ಉಮೇಶ್ ಪಾಲ್ ಹತ್ಯೆ ಪ್ರಕರಣ : ಅತೀಕ್ ಅಹ್ಮದ್ ಪುತ್ರ ಅಸದ್ ಎನ್ ಕೌಂಟರ್

UP STF Encounter : ಯುಪಿ ಎಸ್‌ಟಿಎಫ್ ಡೆಪ್ಯುಟಿ ಎಸ್‌ಪಿ ನಾವೆಂದು ಮತ್ತು ಡೆಪ್ಯೂಟಿ ಎಸ್‌ಪಿ ವಿಮಲ್ ನೇತೃತ್ವದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಅತಿಕ್‌ ಪುತ್ರ  ಅಸದ್ ಮತ್ತು ಶೂಟರ್ ಗುಲಾಮ್‌ ಇಬ್ಬರೂ ಹತರಾಗಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಿಂದ  ವಿದೇಶಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

Written by - Ranjitha R K | Last Updated : Apr 13, 2023, 02:24 PM IST
  • ಯುಪಿ ಎಸ್‌ಟಿಎಫ್ ತಂಡ ಭರ್ಜರಿ ಯಶಸ್ಸು
  • ಅತೀಕ್ ಅಹ್ಮದ್ ಪುತ್ರ ಅಸದ್, ಶೂಟರ್ ಗುಲಾಮ್ ಎನ್‌ಕೌಂಟರ್‌
  • ಸಿಎಂ ಯೋಗಿಗೆ ಕೃತಜ್ಞತೆ ಸಲ್ಲಿಸಿದ ಉಮೇಶ್ ಪಾಲ್ ಪತ್ನಿ
ಉಮೇಶ್ ಪಾಲ್ ಹತ್ಯೆ ಪ್ರಕರಣ : ಅತೀಕ್ ಅಹ್ಮದ್ ಪುತ್ರ ಅಸದ್ ಎನ್ ಕೌಂಟರ್ title=

UP STF Encounter : ಉಮೇಶ್ ಪಾಲ್ ಮರ್ಡರ್ ಪ್ರಕರಣದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಯುಪಿ ಎಸ್‌ಟಿಎಫ್ ತಂಡ ಭರ್ಜರಿ ಯಶಸ್ಸು ಕಂಡಿದೆ. ಪ್ರಕರಣದ ಆರೋಪಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್  ಅವರನ್ನು ಎನ್‌ಕೌಂಟರ್‌ ಮಾಡಲಾಗಿದೆ. ಝಾನ್ಸಿಯಲ್ಲಿ ಅತಿಕ್‌ ಪುತ್ರ  ಅಸದ್ ಮತ್ತು ಶೂಟರ್ ಗುಲಾಮ್‌ ನನ್ನು ಎನ್‌ಕೌಂಟರ್ ಮಾಡಲಾಗಿದೆ.  ಎನ್‌ಕೌಂಟರ್‌ನಲ್ಲಿ ಅಸದ್ ಮತ್ತು ಶೂಟರ್ ಗುಲಾಮ್ ಸಾವನ್ನಪ್ಪಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಇಬ್ಬರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. 

ಅಸದ್-ಗುಲಾಮ್  ಇಬ್ಬರ ಪತ್ತೆಗೆ 5-5 ಲಕ್ಷ ಬಹುಮಾನ ಘೋಷಿಸಲಾಗಿತ್ತು  : 
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಮತ್ತು ಶೂಟರ್ ಗುಲಾಮ್ ಇಬ್ಬರೂ ಆರೋಪಿಗಳಾಗಿದ್ದರು.  ಇಬ್ಬರ ಪತ್ತೆಗೆ 5 ಲಕ್ಷ ರೂಪಾಯಿ ಬಹುಮಾನ ಕೂಡಾ ಘೋಷಿಸಲಾಗಿತ್ತು.  ಇದೀಗ ಯುಪಿ ಎಸ್‌ಟಿಎಫ್ ಡೆಪ್ಯುಟಿ ಎಸ್‌ಪಿ ನಾವೆಂದು ಮತ್ತು ಡೆಪ್ಯೂಟಿ ಎಸ್‌ಪಿ ವಿಮಲ್ ನೇತೃತ್ವದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರೂ ಹತರಾಗಿದ್ದಾರೆ. ಎನ್ ಕೌಂಟರ್ ನಡೆದ ಸ್ಥಳದಿಂದ  ವಿದೇಶಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಇದನ್ನೂ ಓದಿ : ಎಪಿ ಸಿಎಂ ಜಗನ್‌ ಪೋಸ್ಟರ್‌ ಕಿತ್ತಿದ ʼನಾಯಿ ಮೇಲೆ ಕಂಪ್ಲೇಂಟ್‌ʼ..!

ಎಸ್‌ಟಿಎಫ್‌ಗೆ ಅಭಿನಂದನೆ ಸಲ್ಲಿಸಿದ  ಉಪ ಮುಖ್ಯಮಂತ್ರಿ :
ಈ ಮಧ್ಯೆ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, 'ಯುಪಿ ಎಸ್‌ಟಿಎಫ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಮಗನ ಎನ್ಕೌಂಟರ್ ಬಗ್ಗೆ ತಿಳಿದು ಅತೀಕ್ ಅಹ್ಮದ್ ಕಣ್ಣೀರು :  
ಪ್ರಯಾಗ್‌ರಾಜ್ ಕೋರ್ಟ್‌ನಲ್ಲಿ ತನ್ನ ಮಗ ಅಸದ್‌ನ ಎನ್‌ಕೌಂಟರ್ ಬಗ್ಗೆ ಅತೀಕ್ ಅಹ್ಮದ್‌ಗೆ ತಿಳಿಸಿದಾಗ, ಕಣ್ಣೀರು ಹಾಕಿದ್ದಾನೆ. ಉಮೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕ್ ಅಹಮದ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮತ್ತೊಂದೆಡೆ ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಅವರು ಸಿಎಂ ಯೋಗಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,000 ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆ..! ಜನರಲ್ಲಿ ಆತಂಕ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News