ಎಸ್‌ಬಿಐನ ಈ ಖಾತೆಯಲ್ಲಿ ಸಿಗಲಿದೆ ಹಲವು ಸೌಲಭ್ಯ

ಈ ಉಳಿತಾಯ ಖಾತೆಯಲ್ಲಿ ಗ್ರಾಹಕರು ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

Written by - Yashaswini V | Last Updated : May 19, 2020, 01:05 PM IST
ಎಸ್‌ಬಿಐನ ಈ ಖಾತೆಯಲ್ಲಿ ಸಿಗಲಿದೆ ಹಲವು ಸೌಲಭ್ಯ title=

ನವದೆಹಲಿ: ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ (State bank of india) ವಿಶೇಷ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ. ಈ ಉಳಿತಾಯ ಖಾತೆಯಲ್ಲಿ ಗ್ರಾಹಕರು ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಅದು ಇತರ ಉಳಿತಾಯ ಖಾತೆಗಳಲ್ಲಿ ಲಭ್ಯವಿಲ್ಲ. ಬ್ಯಾಂಕ್ ಈ ಖಾತೆಯನ್ನು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ (SBI BSBD Account) ಎಂದು ಹೆಸರಿಸಿದೆ. ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡುವ ಬಗ್ಗೆ ಗ್ರಾಹಕರಿಗೆ ಯಾವುದೇ ಚಿಂತೆ ಇರುವುದಿಲ್ಲ. ಇದರೊಂದಿಗೆ ಉಚಿತ ಎಟಿಎಂ ಮತ್ತು ಡೆಬಿಟ್ ಕಾರ್ಡ್‌ನಂತಹ ಹಲವು ರೀತಿಯ ಸೌಲಭ್ಯಗಳಿವೆ. 

ಈ ಖಾತೆಯ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ...

ಈ ಖಾತೆಯಲ್ಲಿ ಅನೇಕ ಸೌಲಭ್ಯಗಳು ಲಭ್ಯ:
ಈ ಖಾತೆ ತೆರೆಯಲು ಗ್ರಾಹಕರು ಬ್ಯಾಂಕಿಗೆ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಎಸ್‌ಬಿಐನ ನೆಟ್ ಬ್ಯಾಂಕಿಂಗ್‌ನಿಂದ ನೀವು ಅದನ್ನು ತೆರೆಯಬಹುದು. ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಎಸ್‌ಬಿಐ ಖಾತೆದಾರರಿಗೆ ಈ ಖಾತೆಯಲ್ಲಿ ಉಚಿತವಾಗಿ ನೀಡಲಾಗುತ್ತದೆ. ನೀವು ಆ ಕಾರ್ಡ್‌ಗಾಗಿ ಯಾವುದೇ ರೀತಿಯ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇಂತಹ SMSಗಳಿಂದ ಜಾಗರೂಕರಾಗಿರುವಂತೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ SBI

ಗ್ರಾಹಕರಿಗೆ ಸಿಗಲಿದೆ ಹಲವು ಪ್ರಯೋಜನ:
ಈ ಖಾತೆಯಲ್ಲಿ ಎಲೆಕ್ಟ್ರಾನಿಕ್ ಪಾವತಿ ಚಾನೆಲ್‌ಗಳ ಮೂಲಕ ನೀವು ಉಚಿತ ಕ್ರೆಡಿಟ್ ಅಥವಾ ರಶೀದಿ ಸೇವೆಗಳನ್ನು ಸಹ ಪಡೆಯುತ್ತೀರಿ. ಇದು NEFT ಮತ್ತು RTGS ಅನ್ನು ಸಹ ಒಳಗೊಂಡಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನೀಡುವ ಠೇವಣಿ ಅಥವಾ ಚೆಕ್ ಸಂಗ್ರಹದ ಸೇವೆಗಳು ಸಹ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿರುತ್ತವೆ. ಇದಲ್ಲದೆ ನಿಮ್ಮ ಖಾತೆಯು ನಿಷ್ಕ್ರಿಯವಾಗಿದ್ದರೆ ಅದನ್ನು ಸಕ್ರಿಯಗೊಳಿಸಲು ನೀವು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ. ಇದಲ್ಲದೆ ನೀವು ತಿಂಗಳಲ್ಲಿ ನಾಲ್ಕು ಬಾರಿ ವಿತ್ ಡ್ರಾ ಮಿತಿಯನ್ನು ಪಡೆಯುತ್ತೀರಿ. ಇದು ಎಸ್‌ಬಿಐ ಮತ್ತು ಇತರ ಬ್ಯಾಂಕುಗಳ ಎಟಿಎಂ (ATM)ಗಳಿಂದ ಹಿಂತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ. ಅಲ್ಲದೆ ಎಇಪಿಎಸ್ ಮತ್ತು ಶಾಖೆಯಿಂದ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಸೇರಿಸಲಾಗುವುದು.

