Arvind Kejriwal: ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ದೆಹಲಿ ಸಿಎಂ ಮಹತ್ವದ ಘೋಷಣೆ

Yoga Classes For Home Isolated Patients: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ ಜನರಿಗೆ ಆನ್‌ಲೈನ್ ಯೋಗ ತರಗತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

Written by - Zee Kannada News Desk | Last Updated : Jan 11, 2022, 02:08 PM IST
  • 40 ಸಾವಿರ ಜನರು ಒಟ್ಟಾಗಿ ಯೋಗ ಮಾಡಲು ಸಾಧ್ಯವಾಗುತ್ತದೆ- ಸಿಎಂ ಕೇಜ್ರಿವಾಲ್
  • ಯೋಗ ತರಬೇತುದಾರರಿಗೆ ವಿಶೇಷ ತರಬೇತಿ ನೀಡಲಾಗಿದೆ- ಸಿಎಂ ಕೇಜ್ರಿವಾಲ್
  • ಯೋಗ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ- ಸಿಎಂ ಕೇಜ್ರಿವಾಲ್
Arvind Kejriwal: ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ನಡುವೆ ದೆಹಲಿ ಸಿಎಂ ಮಹತ್ವದ ಘೋಷಣೆ title=
Yoga Classes For Home Isolated Patients

Yoga Classes For Home Isolated Patients: ಕೊರೊನಾವೈರಸ್  (Coronavirus) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ಮಂಗಳವಾರ) ಸುದ್ದಿಗೋಷ್ಠಿ ನಡೆಸಿದರು. ಕರೋನಾ ವೈರಸ್ ಸೋಂಕಿಗೆ ಒಳಗಾದ ನಂತರ ಮನೆಯಲ್ಲಿ ಕ್ವಾರಂಟೈನ್ ನಲ್ಲಿರುವ ಜನರಿಗೆ ಆನ್‌ಲೈನ್ ಯೋಗ ತರಗತಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಪ್ರಾಣಾಯಾಮ ಮತ್ತು ಯೋಗದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ .ಹಾಗಾಗಿ ಕರೋನ ಸೋಂಕಿಗೆ ಒಳಗಾದವರಿಗೆ ಆನ್‌ಲೈನ್ ಮೂಲಕ ಯೋಗ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕರೋನಾ ಸೋಂಕಿತರಿಗೆ ಯೋಗ ತರಗತಿಗಳು ಪ್ರಾರಂಭವಾಗಲಿವೆ:
ಕಳೆದ ಎರಡು ದಿನಗಳಲ್ಲಿ ದೆಹಲಿಯಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗಿವೆ ಎಂದು ಮಾಹಿತಿ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ಮುಂದಿನ ದಿನಗಳಲ್ಲಿ ಈ ಪ್ರವೃತ್ತಿ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಕರೋನಾ ಬೆಳವಣಿಗೆಯ ವೇಗ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ ಇಂದು ನಾವು ಕರೋನಾ ಸೋಂಕಿಗೆ ಒಳಗಾದವರಿಗಾಗಿ ಒಂದು ಅದ್ಭುತವಾದ ಕಾರ್ಯಕ್ರಮವನ್ನು ತಂದಿದ್ದೇವೆ. ಅದು ವಿಶೇಷವಾಗಿ ಕರೋನಾ ಪಾಸಿಟಿವ್ ಆಗಿ ಮನೆಯಲ್ಲೇ ಐಸೋಲೇಶನ್‌ನಲ್ಲಿರುವವರಿಗಾಗಿ ಈ ಕಾರ್ಯಕ್ರಮವನ್ನು ತಂದಿದ್ದೇವೆ. ಯೋಗ-ಪ್ರಾಣಾಯಾಮದಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗವು ಕೋವಿಡ್-19 ಸರಪಳಿಯನ್ನು ಮುರಿಯುತ್ತದೆ ಎಂದು ನಾನು ಹೇಳುವುದಿಲ್ಲ. ಆದರೆ ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಕರೋನಾವೈರಸ್ ವಿರುದ್ಧ ಹೋರಾಡುವ ನಮ್ಮ ದೇಹದ ಸಾಮರ್ಥ್ಯವು ಹೆಚ್ಚಾಗುತ್ತದೆ. ಅದಕ್ಕಾಗಿ ಹೋಂ ಕ್ವಾರಂಟೈನ್ ನಲ್ಲಿರುವವರಿಗೆ ನಾವು ಆನ್‌ಲೈನ್ ಯೋಗ ತರಗತಿಗಳನ್ನು ಪ್ರಾರಂಭಿಸುತ್ತೇವೆ ಎಂದರು.

