Bank Transaction Rules: ವಹಿವಾಟು ವಿಫಲವಾದರೆ ಬ್ಯಾಂಕ್ ನೀಡುತ್ತೆ 100 ರೂ. ಪರಿಹಾರ, ಹೇಗೆ... ಇಲ್ಲಿದೆ ವಿವರ

ಒಂದು ವೇಳೆ ಬ್ಯಾಂಕ್ ವಹಿವಾಟು ವಿಫಲವಾದರೆ ಮತ್ತು ನೀವು ಈ ಕುರಿತು ಬ್ಯಾಂಕ್ ಗೆ ದೂರು ನೀಡಿದರೆ. ನಿಮ್ಮ ಹಣದ ಜೊತೆಗೆ ಬ್ಯಾಂಕ್ ಗಳು ನಿಮಗೆ ಪರಿಹಾರವನ್ನು ಕೂಡ ನೀಡುತ್ತವೆ... ಹೇಗೆ ಇಲ್ಲಿದೆ ವಿವರ.

Last Updated : Dec 5, 2020, 02:01 PM IST
  • ವಿಫಲವಾದ ಬ್ಯಾಂಕ್ ವ್ಯವಹಾರಕ್ಕೆ ಬ್ಯಾಂಕ್ ಗಳು ಪರಿಹಾರ ನೀಡುತ್ತವೆ.
  • ಸೆಪ್ಟೆಂಬರ್ 20, 2019 ರಲ್ಲಿ RBI ಈ ನಿಯಮ ಜಾರಿಗೊಳಿಸಿದೆ.
  • ಈ ಪರಿಹಾರ ಹೇಗೆ ಪಡೆಯಬಹುದು? ಇಲ್ಲಿದೆ ವಿವರ
Bank Transaction Rules: ವಹಿವಾಟು ವಿಫಲವಾದರೆ ಬ್ಯಾಂಕ್ ನೀಡುತ್ತೆ 100 ರೂ. ಪರಿಹಾರ, ಹೇಗೆ... ಇಲ್ಲಿದೆ ವಿವರ title=

Bank Transaction Rules:ಯಾವುದೇ ಒಂದು ವಿಪರೀತ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮ್ಮ ಖಾತೆಯಿಂದ ಹಣ ವಜಾಗೊಂಡರೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ಖಾತೆಗೆ ಹಣ ಮರಳುತ್ತದೆ. ಆದರೆ, ಹಲವು ಬಾರಿ ನಿಮ್ಮ ಹಣ ನಿಮ್ಮ ಖಾತೆಗೆ ಮರಳಲು ಕಾಲಾವಕಾಶ ತಗಲುತ್ತದೆ. ಹಲವು ಬಾರಿ ಗ್ರಾಹಕರು ತಮ್ಮ ಕಡಿತಗೊಂಡ ಹಣ ವಾಪಸ್ ಬರದೆ ಹೋದ ಸಂದಭದಲ್ಲಿ ದೂರು ಕೂಡ ದಾಖಲಿಸುತ್ತಾರೆ. ಆದರೆ ಇಂತಹ ಸಂದರ್ಭದಲ್ಲಿ ಬ್ಯಾಂಕ್ ಗಳು ನಿಮಗೆ ನಿಮ್ಮ ಹಣದ ಜೊತೆಗೆ ಪರಿಹಾರ ಕೂಡ ನೀಡುತ್ತವೆ. ಹೌದು, ನೀವು ಬ್ಯಾಂಕ್ ಗೆ ದೂರು ನೀಡಿದ 7 ದಿನಗಳ ಒಳಗೆ ನಿಮ್ಮ ಖಾತೆಗೆ ಹಣ ಮರಳದೆ ಹೋದಲ್ಲಿ ಬಳಿಕ ಬ್ಯಾಂಕ್ ಗಳು ನಿತ್ಯ ರೂ.100ರ ಲೆಕ್ಕದಲ್ಲಿ ಪರಿಹಾರ ನೀಡುತ್ತವೆ. ಫೇಲ್ ಟ್ರಾನ್ಸಾಕ್ಷನ್ ಪ್ರಕರಣಗಳಿಗಾಗಿ RBI ನ ಈ ನಿಯಮ ಸೆಪ್ಟೆಂಬರ್ 20, 2019 ರಲ್ಲಿ ಜಾರಿಬಂದಿತ್ತು. ನಿಮಗೂ ಈ ನಿಯಮ ತಿಳಿದಿರಲಿ.

