Amrit Pal Singh ಬಂಧನ, 'ಇದು ಸರೆಂಡರ್ ಅಲ್ಲ', DGP ಮಹತ್ವದ ಹೇಳಿಕೆ

Amritpal Singh News: ಅಮೃತ್ ಪಾಲ್ ಸಿಂಗ್ ಶರಣಾಗತಿಯ ಸುದ್ದಿಯನ್ನು ಪಂಜಾಬ್ ಡಿಜಿಪಿ ತಿರಸ್ಕರಿಸಿದ್ದಾರೆ. ಇದರ ಜೊತೆಗೆ ಅಮೃತ್ ಪಾಲ್ ಸಿಂಗ್ ಅವರ ಬಂಧನದ ಕುರಿತು ರಾಜ್ಯ ಪೊಲೀಸ್ ಇಲಾಖೆ ಗಂಭೀರ ಹೇಳಿಕೆ ನೀಡಿದೆ.   

Written by - Nitin Tabib | Last Updated : Apr 23, 2023, 02:13 PM IST
  • ಅಮೃತ್ ಪಾಲ್ ಸಿಂಗ್ ರೋಡ್ ಗ್ರಾಮದ ಗುರುದ್ವಾರದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ನಮ್ಮ ಬಳಿ ಇತ್ತು.
  • ಗುರುದ್ವಾರ ಸಾಹಿಬ್ ಅವರ ಘನತೆಯನ್ನು ಉಳಿಸಿಕೊಂಡು ನಾವು ಅವನನ್ನು ಬಂಧಿಸಿದ್ದೇವೆ.
  • ಆತನನ್ನು ಬಂಧಿಸಿದ ನಂತರ ಅಸ್ಸಾಂನ ದಿಬ್ರುಗಢಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ
Amrit Pal Singh ಬಂಧನ, 'ಇದು ಸರೆಂಡರ್ ಅಲ್ಲ', DGP ಮಹತ್ವದ ಹೇಳಿಕೆ title=

Amritpal Singh Arrest: ಖಲಿಸ್ತಾನ್ ಬೆಂಬಲಿಗ ಅಮೃತಪಾಲ್ ಸಿಂಗ್ ಬಂಧನದ ಕುರಿತು ಪಂಜಾಬ್ ಪೊಲೀಸರು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಮೃತಪಾಲ್ ಸಿಂಗ್ ಕುರಿತ ಸುದ್ದಿಯನ್ನು ನಾವು ಖಚಿತಪಡಿಸಿದ್ದೇವೆ ಎಂದು ಐಜಿಪಿ ಸುಖಚೈನ್ ಸಿಂಗ್ ಗಿಲ್ ಹೇಳಿದ್ದಾರೆ. ಆದರೆ ಅವನು ಶರಣಾಗಿಲ್ಲ ಮತ್ತು ಪೊಲೀಸ್ ತಂಡ ರೋಡ್ ಗ್ರಾಮವನ್ನು ಎಲ್ಲಾ ಕಡೆಯಿಂದ ಸುತ್ತುವರೆದು ಬಂಧಿಸಿದೆ ಎಂದಿದ್ದಾರೆ. ಅಮೃತಪಾಲ್ ಸಿಂಗ್ ಬಳಿ ಯಾವುದೇ ಆಯ್ಕೆ ಇರಲಿಲ್ಲ. ನಮ್ಮ ತಂಡ ಗುರುದ್ವಾರದ ಒಳಗೆ ಹೋಗಲಿಲ್ಲ. ಗುರುದ್ವಾರದ ಪಾವಿತ್ರ್ಯತೆಯ ಬಗ್ಗೆ ಸಂಪೂರ್ಣ ಕಾಳಜಿವಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಇಂದು ಬೆಳಗ್ಗೆ 6.45ರ ಸುಮಾರಿಗೆ ಅಮೃತಪಾಲ್ ಅವನನ್ನು ಪೊಲೀಸರು ಬಂಧಿಸಿದ್ದಾರೆ. ಅಮೃತಪಾಲ್ ಸಿಂಗ್ ನನ್ನು ವಿಶೇಷ ವಿಮಾನದ ಮೂಲಕ ಅಸ್ಸಾಂಗೆ ಕಳುಹಿಸಲಾಗಿದೆ. ಅವರನ್ನು ದಿಬ್ರುಗಢ ಜೈಲಿನಲ್ಲಿ ಇರಿಸಲಾಗುವುದು ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. ಪಂಜಾಬ್ ನ ಜನರು ಶಾಂತಿ ಕಾಪಾಡಿದ್ದಾರೆ. ಇದಕ್ಕಾಗಿ ಅವರು ಅಭಿನಂದನೆಗೆ ಅರ್ಹರು. ಪಂಜಾಬ್‌ನಲ್ಲಿ ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ

