Bank Holidays: April 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗಳಿಗೆ ಹಾಲಿಡೇ

Bank Holidays: ಒಂದು ವೇಳೆ ನೀವೂ ಕೂಡ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ ಸುದ್ದಿ ಸಾಬೀತಾಗಬಹುದು. ಹೌದು, ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸ ಇದ್ದರೆ ಅದನ್ನು ನೀವು ನಾಳೆಯೇ ಪೂರ್ಣಗೊಳಿಸಿ. ಏಕೆಂದರೆ ಏಪ್ರಿಲ್ 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ.

Written by - Nitin Tabib | Last Updated : Apr 11, 2021, 02:17 PM IST

    ಏಪ್ರಿಲ್ 13ರಿಂದ ಸತತ 6 ದಿನಗಳ ಬ್ಯಾಂಕ್ ಬಂದ್.

    ನಾಳೆಯೇ ನಿಮ್ಮೆಲ್ಲಾ ಬ್ಯಾಂಕ್ ಕೆಲಸ ಪೂರ್ಣಗೊಳಿಸಿ.

    ಇಲ್ಲದಿದ್ದರೆ ನಿಮ್ಮ ಮಹತ್ವದ ಕೆಲಸಗಳಿಗೆ ವಿಳಂಬವಾಗಲಿದೆ

Bank Holidays: April 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗಳಿಗೆ ಹಾಲಿಡೇ title=
Bank Holidays (File Photo)

Bank Holidays - ಒಂದು ವೇಳೆ ನೀವೂ ಕೂಡ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು (Bank Customer) ಮಾಡಬೇಕಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ ಸುದ್ದಿ ಸಾಬೀತಾಗಬಹುದು. ಹೌದು, ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸ ಇದ್ದರೆ ಅದನ್ನು ನೀವು ನಾಳೆಯೇ ಪೂರ್ಣಗೊಳಿಸಿ. ಏಕೆಂದರೆ ಏಪ್ರಿಲ್ 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ. ಹಾಗೆ ನೋಡಿದರೆ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 9 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಅವುಗಳಲ್ಲಿ ಒಟ್ಟು ಆರು ಹಾಲಿಡೇಗಳು ಮುಂದಿನವಾರವೇ ಇರಲಿವೆ. ಹೀಗಿರುವಾಗ ನೀವು ಬ್ಯಾಂಕ್ ಗೆ ಸಂಬಂಧಿಸಿದ ನಿಮ್ಮ ಯಾವುದೇ ಕೆಲಸವನ್ನು ಬ್ಯಾಂಕ್ ರಜಾ ದಿನಗಳ ಲಿಸ್ಟ್ ಗೆ  ಅನುಗುಣವಾಗಿ ನಿರ್ವಹಿಸಿ. ಈ ಪಟ್ಟಿಯಲ್ಲಿ ಏಪ್ರಿಲ್ ತಿಂಗಳಿನಲ್ಲಿ (April Month) ಯಾವ ಯಾವ ದಿನಗಳಂದು ಬ್ಯಾಂಕ್ ಗಳು ಬಂದ್ ಇರಲಿವೆ ಎಂಬುದನ್ನು ಹೇಳಲಾಗಿದೆ.

ಎಲ್ಲ ರಾಜ್ಯಗಳಿಗೆ ವಿಭಿನ್ನ ನಿಯಮಗಳಿವೆ
ಎಲ್ಲಾ ರಾಜ್ಯಗಳಲ್ಲಿ 15 ದಿನಗಳು ರಜಾ ದಿನಗಳಿರುವುದಿಲ್ಲ. ಏಕೆಂದರೆ, ಕೆಲ ಹಬ್ಬಗಳು ಅಥವಾ ಉತ್ಸವಗಳು ಎಲ್ಲಾ ರಾಜ್ಯಗಳಲ್ಲಿ ಏಕಕಾಲಕ್ಕೆ ಆಚರಿಸಲಾಗುವುದಿಲ್ಲ. RBI ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ , ದೇಶದ ವಿಭಿನ್ನ ರಾಜ್ಯಗಳಲ್ಲಿ ಬ್ಯಾಂಕ್ ಗಳಿಗಾಗಿ 9 ದಿನಗಳ ರಜೆಗಳನ್ನು ನಿರ್ಧರಿಸಲಾಗಿದೆ.

