ಏಪ್ರಿಲ್‌ನಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ

ಏಪ್ರಿಲ್‌ನಲ್ಲಿ ಒಂದೆರಡು ದಿನವಲ್ಲ ಒಟ್ಟು 12 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ದರಿಂದ ಬ್ಯಾಂಕಿಗೆ ಹೋಗುವ ಮೊದಲು ಬ್ಯಾಂಕುಗಳಿಗೆ ರಜೆ ಇದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿ.

Last Updated : Apr 2, 2020, 03:17 PM IST
ಏಪ್ರಿಲ್‌ನಲ್ಲಿ 12 ದಿನ ಬ್ಯಾಂಕುಗಳಿಗೆ ರಜೆ  title=

ನವದೆಹಲಿ : ದೇಶದಲ್ಲಿ ಲಾಕ್‌ಡೌನ್ ನಡುವೆಯೂ  ಎಲ್ಲಾ ಬ್ಯಾಂಕುಗಳು  ಕಾರ್ಯನಿರ್ವಹಿಸುತ್ತಿವೆ, ಆದರೆ ಏಪ್ರಿಲ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ನಿಮಗೆ ತಿಳಿದಿದೆಯೇ. ಇಲ್ಲದಿದ್ದರೆ, ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಏಪ್ರಿಲ್‌ನಲ್ಲಿ ಒಂದೆರಡು ದಿನವಲ್ಲ ಒಟ್ಟು 12 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ದರಿಂದ ಬ್ಯಾಂಕಿಗೆ ಹೋಗುವ ಮೊದಲು ಬ್ಯಾಂಕುಗಳಿಗೆ ರಜೆ ಇದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿ.

ಆರ್‌ಬಿಐ ವೆಬ್‌ಸೈಟ್ ಪ್ರಕಾರ, ಈ ತಿಂಗಳು ಬ್ಯಾಂಕುಗಳಿಗೆ 12 ದಿನ ರಜೆ ಇರಲಿದೆ. ಇದು ದೇಶದ ಎಲ್ಲಾ ರಾಜ್ಯಗಳ ರಜಾದಿನಗಳನ್ನು ಒಳಗೊಂಡಿದೆ. ಈ ಸಮಯದಲ್ಲಿ, ನೀವು ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸ ಹೊಂದಿದ್ದರೆ ಬ್ಯಾಂಕಿಗೆ ತೆರಳುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ.

ದಿನಾಂಕ   ದಿನ  ರಜೆಗೆ ಕಾರಣ
5 ಎಪ್ರಿಲ್ ಭಾನುವಾರ  ವಾರದ ರಜೆ
6 ಎಪ್ರಿಲ್ ಸೋಮವಾರ ಮಹಾವೀರ ಜಯಂತಿ
10 ಎಪ್ರಿಲ್ ಶುಕ್ರವಾರ  ಗುಡ್ ಫ್ರೈಡೆ
11 ಎಪ್ರಿಲ್ ಶನಿವಾರ ಎರಡನೇ ಶನಿವಾರ
12 ಎಪ್ರಿಲ್ ಭಾನುವಾರ ವಾರದ ರಜೆ
13 ಎಪ್ರಿಲ್ ಸೋಮವಾರ ಬಿಜು ಉತ್ಸವ, ಬೈಸಾಖಿ, ಬೋಹಾಗ್ ಬಿಹು
14 ಎಪ್ರಿಲ್ ಮಂಗಳವಾರ ಡಾ.ಭೀಮರಾವ್ ಅಂಬೇಡ್ಕರ್ ಜಯಂತಿ
15 ಎಪ್ರಿಲ್ ಬುಧವಾರ ಬೋಹಾಗ್ ಬಿಹು, ಹಿಮಾಚಲ್ ದೇ
19 ಎಪ್ರಿಲ್ ಭಾನುವಾರ ವಾರದ ರಜೆ
20 ಎಪ್ರಿಲ್ ಸೋಮವಾರ ಗರಿಯಾ ಪೂಜಾ
25 ಎಪ್ರಿಲ್ ಶನಿವಾರ ನಾಲ್ಕನೇ ಶನಿವಾರ
26 ಎಪ್ರಿಲ್ ಭಾನುವಾರ ವಾರದ ರಜೆ

 ಕರೋನಾದಿಂದಾಗಿ ಬ್ಯಾಂಕುಗಳ ಸಮಯ ಬದಲಾಗಿದೆ:
ಕರೋನವೈರಸ್ ಕಾರಣದಿಂದಾಗಿ, ಬ್ಯಾಂಕುಗಳನ್ನು ತೆರೆಯುವ ಮತ್ತು ಮುಚ್ಚುವ ಸಮಯವನ್ನು ಸರ್ಕಾರವು ಬದಲಾಯಿಸಿದೆ.

Trending News