ಅಮರಾವತಿ: 2022ರ ಹೊಸ ವರ್ಷಕ್ಕೆ ಆಂಧ್ರಪ್ರದೇಶ(Andhra Pradesh) ಜನತೆಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭರ್ಜರಿ ಗಿಫ್ಟ್ ನೀಡಿದ್ದಾರೆ. ವೃದ್ಧರು ಮತ್ತು ವಿಧವೆಯರಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿ( Social Security Pension)ಯನ್ನು 2,500 ರೂ. ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ಜನವರಿಂದ 250 ರೂ. ಸಾಮಾಜಿಕ ಭದ್ರತಾ ಪಿಂಚಣಿಯನ್ನು ಹೆಚ್ಚಿಸಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಜಗನ್(YS Jagan Mohan Reddy), ಯಾವ ಯಾವ ಯೋಜನೆಗಳನ್ನು ಯಾವಾಗ ಜಾರಿಗೆ ತರಬೇಕು ಎಂಬ ತೀರ್ಮಾನಗಳ ಬಗ್ಗೆ ತಿಳಿಸಿದ್ದಾರೆ. ಜನವರಿ 31ರೊಳಗೆ ‘ಪೆಡಲಂಡಿರಿಕಿ ಇಲ್ಲು ವಸತಿ ಯೋಜನೆ’ಯಡಿ ಮನೆಗಳ ನಿರ್ಮಾಣ ಪ್ರಾರಂಭಿಸಲು ಸಿಎಂ ಕೋರಿದ್ದಾರೆ. ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ 25 ಪೈಸೆ ಬಡ್ಡಿಯಲ್ಲಿ ವಸತಿ ಸಾಲ ನೀಡುವಂತೆ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Harbhajan Singh : ಕಾಂಗ್ರೆಸ್ ಸೇರುತ್ತಾರಾ ಹರ್ಭಜನ್ ಸಿಂಗ್? ಸುಳಿವು ನೀಡಿದ ನವಜೋತ್ ಸಿಂಗ್ ಸಿದ್ದು
ಇದೇ ತಿಂಗಳ ಡಿ.21ರಂದು ‘ಸಂಪೂರ್ಣ ಗೃಹ ಹಕ್ಕು ಯೋಜನೆ’ಯನ್ನು ಜಾರಿಗೆ ತರಲಿದ್ದೇವೆ. ಇಲ್ಲಿಯವರೆಗೂ ಸರ್ಕಾರದಿಂದ ಬೇರೆ ಯಾವುದೇ ಯೋಜನೆಗಳ ಲಾಭ ಪಡೆಯದವರಿಗೆ ಇದೇ ತಿಂಗಳು ಅವರಿಗೆ ಈ ಯೋಜನೆಯಲ್ಲಿ ಮನೆಗಳನ್ನು ನೀಡುವ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದಾರೆ. ಜನವರಿ 9ರಂದು 45 ರಿಂದ 60 ವರ್ಷ ವಯೋಮಿತಿಯ ಕಡುಬಡವ(ECB) ಮಹಿಳೆಯರಿಗೆ ವರ್ಷಕ್ಕೆ 15 ಸಾವಿರ ರೂ. ಹಣ ನೀಡಲಿದ್ದೇವೆ. ಇದೇ ರೀತಿ 3 ವರ್ಷಗಳವರೆಗೂ ನೀಡಲಾಗುವುದು. ಜನವರಿಯಲ್ಲಿಯೇ ‘ರೈತ ಭರೋಸಾ ಯೋಜನೆ’(Rythu Bharosa)ಯ 3ನೇ ಕಂತು ಬಿಡುಗಡೆ ಮಾಡಲಾಗುವುದು ಎಂದು ಘೋಸಿಸಿದ್ದಾರೆ.
ಮನೆಗಳ ನಿರ್ಮಾಣದಿಂದ ಆರ್ಥಿಕತೆಯೂ ಸುಧಾರಿಸುತ್ತದೆ ಎಂದು ಆಶಿಸಿರುವ ಸಿಎಂ ಜಗನ್(YS Jagan Mohan Reddy), ಉಪಕ್ರಮಕ್ಕೆ ಆದ್ಯತೆ ನೀಡುವಂತೆ ಮತ್ತು ಸಂಪೂರ್ಣ ಬಿಲ್‌ಗಳ ತ್ವರಿತ ಕ್ಲಿಯರೆನ್ಸ್ ಅನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸಾರಿಗೆ ಶುಲ್ಕ ಕಡಿಮೆ ಮಾಡಲು ವಸತಿ ಬಡಾವಣೆಗಳಲ್ಲಿ ಇಟ್ಟಿಗೆ ತಯಾರಿಕಾ ಘಟಕಗಳನ್ನು ಸ್ಥಾಪಿಸುವಂತೆ ಅವರು ಸೂಚಿಸಿದ್ದಾರೆ. ಸಿಮೆಂಟ್ ಮತ್ತು ಉಕ್ಕನ್ನು ಸಬ್ಸಿಡಿ ದರದಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸಬೇಕು. ಫಲಾನುಭವಿಗಳಿಗೆ 25 ಪೈಸೆ ಬಡ್ಡಿಯಲ್ಲಿ 35 ಸಾವಿರ ರೂ. ಸಾಲ ನೀಡಬೇಕು. ಈ ಸಂಬಂಧ ಬ್ಯಾಂಕರ್‌ಗಳೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: SBI Base Rate : SBI ಗ್ರಾಹಕರಿಗೆ ಬಿಗ್ ಶಾಕ್! ಬಡ್ಡಿದರ ಹೆಚ್ಚಿಸಿದೆ ಬ್ಯಾಂಕ್, ಹೊಸ ದರ ಇಲ್ಲಿ ಪರಿಶೀಲಿಸಿ
ಮನೆ ನಿರ್ಮಾಣದ ಗುಣಮಟ್ಟವನ್ನು ನೋಡಿಕೊಳ್ಳುವಂತೆ ಅವರು ಸಚಿವಾಲಯದ ಇಂಜಿನಿಯರಿಂಗ್ ಸಹಾಯಕರನ್ನು ಕೇಳಿದರು. ಮನೆಗಳ ನಿರ್ಮಾಣ ಮತ್ತು ಅವುಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಬಗ್ಗೆ ಮೇಲ್ವಿಚಾರಣೆ ಮಾಡಲು ಪ್ರತಿ ವಾರ ಗ್ರಾಮ ಸಚಿವಾಲಯದಿಂದ ಜಿಲ್ಲಾ ಮಟ್ಟದವರೆಗೆ ಸಾಪ್ತಾಹಿಕ ಸಭೆಗಳನ್ನು ನಡೆಸಬೇಕು. ಅರ್ಜಿ ಸಲ್ಲಿಸಿದ 90 ದಿನಗಳಲ್ಲಿ ಅರ್ಹರಿಗೆ ಮನೆ ನಿವೇಶನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದರು. ‘ಜಗನಣ್ಣ ಸ್ಮಾರ್ಟ್ ಟೌನ್‌ಶಿಪ್’ಗಳು ಮಧ್ಯಮ ವರ್ಗದ ಜನರಿಗೆ ಎಲ್ಲಾ ಸೌಲಭ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ವಿವಾದ-ಮುಕ್ತ ಪ್ಲಾಟ್‌ಗಳನ್ನು ನೀಡುವ ಗುರಿಯನ್ನು ಹೊಂದಿವೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.