ಅಯೋಧ್ಯೆ ವಿವಾದ: 1994ರ ತೀರ್ಪನ್ನೇ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಅಯೋಧ್ಯೆ ವಿಚಾರವಾಗಿ ತೀರ್ಪು ನೀಡಿದ ಸುಪ್ರೀಂಕೋರ್ಟ್ 1994 ರಲ್ಲಿ  ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. 

Last Updated : Sep 27, 2018, 03:04 PM IST
ಅಯೋಧ್ಯೆ ವಿವಾದ: 1994ರ ತೀರ್ಪನ್ನೇ ಎತ್ತಿ ಹಿಡಿದ ಸುಪ್ರೀಂಕೋರ್ಟ್ title=

ನವದೆಹಲಿ: ಅಯೋಧ್ಯೆ ವಿಚಾರವಾಗಿ ತೀರ್ಪು ನೀಡಿದ ಸುಪ್ರೀಂಕೋರ್ಟ್ 1994 ರಲ್ಲಿ  ನೀಡಿದ ತೀರ್ಪನ್ನೇ ಎತ್ತಿ ಹಿಡಿದಿದೆ. 

ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನೇ ಈಗ ಅದು ಎತ್ತಿ ಹಿಡಿದಿದೆ. 1994ರಲ್ಲಿ  ಸುಪ್ರೀಂ 'ಮಸೀದಿಗಳಲ್ಲಿ ನಮಾಜ್ ಮಾಡುವುದು ಇಸ್ಲಾಂನ ಅವಿಭಾಜ್ಯ ಭಾಗವಲ್ಲ'  ಎನ್ನುವ ಆದೇಶವನ್ನು ನೀಡಿತ್ತು. ಈಗ ಅದೇ ತೀರ್ಪನ್ನು ಎತ್ತಿ  ಹಿಡಿದು ವಿಸ್ತ್ರತ ಪೀಠಕ್ಕೆ ಈ ಕೇಸ್ ನ ವರ್ಗಾವಣೆ ಇಲ್ಲ ಎಂದು  ತಿಳಿಸಿದೆ.ಅಯೋಧ್ಯೆಯ ಭೂ ವಿವಾದವನ್ನು ತ್ರೀ ಸದಸ್ಯ ಪೀಠ ನಿರ್ಧರಿಸಿಲಿದೆ .ಇದನ್ನು ಅವರು ನ್ಯಾಯಾಧೀಶರನ್ನು ಒಳಗೊಂಡ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು 2:1 ಬಹುಮತದ
ಪೀಠ ಹೇಳಿದೆ. 

ತೀರ್ಪನ್ನು ಓದಿದ ನ್ಯಾ. ಅಶೋಕ್ ಭೂಷಣ್  "ಮಸೀದಿಗಳು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ ಇಸ್ಮಾಯಿಲ್ ಫಾರುಕಿ ಅವರ ಅಭಿಪ್ರಾಯವನ್ನು ಇಸ್ಲಾಂ ಧರ್ಮದ ಹಿನ್ನೆಲೆಯಲ್ಲಿ ನೋಡಬೇಕಿಲ್ಲ" ಎಂದರು. ಇನ್ನೊಂದೆಡೆಗೆ ಇತರ ನ್ಯಾಯಮೂರ್ತಿಗಳ ತೀರ್ಪಿಗೆ ವಿರೋಧ ವ್ಯಕ್ತಪಡಿಸಿ ಅದಕ್ಕೆ ತಮ್ಮ ಸಹಮತವಿಲ್ಲ ಎಂದು ನ್ಯಾಯಮೂರ್ತಿ ನಜೀರ್ ತಿಳಿಸಿದ್ದಾರೆ.ಅಲ್ಲದೆ ನಮಾಜ್ ಗೆ ಮಸೀದಿ ಅವಶ್ಯಕತೆ ಇಲ್ಲ ಎನ್ನುವುದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಎಂದು ಅವರು ತಿಳಿಸಿದ್ದಾರೆ. 

1994 ರ ಪ್ರಕರಣ ಮತ್ತು ಅಯೋಧ್ಯೆ  ಪ್ರಕರಣ ಎರಡು ಬೇರೆ ಬೇರೆ ಎನ್ನುವ ಅಭಿಪ್ರಾಯಕ್ಕೆ ಬಂದಿರುವ ನ್ಯಾಯಮೂರ್ತಿಗಳು ಅಯೋಧ್ಯೆಯ ಜಾಗದ ಕುರಿತಾದ ವಿಚಾರಣೆ ಅಕ್ಟೋಬರ್ 29 ರಿಂದ ನಿರಂತರವಾಗಿ ನಡೆಸಲಿದೆ ಎನ್ನಲಾಗಿದೆ.

 

 

 

Trending News