ನಾಳೆಯೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ, ತಪ್ಪಿದರೆ ಬುಧವಾರದವರೆಗೆ ಕಾಯಬೇಕು..!

ಶುಕ್ರವಾರ ಅಂದರೆ ಮಾರ್ಚ್ 12 ರ ನಂತರ ಸರ್ಕಾರಿ ಬ್ಯಾಂಕುಗಳು  ಮತ್ತೆ ಕಾರ್ಯ ನಿರ್ವಹಿಸಲು ಶುರು ಮಾಡುವುದು  ಬುಧವಾರ ಅಂದರೆ ಮಾರ್ಚ್ 17 ರಂದು. ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಮುಚ್ಚಲಿರುವ ಕಾರಣ, ನಿಮ್ಮ ಕೆಲಸಗಳು ಅರ್ಧದಲ್ಲಿಯೇ ನಿಂತು ಹೋಗಬಹುದು.

Written by - Ranjitha R K | Last Updated : Mar 11, 2021, 06:14 PM IST
  • ನಾಳೆಯೇ ಪೂರೈಸಿಕೊಳ್ಳಿ ಬ್ಯಾಂಕ್ ಕೆಲಸ
  • ಶನಿವಾರದಿಂದ ಮಂಗಳವಾರದವರೆಗೆ ಕಾರ್ಯನಿರ್ವಹಿಸುವುದಿಲ್ಲ ಬ್ಯಾಂಕ್
  • ಖಾಸಗೀಕರಣವನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್ ನೌಕರರು
ನಾಳೆಯೇ ಮುಗಿಸಿಕೊಳ್ಳಿ ಬ್ಯಾಂಕ್ ಕೆಲಸ, ತಪ್ಪಿದರೆ ಬುಧವಾರದವರೆಗೆ ಕಾಯಬೇಕು..! title=
ನಾಳೆಯೇ ಪೂರೈಸಿಕೊಳ್ಳಿ ಬ್ಯಾಂಕ್ ಕೆಲಸ (file photo)

ದೆಹಲಿ: ಬ್ಯಾಂಕ್‌ಗೆ (Bank) ಸಂಬಂಧಿಸಿದಂತೆ ಒಂದಲ್ಲ ದು ಕೆಲಸ ಇದ್ದೇ ಇರುತ್ತದೆ ಮೊಬೈಲ್ ಬ್ಯಾಂಕಿಂಗ್ ಯುಗದಲ್ಲಿ, ಬ್ಯಾಂಕ್ ಕೆಲಸ ಪೂರೈಸಲು ಬ್ಯಾಂಕಿಗೆ ಹೋಗುವ ಪ್ರಮೇಯ ಕಡಿಮೆ. ಆದರೆ ಕೆಲವೊಂದು ಕೆಲಸಗಳಿಗೆ ಬ್ಯಾಂಕ್ ಗೆ  ಭೇಟಿ ನೀಡಲೇ ಬೇಕಾಗುತ್ತದೆ. ನೀವು ಕೂಡಾ ಅಂತಹ ಯಾವುದಾದರೂ ಕೆಲಸವನ್ನು ಬಾಕಿ ಇರಿಸಿಕೊಂಡಿದ್ದರೆ ನಾಳೆಯೇ ಮುಗಿಸಿಕೊಳ್ಳಿ. ಯಾಕೆಂದರೆ ಶನಿವಾರದಿಂದ ನಾಲ್ಕು ದಿನಗಳವರೆಗೆ ಬ್ಯಾಂಕ್ (Bank Close) ತೆರೆದಿರುವುದಿಲ್ಲ. 
 
ಸತತ 4 ದಿನಗಳವರೆಗೆ ಬ್ಯಾಂಕ್ ತೆರೆದಿರುವುದಿಲ್ಲ : 
ಶುಕ್ರವಾರ ಅಂದರೆ ಮಾರ್ಚ್ 12 ರ ನಂತರ ಸರ್ಕಾರಿ ಬ್ಯಾಂಕುಗಳು (Bank) ಮತ್ತೆ ಕಾರ್ಯ ನಿರ್ವಹಿಸಲು ಶುರು ಮಾಡುವುದು  ಬುಧವಾರ ಅಂದರೆ ಮಾರ್ಚ್ 17 ರಂದು. ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಮುಚ್ಚಲಿರುವ ಕಾರಣ, ನಿಮ್ಮ ಕೆಲಸಗಳು ಅರ್ಧದಲ್ಲಿಯೇ ನಿಂತು ಹೋಗಬಹುದು. ಹಾಗಾಗಿ ಬ್ಯಾಂಕಿಗೆ ಸಂಬಂಧಪಟ್ಟ ಏನೇ ಕೆಲಸಗಳಿರಲಿ ನಾಳೆಯೇ ಪೂರೈಸಿಕೊಳ್ಳಿ.. 

