ಅಮೃತಸರ್ ದುರಂತ: ಪಟಾಕಿ ಸಪ್ಪಳದಿಂದ ರೈಲ್ವೆ ಸದ್ದು ಮಸುಕಾಗಿದ್ದು ದುರಂತಕ್ಕೆ ಕಾರಣ !

ಶುಕ್ರವಾರದಂದು ಸಂಭವಿಸಿದ ರೈಲು ದುರಂತದ ಅಪಘಾತವೊಂದರಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಚೌರಾ ಬಜಾರ್ನಲ್ಲಿ ದಸರಾ ಉತ್ಸವವನ್ನು ವೀಕ್ಷಿಸಲು ಸೇರಿದ್ದಾಗ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಪಟಾಕಿ ಸಪ್ಪಳದಿಂದ ಬರುತ್ತಿರುವ ರೈಲ್ವೆಯ ಶಬ್ದ ಮಸುಕಾಗಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

Last Updated : Oct 20, 2018, 10:36 AM IST
ಅಮೃತಸರ್ ದುರಂತ: ಪಟಾಕಿ ಸಪ್ಪಳದಿಂದ ರೈಲ್ವೆ ಸದ್ದು ಮಸುಕಾಗಿದ್ದು ದುರಂತಕ್ಕೆ ಕಾರಣ ! title=

ಅಮೃತಸರ: ಶುಕ್ರವಾರದಂದು ಸಂಭವಿಸಿದ ರೈಲು ದುರಂತದ ಅಪಘಾತವೊಂದರಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿನ ಚೌರಾ ಬಜಾರ್ನಲ್ಲಿ ದಸರಾ ಉತ್ಸವವನ್ನು ವೀಕ್ಷಿಸಲು ಸೇರಿದ್ದಾಗ ಈ ದುರಂತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಪಟಾಕಿ ಸಪ್ಪಳದಿಂದ ಬರುತ್ತಿರುವ ರೈಲ್ವೆಯ ಶಬ್ದ ಮಸುಕಾಗಿದ್ದರಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಒಂದು ಅಂದಾಜಿನ ಪ್ರಕಾರ ಇಲ್ಲಿ ಸುಮಾರು 7 ಸಾವಿರದಷ್ಟು ಜನರು ದಸರಾ ಹಬ್ಬದ ಆಚರಣೆಯಲ್ಲಿ ಸೇರಿದ್ದರು ಎಂದು ಹೇಳಲಾಗಿದೆ.ಜನದಟ್ಟನೆ ಹೆಚ್ಚಾಗಿದ್ದರಿಂದಾಗಿ ಕೆಲವರು ರೈಲ್ವೆ ಟ್ರಾಕ್ ಮೇಲೆ ನಿಲ್ಲಬೇಕಾಯಿತು. ಅನೇಕರು ಸೆಲ್ಪಿ ಕ್ಲಿಕ್ಕಿಸುವುದರಲ್ಲಿ ಮತ್ತು ವೀಡಿಯೊ ಮಾಡುವುದರಲ್ಲಿ  ನಿರತರಾಗಿದ್ದರು ಇದರಿಂದಾಗಿ ಬಹುತೇಕರಿಗೆ ರೈಲು ಬಂಧಿದ್ದೆ ಗೊತ್ತಾಗಿಲ್ಲ ಎಂದು ಹೇಳಲಾಗಿದೆ. 

ಸಚಿವ ನವಜೋತ್ ಸಿಂಗ್ ಸಿಧು ಅವರ ಪತ್ನಿ ಈ ಕಾರ್ಯಕ್ರಮದ ಅತಿಥಿಯಾಗಿದ್ದರಿಂದಾಗಿ ಈಗ ಕೆಲವರು ಅವರ ಮೇಲೆ ಆಪಾಧನೆ ಮಾಡುತ್ತಿದ್ದಾರೆ.ಇನ್ನು ಕೆಲವರು ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ಕೆಲವರು ಆರೋಪಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮೃತ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.

Trending News