Banking News: ಬ್ಯಾಂಕುಗಳಲ್ಲಿ (Banking) ನೀವು ಇಟ್ಟಿರುವ ಠೇವಣಿ (Bank Account) ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಏಕೆಂದರೆ ಈ ಕುರಿತಾದ ಕಾನೂನಿನ ತಿದ್ದುಪಡಿ ಮಸೂದೆಯನ್ನು ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ. ಈ ಕಾನೂನಿನ ಅಡಿ ಒಂದು ವೇಳೆ ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ಹಣ ಇಟ್ಟವರಿಗೆ (Cash Deposit)ಅವರ ಹಣದ ಒಂದು ಮಿತಿಯವರೆಗೆ ಹಣವನ್ನು ಹಿಂದಿರುಗಿಸುವ ಗ್ಯಾರಂಟಿ ಸಿಗಲಿದೆ.
ತೊಂದರೆಗೊಳಗಾದ ಕೆಲ ಬ್ಯಾಂಕ್ ಗ್ರಾಹಕರು (Customers of some banks are worried)
ಬ್ಯಾಂಕ್ ಠೇವಣಿ ವಿಮಾ ಯೋಜನೆಯಡಿ ಖಾತೆ ಹೊಂದಿದವರಿಗೆ ಅವರ ಹಣವನ್ನು ಸುಲಭವಾಗಿ ಹಾಗೂ ಸಮಯಕ್ಕೆ ಸರಿಯಾಗಿ ಹಿಂದಿರುಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಪಂಜಾಬ್ ಹಾಗೂ ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್ ದಿವಾಳಿಯಾದ ಬಳಿಕ ಹಾಗೂ ಇತರೆ ಕೆಲ ಬ್ಯಾಂಕುಗಳಿಗೆ ಸಂಕಷ್ಟ ಎದುರಾದ ಬಳಿಕ ಇಂತಹ ಉಪಾಯಗಳ ಕುರಿತು ವೇಗವಾಗಿ ಯೋಚಿಸಲಾಗಿತ್ತು. ಪಿಟಿಐ ಸುದ್ದಿ ಸಂಸ್ಥೆ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿರುವ ಮೊತ್ತಕ್ಕೆ (Money) ವಿಮಾ ಸುರಕ್ಷೆಯ ಗ್ಯಾರಂಟಿಯನ್ನು ಸರ್ಕಾರ ಕಳೆದ ವರ್ಷ ಒಂದು ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಿತ್ತು.
ಕಾನೂನಿನಲ್ಲಿ ತಿದ್ದುಪಡಿಯಾಗುವ ಸಾಧ್ಯತೆ (There will be amendment in the law)
ವರದಿಗಳ ಪ್ರಕಾರ, ಈ ಕುರಿತಾದ ವ್ಯವಸ್ಥೆಯನ್ನು ಇನ್ನಷ್ಟು ಸಹಜ ಹಾಗೂ ಸುರಕ್ಷಿತಗೊಳಿಸಲು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (DICGC) ಮಸೂದೆ 1961 (Deposit Insurance and Credit Guarantee Corporation act 1961) ರಲ್ಲಿ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ತಮ್ಮ ಬಜೆಟ್ ಭಾಷಣದ ವೇಳೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ- ನಾಳೆಯಿಂದ ಸಿಗಲಿದೆ ಕಡಿಮೆ ಬೆಲೆಗೆ ಚಿನ್ನ ಖರೀದಿಸುವ ಅವಕಾಶ.! ಹೇಗೆ ಗೊತ್ತಾ..?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಈ ಮಸೂದೆಯ ಕರಡು ಪ್ರತಿಯನ್ನು ಈಗಾಗಲೇ ತಯಾರಿಸಲಾಗಿದ್ದು, ಇದಕ್ಕೆ ಮಂಡಲದ ಅನುಮೋದನೆಯ ಬಳಿಕ ಮುಂಬರುವ ಮಳೆಗಾಲದ ಅಧಿವೇಶನದಲ್ಲಿ ಮಂಡಿಸಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ- Covid-19 Life Insurance: ಕೇವಲ 330 ರೂ. ಪ್ರೀಮಿಯಂಗೆ ಸಿಗುತ್ತಿದೆ ಈ ವಿಮಾ ಪಾಲಸಿ, ನೀವೂ ಲಾಭ ಪಡೆದುಕೊಳ್ಳಬಹುದು
ಹಣ ಸಿಲುಕಿದ ಗ್ರಾಹಕರಿಗೆ ನೆಮ್ಮದಿ ಸಿಗಲಿದೆ (Customers whose money is trapped, they will get relief)
ಸರ್ಕಾರ (Modi Government) ಜಾರಿಗೆ ತರಲು ಹೊರಟಿರುವ ಈ ಮಸೂದೆಯಿಂದ ಪಿಎಂಸಿಗಳಂತಹ ಬ್ಯಾಂಕುಗಳ ದಿವಾಳಿಯಿಂದ ಹಾಗೂ ಸಂಕಷ್ಟದಲ್ಲಿ ಇರುವ ಬ್ಯಾಂಕುಗಳಲ್ಲಿ ಹಣ ತೊಡಗಿಸಿದ ಗ್ರಾಹಕರಿಗೆ ಭಾರಿ ನೆಮ್ಮದಿ ಸಿಗಲಿದೆ. DICGC ಭಾರತೀಯ ರಿಸರ್ವ್ ಬ್ಯಾಂಕ್ ಸಂಪೂರ್ಣ ಮಾಲೀಕತ್ವದ ಒಂದು ಅಂಗಸಂಸ್ಥೆಯಾಗಿದೆ. ಇದು ಬ್ಯಾಂಕ್ ಗಳ ಠೇವಣಿಗಳಿಗೆ ವಿಮಾ ಸಂರಕ್ಷಣೆ ಒದಗಿಸುತ್ತದೆ. ಕಳೆದ ಹಲವು ದಿನಗಳಿಂದ ಹಲವು ಬ್ಯಾಂಕ್ ಗಳಲ್ಲಿ ಗ್ರಾಹಕರ ಹಣ ಸಿಲುಕಿಕೊಂಡಿರುವುದು ಇಲ್ಲಿ ಗಮನಾರ್ಹ .
ಇದನ್ನೂ ಓದಿ- PM Kisan: ನಿಮಗೂ ಪಿಎಂ ಕಿಸಾನ್ ಹಣ ಬಂದಿಲ್ಲವೇ? ತಕ್ಷಣವೇ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.