ಅಸ್ಸಾಂ: ಗೌಹಾಟಿಯಲ್ಲಿ ಕೊಳಕ್ಕೆ ಬಿದ್ದ ಬಸ್, 7 ಸಾವು,20 ಜನರಿಗೆ ಗಾಯ

 ಅಸ್ಸಾಂನ ಗೌಹಾಟಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಕೊಳದದಲ್ಲಿ ಬಿದ್ದಕಾರಣ  ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 20 ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Last Updated : Oct 20, 2018, 06:12 PM IST
ಅಸ್ಸಾಂ: ಗೌಹಾಟಿಯಲ್ಲಿ ಕೊಳಕ್ಕೆ ಬಿದ್ದ ಬಸ್, 7 ಸಾವು,20 ಜನರಿಗೆ ಗಾಯ  title=
Photo:ANI

ನವದೆಹಲಿ: ಅಸ್ಸಾಂನ ಗೌಹಾಟಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಕೊಳದದಲ್ಲಿ ಬಿದ್ದ ಕಾರಣ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 20 ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಸಮಯದಲ್ಲಿ ಗಾಯಗೊಂಡ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.ಈ ದುರ್ಘಟನೆಯು ಈಗ ಗೌಹಾಟಿ ಮತ್ತು ಮುಕಲುಮ್ವಾ ನಡುವೆ ನಡೆದಿದೆ. ಅಪಘಾತಕ್ಕೆ ಇಡಾಗಿರುವ ಬಸ್ ಅಸ್ಸಾಂ ರಾಜ್ಯ ಸಾರಿಗೆ ನಿಗಮಕ್ಕೆ ಸೇರಿದೆ ಎಂದು ಎಎನ್ಐ ತಿಳಿಸಿದೆ.

ಈಗ ಬಸ್ ನಲ್ಲಿದ್ದ ಪ್ರಯಾಣಿಕರ ಸಂಖ್ಯೆಯನ್ನು ಇನ್ನೂ ಖಚಿತಪಡಿಸಬೇಕಾಗಿದೆ ಮತ್ತು  ದುರ್ಘಟನೆಗಾಗಿ ಇನ್ನು ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

Trending News