ಇದನ್ನೂ ಓದಿ-SBI ಗ್ರಾಹಕರೆ ಗಮನಿಸಿ: ಫಿಕ್ಸೆಡ್ ಡೆಪಾಸಿಟ್ ದಾರರಿಗೆ ಬ್ಯಾಂಕ್ ನಿಂದ ಎಚ್ಚರಿಕೆ!  

ರಜಾದಿನಗಳ ಪಟ್ಟಿ ಇಂತಿದೆ
- ಏಪ್ರಿಲ್ 13 - ಮಂಗಳವಾರ - ಯುಗಾದಿ, ತೆಲುಗು ಹೊಸ ವರ್ಷ, ಬೋಹಾಗ್ ಬಿಹು, ಗುಡಿ ಪಾಡ್ವಾ, ವೈಶಾಖಿ, ಬಿಜು ಉತ್ಸವ
- 14 ಏಪ್ರಿಲ್ - ಬುಧವಾರ - ಡಾ.ಅಂಬೇಡ್ಕರ್ ಜಯಂತಿ, ಸಾಮ್ರಾಟ್ ಅಶೋಕನ  ಜನ್ಮದಿನ, ತಮಿಳು ಹೊಸ ವರ್ಷ, ಮಹಾ ವಿಷುಬಾ ಸಂಕ್ರಾಂತಿ, ಬೋಹಾಗ್ ಬಿಹು
- 15 ಏಪ್ರಿಲ್ - ಗುರುವಾರ - ಹಿಮಾಚಲ್ ದಿನ, ವಿಶು, ಬಂಗಾಳಿ ಹೊಸ ವರ್ಷ, ಸಿರ್ಹುಲ್
- 16 ಏಪ್ರಿಲ್ - ಶುಕ್ರವಾರ - ಬೋಹಾಗ್ ಬಿಹು
- 18 ಏಪ್ರಿಲ್ - ಭಾನುವಾರ
- 21 ಏಪ್ರಿಲ್ - ಮಂಗಳವಾರ - ರಾಮ್ ನವಮಿ, ಗರಿಯಾ ಪೂಜಾ
- 24 ಏಪ್ರಿಲ್ - ನಾಲ್ಕನೇ ಶನಿವಾರ
- 25 ಏಪ್ರಿಲ್ - ಭಾನುವಾರ - ಮಹಾವೀರ್ ಜಯಂತಿ

ಇದನ್ನೂ ಓದಿ- Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ

ಹಬ್ಬಗಳ ಹಿನ್ನೆಲೆ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ
ತೆಲಗು ಹೊಸವರ್ಷ, ಬಿಹೂ, ಗುಡಿ ಪಾಡ್ವಾ, ವೈಶಾಖಿ, ಬಿಜು ಉತ್ಸವ ಹಾಗೂ ಉಗಾದಿ (Ugadi 2021) ಹಬ್ಬದ ಅಂಗವಾಗಿ ಏಪ್ರಿಲ್ 13 ರಂದು ಬ್ಯಾಂಕ್ ಗಳಿಗೆ ರಜೆ ಇರಲಿದೆ. ಇದಲ್ಲದೆ ಏಪ್ರಿಲ್ 14 ರಂದು ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯ ರಜಾದಿನ ಇರಲಿದೆ. ಏಪ್ರಿಲ್ 15 ರಂದು ಹಿಮಾಚಲ್ ಡೇ, ವಿಷು, ಬಂಗಾಳಿ ಹೊಸವರ್ಷ, ಸರಹುಲ್ ಅಂಗವಾಗಿ ಕೆಲ ರಾಜ್ಯಗಳಲ್ಲಿ ರಜೆ ಇರಲಿದೆ. ಇದಾದ ಬಳಿಕ ಏಪ್ರಿಲ್ 21ರಂದು ರಾಮನವಮಿ (Ramanavami) ಹಾಗೂ ಏಪ್ರಿಲ್ 25ರಂದು ಮಹಾವೀರ್ ಜಯಂತಿ ಅಂಗವಾಗಿ ರಜೆ ಇರಲಿದೆ. ಜೊತೆಗೆ ಏಪ್ರಿಲ್ 24 ರಂದು ನಾಲ್ಕನೇ ಶನಿವಾರ ಇರಲಿದೆ.

ಇದನ್ನೂ ಓದಿ-LIC ಈ ವಿಶೇಷ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ವೃದ್ಧಾಪ್ಯದಲ್ಲಿ ಪಡೆಯಿರಿ ₹ 74300 ಪಿಂಚಣಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News