ರಜಾ ಕೊಡ್ಲಿಲ್ಲ ಅಂತ ಬ್ಯಾಂಕ್ ಉದ್ಯೋಗಿ ನೀಡಿದ ಕಾರಣ ಏನ್ ಗೊತ್ತಾ?

ಹೆಂಡತಿಗೆ ಚಿಕಿತ್ಸೆ ಕೊಡಿಸಲು ರಜೆ ಸಿಗದ ಕಾರಣ ಆಕೆಯನ್ನು ಕೊಂದು, ಅಂತ್ಯಕ್ರಿಯೆ ಮಾಡಿ ಬರಲು ಎರಡು ದಿನ ರಜೆ ನೀಡಿ ಎಂದು ಕಾರಣ ನೀಡಿ ರಜಾ ಅರ್ಜಿ ಬರೆದಿದ್ದರು ಎನ್ನಲಾಗಿದೆ.

Last Updated : Jan 24, 2019, 08:01 PM IST
ರಜಾ ಕೊಡ್ಲಿಲ್ಲ ಅಂತ ಬ್ಯಾಂಕ್ ಉದ್ಯೋಗಿ ನೀಡಿದ ಕಾರಣ ಏನ್ ಗೊತ್ತಾ? title=

ಬಕ್ಸಾರ್:  ದೈನಂದಿನ ಕಚೇರಿ ಕೆಲಸದ ಒತ್ತಡ ಸಹಿಸಲಾಗದೆ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದಕ್ಕೆ ಮುಖ್ಯ ಕಾರಣ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ರಜೆ ನೀಡದಿರುವುದು.  ಇದೀಗ ಅಂತಹದೇ ಒಂದು ಘಟನೆ ಬಿಹಾರದ ಬಕ್ಸಾರ್ ನಲ್ಲಿ ನಡೆದಿದೆ. 

ಬ್ಯಾಂಕ್ ಮ್ಯಾನೇಜರ್ ಒಬ್ಬರು ತನಗೆ ರಜೆ ನೀಡಬೇಕೆಂದು ಕೋರಿ ಬ್ಯಾಂಕ್ ಅಧ್ಯಕ್ಷರಿಗೆ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ನೀಡಿದ್ದಾರೆ. ಆದರೆ ಈ ರಜೆಗೆ ಕಾರಣ 'ಹೆಂಡತಿಯನ್ನು ಕೊಲ್ಲಲು' ಎಂದು ಬರೆದು ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿದ ಆಡಳಿತ ಮಂಡಳಿ ಕೂಡಲೇ ಮ್ಯಾನೇಜರ್'ಗೆ ರಜೆ ನೀಡಿದೆ. 

ಬ್ಯಾಂಕ್ ಉದ್ಯೋಗಿ ಪತ್ನಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅವರಿಗೆ ಚಿಕಿತ್ಸೆ ಕೊಡಿಸಲು ಹಲವು ಬಾರಿ ರಜೆ ಕೇಳಿದ್ದಾರೆ. ಆದರೆ ರಜೆ ಸಿಗದ ಕಾರಣ ಆಕೆಯನ್ನು ಕೊಂದು, ಅಂತ್ಯಕ್ರಿಯೆ ಮಾಡಿ ಬರಲು ಎರಡು ದಿನ ರಜೆ ನೀಡಿ ಎಂದು ಕಾರಣ ನೀಡಿ ರಜಾ ಅರ್ಜಿ ಬರೆದಿದ್ದರು ಎನ್ನಲಾಗಿದೆ. ಕಾರಣ ಕಂಡು ಬೆಚ್ಚಿಬಿದ್ದ ಆಡಳಿತ ಮಂಡಳಿ ಕೂಡಲೇ ರಜೆ ನೀಡಿದೆ ಎನ್ನಲಾಗಿದೆ.

Trending News