ಇದನ್ನು ಓದಿ- Debit & Credit Card Payment Rule: ನೂತನ ವರ್ಷದಿಂದ ಈ ನಿಯಮದಲ್ಲಿ ದೊಡ್ಡ ಬದಲಾವಣೆ, ನಿಮಗೂ ತಿಳಿದಿರಲಿ

UPI ಆಪ್ ಮೇಲೆ ಈ ರೀತಿ ದೂರು ದಾಖಲಿಸಿ
ಒಂದು ವೇಳೆ ನೀವು ಡಿಜಿಟಲ್ ವ್ಯವಹಾರ ನಡೆಸಿದ್ದು, ನಿಮ್ಮ ಹಣ ವಾಪಸ್ ನಿಮ್ಮ ಖಾತೆಗೆ ಬಂದಿಲ್ಲ ಎಂದಾದರೆ, ನೀವು UPI APP ಗೆ ಭೇಟಿ ನೀಡಿ ನಿಮ್ಮ ದೂರನ್ನು ನೀವು ದಾಖಲಿಸಬಹುದು. ಇದಕ್ಕಾಗಿ ನೀವು ಪೇಮೆಂಟ್ ಹಿಸ್ಟರಿ ಆಪ್ಶನ್ ಗೆ ಭೇಟಿ ನೀಡಬೇಕು. ಬಳಿಕ Raise Dispute ಅನ್ನು ಕ್ಲಿಕ್ಕಿಸಿ ನೀವು ನಿಮ್ಮ ದೂರನ್ನು ದಾಖಲಿಸಬೇಕು. ಒಂದು ವೇಳೆ ನೀವು ನೀಡುತ್ತಿರುವ ದೂರು ಸರಿಯಾಗಿದ್ದಲ್ಲೇ ಬ್ಯಾಂಕ್ ಗಳು ನಿಮ್ಮ ಹಣವನ್ನು ವಾಪಸ್ ನೀಡುತ್ತವೆ.

ಇದನ್ನು ಓದಿ- ಈ Bank ನ ಡಿಜಿಟಲ್ ವ್ಯವಹಾರಕ್ಕೆ ತಡೆ ನೀಡಿ, Credit Card ಕುರಿತು ಈ ಸಲಹೆ ನೀಡಿದೆ RBI

ಬ್ಯಾಂಕ್ ನಿಂದ ಪೆನಾಲ್ಟಿ ಪಡೆಯಲು ನೀವು ವ್ಯವಹಾರ ವಿಫಲವಾದ 30 ದಿನಗಳೊಳಗೆ ನಿಮ್ಮ ದೂರು ದಾಖಲಿಸಬೇಕು. ವ್ಯವಹಾರದ ಪಾವತಿ ಅಥವಾ ಅಕೌಂಟ್ ಸ್ಟೇಟ್ ಮೆಂಟ್ ಪಡೆದು ನಿಮ್ಮ ದೂರನ್ನು ದಾಖಲಿಸಬೇಕು. ಇದಲ್ಲದೆ ನಿಮ್ಮ ಹೋಮ್ ಬ್ರಾಂಚ್ ಗೆ ಭೇಟಿ ನೀಡಿ ಬ್ಯಾಂಕ್ ನ ಅಧಿಕೃತ ಅಧಿಕಾರಿಗಳಿಗೆ ನಿಮ್ಮ ATM ಕಾರ್ಡ್ ವಿವರಗಳನ್ನು ನೀಡಬೇಕು. 7 ದಿನಗಳ ಒಳಗೆ ಒಂದು ವೇಳೆ ನಿಮ್ಮ ಹಣ ವಾಪಸ್ ಬರದೆ ಹೋದಲ್ಲಿ, ನೀವು ಆಕ್ಷನ್ ಫಾರ್ಮ್ 5ನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಅನ್ನು ಸಲ್ಲಿಸಿದ ದಿನದಿಂದಲೇ ಪೆನಾಲ್ಟಿ ಆರಂಭಗೊಳ್ಳುತ್ತದೆ.

ಇದನ್ನು ಓದಿ- ವಿಶ್ವ ದಾಖಲೆ ಬರೆದ RBI Twitter ಹ್ಯಾಂಡಲ್, Followers ಗಳ ಸಂಖ್ಯೆ ಎಷ್ಟು ಗೊತ್ತಾ?

ಈ ನಿಯಮಗಳನ್ನು ತಿಳಿಯುವುದು ತುಂಬಾ ಮಹತ್ವದ್ದಾಗಿದೆ. ಈ ರೀತಿ ವ್ಯವಹಾರ ವಿಫಲವಾದ ಸಂದರ್ಭದಲ್ಲಿ ಬ್ಯಾಂಕ್ ನಿಂದ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು. ಪೆನಾಲ್ಟಿ ಸೇರಿದಂತೆ ಬ್ಯಾಂಕ್ ಗಳು ನಿಮಗೆ ನಿಮ್ಮ ಹಣ ಮರುಪಾವತಿಸಲೇಬೇಕು.

Trending News