ಕೇಂದ್ರದ ನೂತನ ಮೋಟಾರು ಕಾಯ್ದೆ ಪರ ಅರವಿಂದ್ ಕೇಜ್ರಿವಾಲ್ ಬ್ಯಾಟಿಂಗ್..!

ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯ್ದೆಯನ್ನು ಭಾರಿ ದಂಡದ ಕಾರಣಕ್ಕೆ ಹಲವು ರಾಜ್ಯಗಳು ವಿರೋಧಿಸುತ್ತಿರಬಹುದು ಆದರೆ ಈಗ ಈ ಕಾಯ್ದೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಎಲ್ಲರ ಹುಬ್ಬರಿಸುವಂತೆ ಮಾಡಿದ್ದಾರೆ.

Last Updated : Sep 13, 2019, 02:47 PM IST
ಕೇಂದ್ರದ ನೂತನ ಮೋಟಾರು ಕಾಯ್ದೆ ಪರ ಅರವಿಂದ್ ಕೇಜ್ರಿವಾಲ್ ಬ್ಯಾಟಿಂಗ್..!   title=

ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯ್ದೆಯನ್ನು ಭಾರಿ ದಂಡದ ಕಾರಣಕ್ಕೆ ಹಲವು ರಾಜ್ಯಗಳು ವಿರೋಧಿಸುತ್ತಿರಬಹುದು ಆದರೆ ಈಗ ಈ ಕಾಯ್ದೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಎಲ್ಲರ ಹುಬ್ಬರಿಸುವಂತೆ ಮಾಡಿದ್ದಾರೆ.

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಕೇಂದ್ರದ ನಿಲುವಿಗೆ ಬೆಂಬಲಿಸಿದ್ದ ಅರವಿಂದ್ ಕೇಜ್ರಿವಾಲ್ ಈಗ ನೂತನ ಮೋಟಾರು ಕಾಯ್ದೆಯಿಂದಾಗಿ ದೆಹಲಿಯಲ್ಲಿ ಟ್ರಾಫಿಕ್ ನಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನವಂಬರ್ ತಿಂಗಳಿಂದ ಸಮ-ಬೆಸ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಇದೇ ವೇಳೆ ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯ್ದೆ ಬಗ್ಗೆ ಪ್ರಸ್ತಾಪಿಸಿದ ಕೇಜ್ರಿವಾಲ್ 'ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದಲೂ ದೆಹಲಿಯ ಸಂಚಾರದಲ್ಲಿ ಸುಧಾರಣೆಯಾಗಿದೆ' ಎಂದರು. ಯಾವುದೇ ನಿಯಮದಿಂದ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಮತ್ತು ದಂಡವನ್ನು ಕಡಿಮೆ ಮಾಡುವ ಅಧಿಕಾರ ನಮಗಿದ್ದರೆ ಅದನ್ನು ನಾವು ಖಂಡಿತವಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ತಂದಿರುವ ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆಯಡಿ ಚಾಲಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಹಲವು ರಾಜ್ಯಗಳು ಈ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಅಚ್ಚರಿ ಎಂದರೆ ಬಿಜೆಪಿ ಆಡಳಿತದ ರಾಜ್ಯಗಳಲ್ಲೇ ಈ ನಿಯಮ ಜಾರಿಯಾಗುವುದು ಕಷ್ಟಕರವಾಗಿದೆ. ಗುಜರಾತ್ ಈ ನಿಯಮದಲ್ಲಿ ಸ್ವಲ್ಪ ಬದಲಾವಣೆ ತಂದು ದಂಡದ ಪ್ರಮಾಣದಲ್ಲಿ ಕಡಿತ ಮಾಡಿದೆ.

ಈಗ ಇದೇ ಮಾದರಿಯನ್ನು ಆಧರಿಸಿ ಬಿಜೆಪಿ ಆಡಳಿತದಲ್ಲಿರುವ ಇತರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಕೂಡ ಕೇಂದ್ರವು ಹೊಸ ನಿಯಮಗಳನ್ನು ಮರುಪರಿಶೀಲಿಸದಿದ್ದಲ್ಲಿ ತಾವು ಕೂಡ ಹಾಗೆ ಮಾಡಬಹುದು ಎಂದು ಘೋಷಿಸಿವೆ

Trending News