Bank Holidays: ಇಂದಿನಿಂದ 6 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

Bank Holidays 2021 December: ಇಂದಿನಿಂದ ಅಂದರೆ ಡಿಸೆಂಬರ್ 24 ರಿಂದ 6 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಬ್ಯಾಂಕಿಗೆ ತೆರಳುವ ಮುನ್ನ ಇಲ್ಲಿ ಒಮ್ಮೆ ಪಟ್ಟಿಯನ್ನು ಪರಿಶೀಲಿಸಿ. 

Written by - Zee Kannada News Desk | Last Updated : Dec 24, 2021, 10:45 AM IST
  • ಡಿಸೆಂಬರ್‌ನಲ್ಲಿ 16 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ
  • ಪ್ರಮುಖ ಬ್ಯಾಂಕ್ ಕೆಲಸಗಳಿಗಾಗಿ ತೆರಳುವ ಮೊದಲು ಈ ರಜಾ ಪಟ್ಟಿಯನ್ನು ಪರಿಶೀಲಿಸಿ
  • ಇಂದಿನಿಂದ 6 ದಿನ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
Bank Holidays: ಇಂದಿನಿಂದ 6 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ title=
Bank holiday list in december

Bank Holidays 2021 December: ವರ್ಷದ ಕೊನೆಯ ತಿಂಗಳ ಅಂತ್ಯಕ್ಕೆ ಅಂದರೆ ಡಿಸೆಂಬರ್ 2021 ಮುಕ್ತಾಯಕ್ಕೆ ಕೇವಲ 8 ದಿನಗಳು ಮಾತ್ರ ಬಾಕಿ ಉಳಿದಿವೆ. ಅಂದರೆ, ಇನ್ನು 8 ದಿನಗಳ ಬಳಿಕ ಹೊಸ ವರ್ಷ ಬರಲಿದೆ. ಏತನ್ಮಧ್ಯೆ, ಬ್ಯಾಂಕ್‌ಗೆ ಸಂಬಂಧಿಸಿದ ಹಲವು ಕೆಲಸಗಳನ್ನು  ಈ ತಿಂಗಳ ಅಂತ್ಯದೊಳಗೆ ಮುಗಿಸಿಕೊಳ್ಳುವುದು ಅವಶ್ಯಕ. ಆದರೆ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸಕ್ಕಾಗಿ ಬ್ಯಾಂಕಿಗೆ ತೆರಳುವ ಮುನ್ನ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸಿ. 

ವಾಸ್ತವವಾಗಿ, ಆರ್‌ಬಿಐ ಬಿಡುಗಡೆ ಮಾಡಿದ ರಜಾದಿನಗಳ ಪಟ್ಟಿಯ ಪ್ರಕಾರ, ಡಿಸೆಂಬರ್‌ನಲ್ಲಿ ಇಂದಿನಿಂದ ಬ್ಯಾಂಕ್‌ನಲ್ಲಿ 6 ರಜಾದಿನಗಳು ಇರುತ್ತವೆ. ಆದಾಗ್ಯೂ, ಈ ರಜಾದಿನಗಳಲ್ಲಿ ಹೆಚ್ಚಿನವು ಸ್ಥಳೀಯ ರಜಾದಿನಗಳಾಗಿವೆ. 

ಡಿಸೆಂಬರ್‌ನಲ್ಲಿ (Bank Holidays) 16 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಇದರಲ್ಲಿ 4 ರಜಾದಿನಗಳು ಭಾನುವಾರದಂದು ಇದೆ. ಈ ಅನೇಕ ರಜಾದಿನಗಳು ನಿರಂತರವಾಗಿ ಬಿದ್ದಿವೆ. ಈ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬ ಇದೆ. ದೇಶದ ಬಹುತೇಕ ಎಲ್ಲಾ ಬ್ಯಾಂಕುಗಳಲ್ಲಿ ಇದಕ್ಕೆ ರಜೆ ಇರಲಿದೆ. ಆದಾಗ್ಯೂ, ಕೆಲವು ರಜಾದಿನಗಳು ಸ್ಥಳೀಯ ರಜಾ ಆಗಿರುವುದರಿಂದ, ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದು ದೇಶದ ಎಲ್ಲಾ ಭಾಗಗಳಲ್ಲಿ ಅನ್ವಯವಾಗುವುದಿಲ್ಲ.

ಇದನ್ನೂ ಓದಿ-  ಡಿಸೆಂಬರ್ 31 ರ ಮೊದಲು ಈ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಿ, ಇಲ್ಲವಾದರೆ ತಪ್ಪಿದ್ದಲ್ಲ ನಷ್ಟ

ಆರ್‌ಬಿಐ (RBI) ಮಾರ್ಗಸೂಚಿಗಳ ಪ್ರಕಾರ, ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಇಲ್ಲಿ ಡಿಸೆಂಬರ್ ತಿಂಗಳ ಆರ್‌ಬಿಐ ಪಟ್ಟಿಯ ಜೊತೆಗೆ, ಯಾವ ರಾಜ್ಯದಲ್ಲಿ ಯಾವ ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- New Pension System: ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ಸಿಗಬೇಕೆಂದರೆ ಈ ಸಣ್ಣ ಕೆಲಸ ಮಾಡಿ

ಇಂದಿನಿಂದ ಎಲ್ಲೆಲ್ಲಿ ಬ್ಯಾಂಕ್ ರಜೆ ಇರಲಿದೆ, ಈ ಪಟ್ಟಿಯನ್ನು ಪರಿಶೀಲಿಸಿ:
24 ಡಿಸೆಂಬರ್ - ಕ್ರಿಸ್ಮಸ್ ಹಬ್ಬ (ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟವು)
25 ಡಿಸೆಂಬರ್ - ಕ್ರಿಸ್ಮಸ್ ಮತ್ತು ತಿಂಗಳ ನಾಲ್ಕನೇ ಶನಿವಾರ 
26 ಡಿಸೆಂಬರ್ - ಭಾನುವಾರ (ವಾರದ ರಜೆ)
27 ಡಿಸೆಂಬರ್ - ಕ್ರಿಸ್ಮಸ್ ಆಚರಣೆ (ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ)
30 ಡಿಸೆಂಬರ್ - ಯು ಕಿಯಾಂಗ್ ನೊಂಗ್‌ಬಾಹ್ (ಶಿಲ್ಲಾಂಗ್‌ನಲ್ಲಿ  ಬ್ಯಾಂಕ್‌ಗಳಿಗೆ ರಜೆ)
31 ಡಿಸೆಂಬರ್ - ಹೊಸ ವರ್ಷದ ಸಂಜೆ (ಐಜ್ವಾಲ್‌ನಲ್ಲಿ ಬ್ಯಾಂಕ್‌ಗಳಿಗೆ ರಜೆ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News