ನವದೆಹಲಿ: ಮೈ ಭಿ ಚೌಕಿದಾರ್ ಅಭಿಯಾನದ ಭಾಗವಾಗಿ ಪ್ರಧಾನಿ ಮೋದಿ ವಿಡಿಯೋ ಸಂವಾದದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.ಇದೇ ವೇಳೆ ಬಿಜೆಪಿ ಪ್ರಮುಖ ನಾಯಕರು ಕೂಡ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
'मैं भी चौकीदार हूं' के नारे से गूंजा पूरा स्टेडियम। #MainBhiChowkidar pic.twitter.com/IN8pE61odB
— BJP (@BJP4India) March 31, 2019
ದೇಶಾದ್ಯಂತ 500 ಸ್ಥಳಗಳಲ್ಲಿನ ಜನರನ್ನು ಉದ್ದೇಶಿಸಿ ಪ್ರಧಾನಿ ಮೋದಿ ವಿಡಿಯೋ ಸಂವಾದದ ಮೂಲಕ ಭಾಷಣ ಮಾಡುತ್ತಾ "ದೇಶದ ಜನರು ಚೌಕಿದಾರ್ ರಿಗೆ ಪ್ರಾಮುಖ್ಯತೆ ನೀಡುತ್ತಾರೆ ಹೊರತು ರಾಜ ಮಹಾರಾಜರಿಗಲ್ಲ. ನಾವೆಲ್ಲರೂ ಕೂಡ ಚೌಕಿದಾರರು, ಸಮೃದ್ಧ ಭಾರತಕ್ಕಾಗಿ ನಾವು ಬದ್ದರಾಗಿದ್ದೇವೆ.ಆದ್ದರಿಂದ ಚೌಕಿದಾರ್ ನಂತೆ ನನ್ನ ಜವಾಬ್ದಾರಿಯನ್ನು ಪೋರೈಸುತ್ತೇನೆ ಎಂದು ಮೋದಿ ತಿಳಿಸಿದರು.
ಇದೇ ವೇಳೆ ಭಯೋತ್ಪಾದನೆ ವಿಚಾರವಾಗಿ ಪ್ರಸ್ತಾಪಿಸಿದ ಮೋದಿ " ನಾವು ಕಳೆದ 40 ವರ್ಷಗಳಿಂದ ಭಯೋತ್ಪಾಧನೆಯಿಂದಾಗಿ ನಲುಗಿದ್ದೇವೆ, ನಮಗೆ ಗೊತ್ತು ಇದಕ್ಕೆ ಯಾರು ಜವಾಬ್ದಾರಿ ಎನ್ನುವುದು. ಒಮ್ಮೊಮ್ಮೆ ಇದು ಎಲ್ಲಿಯವರೆಗೆ ಮುಂದುವರೆಯುತ್ತದೆ ಎಂದು ಅನಿಸಿತ್ತು, ಆಗ ನಾನು ಭಯೋತ್ಪಾಧನೆ ಎಲ್ಲಿಂದ ಉದ್ಬವವಾಗಿದೆಯೋ ಅಲ್ಲಿಂದಲೇ ಇದನ್ನು ನಾಶಪಡಿಸಬೇಕೆಂದು ನಾನು ನಿರ್ಧರಿಸಿದೆ" ಎಂದರು.
LIVE: PM @narendramodi's interaction with people across India. #MainBhiChowkidar https://t.co/QVzlnK3ONi
— BJP (@BJP4India) March 31, 2019
ಇದೇ ವೇಳೆ ಭವಿಷ್ಯದ ಬಗ್ಗೆ ಯುವಕರ ಚಿಂತಿಸುತ್ತಿರುವುದರ ಬಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು."ಈ ಚುನಾವಣೆ ನಂತರ 130 ಕೋಟಿ ಜನರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ" ಎಂದು ಮೋದಿ ಹೇಳಿದರು.