ಸ್ಮೃತಿ ಇರಾನಿ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಶಾ ಭೋಸ್ಲೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ತೆರಳಿದ್ದ ಆಶಾ ಭೋಸ್ಲೆ ಅಲ್ಲಿ ನಡೆದ ಒಂದು ಪ್ರಸಂಗವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

Last Updated : May 31, 2019, 01:16 PM IST
ಸ್ಮೃತಿ ಇರಾನಿ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಶಾ ಭೋಸ್ಲೆ  title=
Pic Courtesy: instagram

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಾಳಜಿ ಬಗ್ಗೆ ಹಿರಿಯ ಗಾಯಕಿ ಆಶಾ ಭೋಸ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನ ಪಡೆದು ತೆರಳಿದ್ದ ಆಶಾ ಭೋಸ್ಲೆ ಅಲ್ಲಿ ನಡೆದ ಒಂದು ಪ್ರಸಂಗವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಶಪತ ಸಮಾರಂಭದ ಬಳಿಕ ಜನಸಂದಣಿಯಲ್ಲಿ ಸಿಲುಕಿದ್ದ ಆಶಾ ಭೋಸ್ಲೆ ಸಹಾಯಕ್ಕಾಗಿ ಹಲವು ಜನರನ್ನು ಕೇಳಿಕೊಂಡಿದ್ದಾರೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಇದನ್ನು ಗಮನಿಸಿದ ಸಚಿವೆ ಸ್ಮೃತಿ ಇರಾನಿ ತಕ್ಷಣ ಸಹಾಯಕ್ಕೆ ಧಾವಿಸಿ ಆಶಾ ಭೋಸ್ಲೆ ಅವರಿಗೆ ಸಹಾಯ ಮಾಡಿದ್ದಾರೆ.

ಈ ಬಗ್ಗೆ  ಸ್ಮೃತಿ ಇರಾನಿಯೊಂದಿಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿರುವ ಆಶಾ ಭೋಸ್ಲೆ, ಸ್ಮೃತಿ ಇರಾನಿ ಸಹಾಯದಿಂದ ನಾನು ಮನೆಗೆ ಸುರಕ್ಷಿತವಾಗಿ ಬಂದುದಾಗಿ ಸಂತಸ ವ್ಯಕ್ತಪಡಿಸಿದ್ದು, ಸ್ಮೃತಿ ಅವರಲ್ಲಿ ಇತರರ ಬಗ್ಗೆ ಕಾಳಜಿ ವಹಿಸುವ ಒಂದು ಭಾವನೆ ಇದೆ, ಅದರಿಂದಲೇ ಅವರು ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ ಎಂದಿದ್ದಾರೆ.

Trending News