Earthquake: ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವೆಡೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು

Earthquake: ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದಲ್ಲಿ ಇಂದು ಬೆಳಿಗ್ಗೆ ಭೂಕಂಪ ಸಂಭವಿಸಿದ್ದು ರಿಕ್ಟರ್ ಪ್ರಮಾಣದಲ್ಲಿ ಭೂಕಂಪದ ತೀವ್ರತೆಯು 6.2 ಎಂದು ವರದಿಯಾಗಿದೆ. ಈಶಾನ್ಯದ ಕೆಲವು ಭಾಗಗಳಲ್ಲಿ ಮತ್ತು ಉತ್ತರ ಬಂಗಾಳದಲ್ಲಿ ತೀವ್ರವಾದ ಭೂಕಂಪ ಸಂಭವಿಸಿದ್ದು ಜನರು ಮನೆಗಳಿಂದ ಹೊರಬಂದಿದ್ದಾರೆ.

Written by - Yashaswini V | Last Updated : Apr 28, 2021, 09:15 AM IST
  • ಈಶಾನ್ಯ ಭಾರತದಲ್ಲಿ ಇಂದು ಬೆಳಿಗ್ಗೆ ಭೂಕಂಪದ ಅನುಭವ
  • ರಿಕ್ಟರ್ ಪ್ರಮಾಣದಲ್ಲಿ ಭೂಕಂಪದ ತೀವ್ರತೆಯು 6.2ರಷ್ಟು ದಾಖಲು
  • ಭೂಕಂಪದ ಕೇಂದ್ರಬಿಂದು ಅಸ್ಸಾಂನ ತೇಜ್‌ಪುರದಿಂದ ಪಶ್ಚಿಮಕ್ಕೆ 43 ಕಿ.ಮೀ ದೂರದಲ್ಲಿದೆ
Earthquake: ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವೆಡೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲು  title=
Earthquake hits in Assam

ನವದೆಹಲಿ: ಅಸ್ಸಾಂನ ಗುವಾಹಟಿ ಸೇರಿದಂತೆ ಈಶಾನ್ಯ ಭಾರತದ ಹಲವೆಡೆ ಇಂದು ಬೆಳಿಗ್ಗೆ ಭೂಕಂಪದ ಅನುಭವವಾಗಿದೆ. ಮಾಹಿತಿಯ ಪ್ರಕಾರ, ಬೆಳಿಗ್ಗೆ 7.55 ಕ್ಕೆ ಸಂಭವಿಸಿದ ಈ ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.4 ಎಂದು ತಿಳಿದುಬಂದಿದೆ.

ಭೂಕಂಪದ ಕೇಂದ್ರಬಿಂದು ಅಸ್ಸಾಂನ (Assam) ತೇಜ್‌ಪುರದಿಂದ ಪಶ್ಚಿಮಕ್ಕೆ 43 ಕಿ.ಮೀ ದೂರದಲ್ಲಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಬೆಳಿಗ್ಗೆ 7:51 ಗಂಟೆಗೆ ಮೇಲ್ಮೈಯಿಂದ 17 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

ಇದನ್ನೂ ಓದಿ - Fire In Hospital: ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, ನಾಲ್ಕು ಮಂದಿ ಸಾವು

ಭೂಕಂಪದ ಕೇಂದ್ರ ಬಿಂದು ಅಸ್ಸಾಂನ ಸೋನಿತ್‌ಪುರ ಎಂದು ವರದಿಯಾಗಿದೆ. ಸತತ ಎರಡು ಬಾರಿ ಭೂಕಂಪದ ಅನುಭವವಾಗಿದೆ ಎಂದು ಹೇಳಲಾಗುತ್ತಿದೆ, ಅದರಲ್ಲಿ ಬೆಳಿಗ್ಗೆ 7.55 ಕ್ಕೆ ಮೊದಲ ಬಾರಿಗೆ ಭೂಕಂಪದ (Earthquake) ಅನುಭವವಾಗಿದೆ. ಈ ಸಮಯದಲ್ಲಿ ಹಲವಾರು ನಿಮಿಷಗಳವರೆಗೆ ಅನುಭವವಾಗಿದೆ. ಸ್ವಲ್ಪ ಸಮಯದ ನಂತರ ಎರಡನೇ ಆಘಾತವನ್ನು ಅನುಭವಿಸಲಾಯಿತು. ಭೂಕಂಪದ ಸುದ್ದಿ ಬಂದ ಕೂಡಲೇ ಜನರು ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಭೂಕಂಪದಿಂದಾಗಿ ಅಸ್ಸಾಂನ ಅನೇಕ ಮನೆಗಳಲ್ಲಿ ಬಿರುಕುಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ - Corona ವಿರುದ್ಧ ಹೋರಾಟಕ್ಕಿಳಿದ ಭಾರತೀಯ ಸೇನೆ

ಭೂಕಂಪದ ಕೆಲವೇ ನಿಮಿಷಗಳ ನಂತರ ಟ್ವೀಟ್ ಮಾಡಿದ ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಕಟ್ಟಡದ ಒಳಗೆ ಮತ್ತು ಮುರಿದ ಗೋಡೆಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಭೂಕಂಪದ ಪರಿಣಾಮವನ್ನು ತೋರಿಸುತ್ತದೆ.

ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ ಬಳಿ 5.4 ತೀವ್ರತೆಯ ಭೂಕಂಪ ಸಂಭವಿಸಿದ ಕೆಲವೇ ವಾರಗಳ ನಂತರ ಅಸ್ಸಾಂನಲ್ಲಿ ಭೂಕಂಪ ಸಂಭವಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News