ಕಾರ್ಯಾಚರಣೆ ನಡೆಸಿ ಅಮೃತಪಾಲ್ ನನ್ನು ಬಂಧಿಸಲಾಗಿದೆ
ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ, ಕೋಮು ಸೌಹಾರ್ದತೆ ಇದ್ದು, ಯಾವುದೇ ಅಹಿತಕರ ಘಟನೆಯ ಆತಂಕವಿಲ್ಲ ಎಂದು ಐಜಿಪಿ ಸುಖಚೈನ್ ಸಿಂಗ್ ಗಿಲ್ ಹೇಳಿದ್ದಾರೆ. ಅಮೃತಪಾಲ್ ಸಿಂಗ್ ವಿರುದ್ಧ NSA ವಾರಂಟ್‌ಗಳನ್ನು ಹೊರಡಿಸಲಾಗಿತ್ತು  ನಂತರ ಅವರನ್ನು NSA ಅಡಿಯಲ್ಲಿ ಬಂಧಿಸಲಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯ ಸಮಯದಲ್ಲಿ, ಪಂಜಾಬ್‌ನ ಜನರು ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿದ್ದಾರೆ, ಹೀಗಾಗಿ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಕಾರ್ಯಾಚರಣೆ ನಡೆಸಿ ಬೆಳಗ್ಗೆ 6:45ಕ್ಕೆ ಅಮೃತ್ ಪಾಲ್ ಸಿಂಗ್ ಅವನನ್ನು ಬಂಧಿಸಲಾಗಿದೆ. 

ಇದನ್ನೂ ಓದಿ-CM Shinde ವಿರುದ್ಧ ನಡೆಯಲಿದೆಯೇ ಗೇಮ್! ಭಾರಿ ಸಂಚಲನಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

ಅಮೃತಪಾಲ್ ಅವರನ್ನು ದಿಬ್ರುಗಢ ಜೈಲಿನಲ್ಲಿ ಇರಿಸಲಾಗುವುದು
ಅಮೃತ್ ಪಾಲ್ ಸಿಂಗ್  ರೋಡ್ ಗ್ರಾಮದ ಗುರುದ್ವಾರದಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ನಮ್ಮ ಬಳಿ ಇತ್ತು.  ಗುರುದ್ವಾರ ಸಾಹಿಬ್ ಅವರ ಘನತೆಯನ್ನು ಉಳಿಸಿಕೊಂಡು ನಾವು ಅವನನ್ನು ಬಂಧಿಸಿದ್ದೇವೆ.  ಆತನನ್ನು ಬಂಧಿಸಿದ ನಂತರ ಅಸ್ಸಾಂನ ದಿಬ್ರುಗಢಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ

ಇದನ್ನೂ ಓದಿ-Corona ಕುರಿತು ಭಾರತೀಯ ವಿಜ್ಞಾನಿಗಳ ಬೆಚ್ಚಿಬೀಳಿಸುವ ಅಧ್ಯಯನ ಪ್ರಕಟ, ಮಕ್ಕಳ ಮೇಲೆ ಅಪಾಯದ ಕಾರ್ಮೋಡ!

ಜಂಟಿ ಕಾರ್ಯಾಚರಣೆಯಲ್ಲಿ ಪರಾರಿಯಾಗಿದ್ದ
ಪಂಜಾಬ್ ಪೊಲೀಸ್ ಮತ್ತು ಗುಪ್ತಚರ ವಿಭಾಗದ ಜಂಟಿ ಕಾರ್ಯಾಚರಣೆಯಲ್ಲಿ ಖಲಿಸ್ತಾನ್ ಬೆಂಬಲಿಗ ಮತ್ತು ವಾರಿಸ್ ಪಂಜಾಬ್ ದಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ನನ್ನು  ಬಂಧಿಸಲಾಗಿದೆ ಎಂದು ಐಜಿಪಿ ಸುಖಚೈನ್ ಸಿಂಗ್ ಗಿಲ್ ಹೇಳಿದ್ದಾರೆ. ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳ ವಿರುದ್ಧ ಎಚ್ಚರಿಕೆ ಹೊರಡಿಸಲಾಗಿತ್ತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News