ಢಾಕಾ ಸ್ಟಾಕ್ ಎಕ್ಸ್ಚೇಂಜ್'ನ ಶೇ.25 ಪಾಲನ್ನು ಚೀನೀ ಒಕ್ಕೂಟಕ್ಕೆ ಮಾರಲಿರುವ ಬಾಂಗ್ಲಾದೇಶ

 ಬಾಂಗ್ಲಾದೇಶವು ಢಾಕಾ ಸ್ಟಾಕ್ ಎಕ್ಸ್ಚೇಂಜ್ (ಡಿಎಸ್ಇ)ನಲ್ಲಿ 25 ಪ್ರತಿಶತದಷ್ಟು ಪಾಲನ್ನು ಚೀನೀ ಒಕ್ಕೂಟಕ್ಕೆ ಮಾರಾಟ ಮಾಡುವುದಾಗಿ ಹೇಳಿದೆ.

Last Updated : Feb 21, 2018, 10:41 AM IST
ಢಾಕಾ ಸ್ಟಾಕ್ ಎಕ್ಸ್ಚೇಂಜ್'ನ ಶೇ.25 ಪಾಲನ್ನು ಚೀನೀ ಒಕ್ಕೂಟಕ್ಕೆ ಮಾರಲಿರುವ ಬಾಂಗ್ಲಾದೇಶ title=

ಢಾಕಾ: ಬಾಂಗ್ಲಾದೇಶವು ಢಾಕಾ ಸ್ಟಾಕ್ ಎಕ್ಸ್ಚೇಂಜ್ (ಡಿಎಸ್ಇ)ನಲ್ಲಿ 25 ಪ್ರತಿಶತದಷ್ಟು ಪಾಲನ್ನು ಚೀನೀ ಒಕ್ಕೂಟಕ್ಕೆ ಮಾರಾಟ ಮಾಡುವುದಾಗಿ ಹೇಳಿದೆ. ಈ ಮೂಲಕ ಭಾರತದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್, ಅಮೆರಿಕದ ನಾಸ್ಡಾಕ್ ಮತ್ತು ಇತರರ ಪ್ರತಿಸ್ಪರ್ಧಿ ಬಿಡ್ ಅನ್ನು ತಿರಸ್ಕರಿಸಿದೆ.

ಬಾಂಗ್ಲಾದೇಶದ ಪ್ರೀಮಿಯರ್ ಬೌರ್ಸ್ ನಿರ್ದೇಶಕರು ಫೆಬ್ರವರಿ 10 ರಂದು ಚೀನೀಯರ ಒಕ್ಕೂಟದ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ. ಆರ್ಥಿಕ ಮತ್ತು ತಾಂತ್ರಿಕ ಅಂಶಗಳನ್ನು ಪರಿಗಣಿಸಿ ಸ್ವೀಕಾರಾರ್ಹವೆಂದು ಅವರು ಪರಿಗಣಿಸಿದ್ದಾರೆ ಎಂದು bdnews24 ವರದಿ ಮಾಡಿದೆ.

ಶೆನ್ಜೆನ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಶಾಂಘೈ ಸ್ಟಾಕ್ ಎಕ್ಸ್ಚೇಂಜ್ ಒಕ್ಕೂಟವು ಮಂಗಳವಾರ ಸಂಜೆ ನಡೆದ ಸಮಾಲೋಚನಾ ಸಭೆಯಲ್ಲಿ ಅಂತಿಮ ಅನುಮತಿಯನ್ನು ನೀಡಿದೆ ಎಂದು ಡಿಎಸ್ಇ ವ್ಯವಸ್ಥಾಪಕ ನಿರ್ದೇಶಕ ಕೆಎಎಂ ಮಜದೂರ್ ರಹಮಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅವರು "ಶೀಘ್ರದಲ್ಲೇ" ನಿಯಂತ್ರಕರಿಗೆ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಅಥವಾ ಎಸ್ಇಸಿಗೆ ಪ್ರಸ್ತಾಪವನ್ನು ಅನುಮೋದನೆಗೆ ಕಳುಹಿಸಲಿದ್ದಾರೆ ಎಂದು ಅವರು ಹೇಳಿದರು.

Trending News