ಮುಂಬೈ: ನವಿ ಮುಂಬೈನ ಟುರ್ಬೆ ಎಂಐಡಿಸಿ ಪ್ರದೇಶದಲ್ಲಿನ ಶೋರೂಮ್ ಕಮ್ ಗೋಡೌನ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ (Navi Mumbai godown fire) 40ಕ್ಕೂ ಹೆಚ್ಚು ಬಿಎಂಡಬ್ಲ್ಯು ಕಾರುಗಳು (BMW cars) ಸುಟ್ಟು ಭಸ್ಮವಾಗಿವೆ. ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಇದನ್ನೂ ಓದಿ:Military chopper crashes : 'ಸೇನಾ ಮುಖ್ಯಸ್ಥರಿದ್ದ ಹೆಲಿಕಾಪ್ಟರ್ ಪತನ'
ಮಂಗಳವಾರ ಬೆಳಗಿನ ಜಾವ 5.30ರ ಸುಮಾರಿಗೆ ಬಿಎಂಡಬ್ಲ್ಯು ಕಾರುಗಳ ಶೋರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲಿ ನಿಲ್ಲಿಸಿದ್ದ ಕಾರುಗಳು ಸುಟ್ಟು ಕರಕಲಾಗಿವೆ ಎಂದು ಎಂಐಡಿಸಿ ಅಗ್ನಿಶಾಮಕ ಸೇವೆಗಳ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.
#BMWcar fire video https://t.co/mH0c4Sl5HQ pic.twitter.com/0I6qfQnIMq
— Indrajeet chaubey (@indrajeet8080) December 8, 2021
ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹತ್ತು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಘಟನೆಯಲ್ಲಿ ಕನಿಷ್ಟ 40-45 ಬಿಎಂಡಬ್ಲ್ಯು ಕಾರುಗಳು (BMW cars)ಸಂಪೂರ್ಣ ಸುಟ್ಟು ಕರಕಲಾಗಿವೆ ಎಂದು ತಿಳಿಸಿದ್ದಾರೆ.
ಬೆಂಕಿಯ ತೀವ್ರತೆ ಅತಿಹೆಚ್ಚಾಗಿದ್ದುದರಿಂದ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನದ ಜತೆ ನೆರುಲ್, ವಶಿಯಿಂದಲೂ ಸಿಬ್ಬಂದಿ ಬಂದರು. ಒಟ್ಟು 10 ಫೈರ್ ಫೈಟ್ ಟ್ರಕ್ಗಳನ್ನು ತರಲಾಗಿತ್ತು. 6ಗಂಟೆಗಳ ಸತತ ಪ್ರಯತ್ನದ ನಂತರ ಬೆಂಕಿ ಹತೋಟಿಗೆ ತರಲಾಯಿತು. ಆದರೆ ಬೆಂಕಿ ಬೀಳಲು ಕಾರಣ ಇನ್ನೂ ಪತ್ತೆಯಾಗಿಲ್ಲ. ಘಟನೆಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:ಆರ್ಟಿಕಲ್ 370 ರದ್ದತಿ ನಂತರ ಕಾಶ್ಮೀರದಲ್ಲಿ 366 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ: MoS ನಿತ್ಯಾನಂದ ರೈ