ನವದೆಹಲಿ: ಅರಾವಳಿ ಶ್ರೇಣಿಯ ಅರಣ್ಯ ಬಲವರ್ಧನೆ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ರನ್ನು ತಮ್ಮ 27 ವರ್ಷಗಳಲ್ಲಿ 52 ನೇ ಬಾರಿಗೆ ವರ್ಗಾವಣೆ ಮಾಡಲಾಗಿದೆ.
1991 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅಶೋಕ್ ಖೇಮ್ಕಾ ಸದ್ಯ ಹರ್ಯಾಣದಲ್ಲಿ ಕ್ರೀಡೆ ಮತ್ತು ಯುವಜನ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈಗ ಅಲ್ಲಿಂದ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.ಇದು 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 6 ನೇ ವರ್ಗಾವಣೆಯಾಗಿದೆ.
Meanwhile, @AshokKhemka_IAS has been transferred again for raising his concerns over 'Aravali Hills consolidation', It's his 6th transfer since BJP govt in power in Haryana. Dare you to stand against the friend of powerful people.".
— Gajendra Sharma (@Airavta) March 3, 2019
ಶನಿವಾರದಂದು ಅಶೋಕ್ ಖೇಮ್ಕಾ ಮಾತನಾಡುತ್ತಾ " ಅರಣ್ಯದ ಬಳವರ್ದನೆ ಹೆಸರಿನಲ್ಲಿ ಶೇ 80 ರಷ್ಟು ಅರಾವಳಿ ಶ್ರೇಣಿ ಹಾಗೂ ಅರಣ್ಯ ನಾಶವಾಗಲಿದೆ. ಖಾಸಗಿ ಹಿತಾಸಕ್ತಿಗಳು ಸಾಮಾನ್ಯರ ಸಂಪತ್ತನ್ನು ವಶಪಡಿಸಿಕೊಂಡು ನಾಶಪಡಿಸಲಿವೆ, ಈಗಾಗಲೇ ಎನ್ ಸಿ ಆರ್ ನಲ್ಲಿ ಅಂತಹ ವಾತಾವರಣ ಇದೆ.ಈ ನಿರ್ಧಾರದಿಂದಾಗಿ ಭೂಮಿ ನುಂಗುವ ಶಾರ್ಕ್ ಗಳಿಗೆ ಆಹಾರವಾಗುತ್ತದೆ ಎಂದು ಅವರು ಹೇಳಿದ್ದರು.ಇದಾದ ಬೆನ್ನಲ್ಲೇ ಅವರನ್ನು ಹರ್ಯಾಣ ಸರ್ಕಾರ ಈಗ ವರ್ಗಾವಣೆ ಮಾಡಿದೆ.