ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಅಮಿತ್ ಶಾ, ಯೋಗಿ- Video

ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಷಾ ಆಗಮನದಿಂದಾಗಿ ಉತ್ಸುಕರಾದ ಸಾಧು, ಸಂತರು ತಾವೂ ಸಹ ಅವರೊಂದಿಗೆ ಸಂಗಮದಲ್ಲಿ ಮುಳುಗೆದ್ದರು. 

Last Updated : Feb 13, 2019, 03:02 PM IST
ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಅಮಿತ್ ಶಾ, ಯೋಗಿ- Video title=
Photo Courtesy: ANI

ಪ್ರಯಾಗರಾಜ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಕುಂಭ ಮೇಲಕ್ಕೆ ಆಗಮಿಸಿ, ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. 

ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್ ಮತ್ತು ಅಮಿತ್ ಷಾ ಆಗಮನದಿಂದಾಗಿ ಉತ್ಸುಕರಾದ ಸಾಧು, ಸಂತರು ತಾವು ಸಹ ಅವರೊಂದಿಗೆ ಸಂಗಮದಲ್ಲಿ ಮುಳುಗೆದ್ದರು. 

ಪಕ್ಷದ ಅಧಿಕೃತ ಹೇಳಿಕೆಯ ಪ್ರಕಾರ, ಇಂದು ಅಮಿತ್ ಷಾ ಪ್ರಯಾಗರಾಜ್'ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಬಳಿಕ ಸಾಧು ಸಂತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಆದರೆ, ಅಮಿತ್ ಷಾ ಹೋದ ಕಡೆಯಲ್ಲೆಲ್ಲಾ ಹಿಂದೂ ಧರ್ಮದ ವಿವಿಧ ಸಂಘಟನೆಗಳು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸುತ್ತಿರುವುದು ಸರ್ಕಾರದ ಮೇಲೇ ಮತ್ತಷ್ಟು ಒತ್ತಡ ಹೇರಿದಂತಾಗಿದೆ. 
 

Trending News