹಣಕಾಸು ವರ್ಷದಲ್ಲಿ ಅದು ಶೇ 8.55 ರಷ್ಟಿತ್ತು.
2018-19ರ ಹಣಕಾಸು ವರ್ಷದಲ್ಲಿ ಅದು ಶೇ 8.65 ರಷ್ಟಿತ್ತು.

Trending News