ನೀವು ಎಸ್‌ಬಿಐ ಖಾತೆದಾರರೇ? ಈ ಕೆಲಸಕ್ಕಾಗಿ ಇನ್ಮುಂದೆ ಬ್ಯಾಂಕಿಗೆ ಹೋಗಬೇಕಿಲ್ಲ

ಖಾತೆ ತೆರೆಯುವುದು ಹೇಗೆ?
ಎಸ್‌ಬಿಐ ನೆಟ್ ಬ್ಯಾಂಕಿಂಗ್ ಅಥವಾ ಎಸ್‌ಬಿಐ (SBI) ಆನ್‌ಲೈನ್ ಸೇವೆಗಳ ಮೂಲಕ ಎಸ್‌ಬಿಐ ಕೆವೈಸಿ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಎಸ್‌ಬಿಐ ಬಿಎಸ್‌ಬಿಡಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯುವ ವ್ಯಕ್ತಿಯು ಕೆವೈಸಿ ದಾಖಲೆಗಳನ್ನು ಹೊಂದಿರಬೇಕು. ಇದನ್ನು ವೈಯಕ್ತಿಕ, ಜಂಟಿ ಖಾತೆಯಾಗಿ ತೆರೆಯಬಹುದು.

ಯಾರು ಖಾತೆ ತೆರೆಯಬಹುದು?
ಖಾತೆಯನ್ನು ತೆರೆಯುವಾಗ ನೀವು ಈಗಾಗಲೇ ಎಸ್‌ಬಿಐನ ಉಳಿತಾಯ ಖಾತೆಯನ್ನು ಹೊಂದಿರಬಾರದು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಏಕೆಂದರೆ ಒಬ್ಬ ವ್ಯಕ್ತಿಗೆ ಎರಡು ಎಸ್‌ಬಿಐ ಖಾತೆಗಳನ್ನು ಹೊಂದಲು ಅನುಮತಿ ಇಲ್ಲ. ಬ್ಯಾಂಕ್ ಪ್ರಕಾರ ಗ್ರಾಹಕರು ಈಗಾಗಲೇ ಇತರ ಉಳಿತಾಯ ಖಾತೆಯನ್ನು ಹೊಂದಿರಬಾರದು. ಗ್ರಾಹಕರು ಈಗಾಗಲೇ ಉಳಿತಾಯ ಖಾತೆಯನ್ನು ಹೊಂದಿದ್ದರೆ ಮತ್ತು ಎಸ್‌ಬಿಐ ಮೂಲ ಉಳಿತಾಯ ಠೇವಣಿ ಖಾತೆಯನ್ನು ತೆರೆಯಲು ಬಯಸಿದರೆ, ಅವರು ಈ ಖಾತೆಯನ್ನು ತೆರೆದ 30 ದಿನಗಳಲ್ಲಿ ಹಳೆಯ ಖಾತೆಯನ್ನು ಮುಚ್ಚಬೇಕಾಗುತ್ತದೆ.

ಸುರಕ್ಷಿತ ಬ್ಯಾಂಕಿಂಗ್‌ಗಾಗಿ ಇಲ್ಲಿದೆ ವಿಶೇಷ ಸಲಹೆಗಳು!

ಈ ಖಾತೆಯ ಬಡ್ಡಿದರಗಳು ಎಸ್‌ಬಿಐನ ಸಾಮಾನ್ಯ ಉಳಿತಾಯ ಖಾತೆಯಂತೆಯೇ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್‌ನ ಪ್ರಕಾರ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆಯಲ್ಲಿ ವಾರ್ಷಿಕ 2.75% ದರದಲ್ಲಿ ಬಡ್ಡಿ ಪಾವತಿಸಲಾಗುತ್ತಿದೆ.

Trending News