ಇದನ್ನೂ ಓದಿ Bank privatization : 4 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಖಾಸಗೀಕರಣ : ಶೀಘ್ರವೇ ಫೋಷಣೆ ಸಾಧ್ಯತೆ

ಮುಷ್ಕರಕ್ಕೆ ಕರೆ ನೀಡಿರುವ ಬ್ಯಾಂಕ್ ನೌಕರರು : 
ಮಾರ್ಚ್ 13 ಮತ್ತು 14 ರಂದು ದೇಶದ ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಆದರೆ ಮಾರ್ಚ್ 15 ಮತ್ತು 16 ರಂದು ಸರ್ಕಾರ ಮತ್ತು ಗ್ರಾಮೀಣ ಬ್ಯಾಂಕುಗಳು ಮಾತ್ರ ಮುಚ್ಚಲ್ಪಡುತ್ತವೆ. ಒಟ್ಟು 9 ಬ್ಯಾಂಕ್ ಒಕ್ಕೂಟಗಳ ಕೇಂದ್ರ ಸಂಘಟನೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಬಂದ್ ಗೆ ಕರೆ ನೀಡಿದೆ.  ಖಾಸಗೀಕರಣವನ್ನು (Privatisation) ವಿರೋಧಿಸಿ, ಸರ್ಕಾರಿ ಬ್ಯಾಂಕಿನ ನೌಕರರು 2 ದಿನಗಳ ಮುಷ್ಕರ ನಡೆಸಲಿದ್ದಾರೆ. ಯಾವುದೇ ಸರ್ಕಾರಿ ಬ್ಯಾಂಕ್ ಅನ್ನು ಖಾಸಗೀಕರಣಗೊಳಿಸದಂತೆ ಬ್ಯಾಂಕ್ ನೌಕರರು ನಿರಂತರವಾಗಿ ಸರ್ಕಾರಕ್ಕೆ (Government) ಮನವಿ ಮಾಡುತ್ತಲೇ ಬಂದಿದ್ದಾರೆ. ಒಂದೊಮ್ಮೆ ಬ್ಯಾಂಕ್ ಖಾಸಗೀಕರಣಗೊಂಡರೆ, ಉದ್ಯೋಗ ಕಳೆದುಕೊಳ್ಳು ಆತಂಕ ನೌಕರರದ್ದು. 

ಖಾಸಗೀಕರಣದ ಬಗ್ಗೆ ಸರ್ಕಾರದ ನಿಲುವು : 
ಕೆಲವು ಸರ್ಕಾರಿ ಸಂಸ್ಥೆಗಳನ್ನು ಮುಂದುವರೆಸಿಕೊಂಡು ಹೋಗಬೇಕಾದರೆ ಅವುಗಳನ್ನು ಖಾಸಗೀಕರಣಗೊಳಿಸುವುದು ಅನಿವಾರ್ಯ ನ್ನುವುದು ಸರ್ಕಾರದ ವಾದ. ಆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸದಿದ್ದರೆ,  ನೌಕರರಿ ಗೆ ವೇತನ (Salary) ನೀಡುವುದು ಕೂಡಾ ಕಷ್ಟವಾಗಲಿದೆ. ಹೀಗಿರುವಾಗ ಸಂಸ್ಥೆಯನ್ನು ಖಾಸಗೀಕರಣಗೊಳಿಸಿದರೆ ಕಡೇ ಪಕ್ಷ ನೌಕರರ ಉದ್ಯೋಗಕ್ಕೆ (Job) ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ : ಸಾಲ ಪಡೆದವರಿಗೂ, ಪಡೆಯುವವರಿಗೂ RBI ಗುಡ್ ನ್ಯೂಸ್..? ಕಾರಣ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News