ಇದನ್ನೂ ಓದಿ- Omicron ಪತ್ತೆಗೆ ಭಾರತ ನಿರ್ಮಿತ RT-PCR ಕಿಟ್ ಗೆ DCGI ಅನುಮೋದನೆ

ಯೋಗ ತರಗತಿಗಳಿಗೆ ನೋಂದಾಯಿಸುವುದು ಹೇಗೆ?
ಹೋಂ ಕ್ವಾರಂಟೈನ್ ನಲ್ಲಿರುವ ಜನರು ಯೋಗ ತರಬೇತುದಾರರೊಂದಿಗೆ ಮನೆಯಲ್ಲಿ ಕುಳಿತು ಯೋಗ ಮಾಡಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಯೋಗ ತರಬೇತುದಾರರ (Yoga Classes) ಬೃಹತ್ ತಂಡವನ್ನು ಸಿದ್ಧಪಡಿಸಲಾಗಿದೆ. ಯಾವ ಯೋಗಗಳು ಕರೋನಾಗೆ ಸಂಬಂಧಿಸಿವೆ, ಇದಕ್ಕಾಗಿ ಯಾವ ಪ್ರಾಣಾಯಾಮ ಮಾಡುವುದು ಮುಖ್ಯ ಎಂಬ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಹೋಮ್ ಐಸೋಲೇಶನ್‌ನಲ್ಲಿರುವವರಿಗೆ ನೋಂದಾಯಿಸಲು ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ, ಅವರು ಯಾವ ಸಮಯದಲ್ಲಿ ಯೋಗ ಮಾಡಲು ಬಯಸುತ್ತಾರೆ ಎಂದು ಹೇಳಬಹುದು?

ಒಂದು ದಿನದಲ್ಲಿ ಎಷ್ಟು  ಯೋಗ ತರಗತಿಗಳು ಇರುತ್ತವೆ?
ಒಂದು ದಿನದಲ್ಲಿ ಎಷ್ಟು ಯೋಗದ ತರಗತಿಗಳು ನಡೆಯುತ್ತವೆ ಎಂಬ ಬಗ್ಗೆಯೂ ಮಾಹಿತಿ ನೀಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬೆಳಗ್ಗೆ 6ರಿಂದ 11ರವರೆಗೆ ತಲಾ ಒಂದು ಗಂಟೆಯ 5 ಯೋಗ ತರಗತಿಗಳು ನಡೆಯಲಿವೆ ಎಂದು ತಿಳಿಸಿದರು. ನಂತರ ಸಂಜೆ 4ರಿಂದ 7ರವರೆಗೆ 3 ಯೋಗ ತರಗತಿಗಳು ನಡೆಯಲಿವೆ. ಒಂದು ದಿನದಲ್ಲಿ ಒಟ್ಟು 8 ತರಗತಿಗಳು ಇರುತ್ತವೆ. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಅದನ್ನು ನೋಂದಾಯಿಸಿಕೊಳ್ಳಬಹುದು. 40 ಸಾವಿರ ಜನರು ಒಟ್ಟಾಗಿ ಯೋಗ ತರಗತಿಗಳನ್ನು ತೆಗೆದುಕೊಳ್ಳಬಹುದು, ನಮ್ಮಲ್ಲಿ ತುಂಬಾ ಯೋಗ ತರಬೇತುದಾರರಿದ್ದಾರೆ. ಆದರೆ ಒಂದು ತರಗತಿಯಲ್ಲಿ ಕೇವಲ 15 ಜನರು ಒಟ್ಟಾಗಿ ಯೋಗ ಮಾಡುತ್ತಾರೆ, ಇದರಿಂದ ಯೋಗ ಬೋಧಕರು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಕೇಂದ್ರೀಕರಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ- ದೆಹಲಿಯಲ್ಲಿ ಈಗ ಮೂರನೇ ಕೊರೊನಾ ಅಲೆ ಜಾರಿಯಲ್ಲಿದೆ- ಸತ್ಯೆಂದರ್ ಜೈನ್

ಯೋಗ ತರಗತಿಗಳ ಸಮಯದಲ್ಲಿ ಜನರು ಯೋಗ ತರಬೇತುದಾರರೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ. ಕರೋನಾ ಪಾಸಿಟಿವ್ ಆಗಿರುವವರು ಈ ಸಮಯದಲ್ಲಿ ತಮ್ಮ ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಇದ್ದರೆ, ಅವರು ಯೋಗ ತರಬೇತುದಾರರನ್ನು ಕೇಳಲು ಸಾಧ್ಯವಾಗುತ್ತದೆ. ಇಂದು (ಮಂಗಳವಾರ) ಎಲ್ಲರಿಗೂ ಲಿಂಕ್‌ಗಳು ಹೋಗಲಿದ್ದು, ನಾಳೆಯಿಂದ (ಬುಧವಾರ) ಯೋಗ ತರಗತಿಗಳು ಆರಂಭವಾಗಲಿವೆ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News