ಚೀನಾ ಮೂಲದ 59 ಆಪ್ ಗಳ ಮೇಲೆ ಭಾರತದ Digital Surgical Strike, ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದ ಅಮೇರಿಕಾ

ಲಡಾಖ್‌ನಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಚೀನಾದ ಟಿಕ್‌ಟಾಕ್ (ಟಿಕ್‌ಟಾಕ್), ಹೆಲೋ (ಹೆಲೋ) ಸೇರಿದಂತೆ 59 ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.

Last Updated : Jul 1, 2020, 05:30 PM IST
ಚೀನಾ ಮೂಲದ 59 ಆಪ್ ಗಳ ಮೇಲೆ ಭಾರತದ Digital Surgical Strike, ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದ ಅಮೇರಿಕಾ title=

ನವದೆಹಲಿ: ಲಡಾಖ್‌ನಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಕುರಿತು ನಡೆಯುತ್ತಿರುವ ವಿವಾದಗಳ ಮಧ್ಯೆ ಚೀನಾದ ಟಿಕ್‌ಟಾಕ್ (Tiktok) ಹೆಲೋ (Helo) ಸೇರಿದಂತೆ 59 ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಆದರೆ, ಇದೀಗ ಅಮೆರಿಕಾದಲ್ಲಿ ವೀಡಿಯೊ ಮತ್ತು ಶೇರಿಂಗ್ ಅಪ್ಲಿಕೇಶನ್‌ಗಳು ದೇಶದ ಸುರಕ್ಷತೆಗೆ ಮಾರಕವಾಗಿವೆ ಎಂದು ಹೇಳಲಾಗುತ್ತಿದೆ. ಚೀನಾದ 59 ಆ್ಯಪ್‌ಗಳನ್ನು ಭಾರತ ನಿಷೇಧಿಸಿದ್ದು, ಅವು ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಭದ್ರತೆಗೆ ಅಪಾಯಕಾರಿ ಎಂದು ಹೇಳಿದೆ. ಏತನ್ಮಧ್ಯೆ, ರಿಪಬ್ಲಿಕನ್ ಸೆನೆಟರ್ ಜಾನ್ ಕಾರ್ನಿನ್, "ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ಮಧ್ಯೆ ಟಿಕ್ ಟಾಕ್ ಮತ್ತು ಡಜನ್ಗಟ್ಟಲೆ ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ" ಎಂದು ಹೇಳಿದ್ದಾರೆ. 

ಕಳೆದ ವಾರವಷ್ಟೇ ಈ ಕುರಿತು ಹೇಳಿದೆ ನೀಡಿದ್ದ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರಿಯೆನ್, ಚೀನಾ ಸರ್ಕಾರ ತನ್ನ ಸ್ವಂತ ಉದ್ದೇಶಗಳಿಗಾಗಿ ಟಿಕ್ ಟಾಕ್ ಅನ್ನು ಬಳಸುತ್ತಿದೆ ಎಂದು ಆರೋಪಿಸಿದ್ದರು. 40 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ ಬಳಕೆದಾರರು, ನಿಮ್ಮ ಮಕ್ಕಳು ಮತ್ತು ಕಿರಿಯ ಮಿತ್ರರಾಷ್ಟ್ರಗಳನ್ನು ಹೊಂದಿರುವ ಚೀನಾದ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟಿಕ್ ಟಾಕ್ ನಲ್ಲಿ CCP (ಚೀನಾ ಕಮ್ಯೂನಿಸ್ಟ್ ಪಾರ್ಟಿ) ಹಾಗೂ ಬಿಜಿಂಗ್ ನೀತಿಗಳನ್ನು ವಿರೋಶಿಸುವವರ ಖಾತೆಯನ್ನು ಖಾಯಂ ಸ್ವರೂಪದಲ್ಲಿ ಸ್ಥಗಿತಗೊಳಿಸುತ್ತದೆ ಎಂದು ಹೇಳಿದ್ದರು.

ಫೆಡರಲ್ ಸರ್ಕಾರಿ ಅಧಿಕಾರಿಗಳು ತಮ್ಮ ಸೆಲ್ ಫೋನ್ಗಳಲ್ಲಿ ಟಿಕ್ ಟಾಕ್ ಬಳಸುವುದನ್ನು ನಿಷೇಧಿಸಲು ಯುಎಸ್ ಕಾಂಗ್ರೆಸ್ನಲ್ಲಿ ಕನಿಷ್ಠ ಎರಡು ಮಸೂದೆಗಳು ಬಾಕಿ ಉಳಿದಿವೆ. ಇಂತಹುದೇ ಭಾವನೆಯನ್ನು ಪ್ರತಿಬಿಂಬಿಸಿ, ಭಾರತದ ನಿರ್ಧಾರದ ನಂತರ, ಇದೀಗ ಅಮೆರಿಕದಲ್ಲಿ ವಿಭಿನ್ನ ಸಂದೇಶ ರವಾನೆಯಾಗಿದೆ. ಇದೇವೇಳೆ ಈ ಕುರಿತು ಟ್ವೀಟ್ ಮಾಡಿರುವ ಯುಎಸ್ ಅಧ್ಯಕ್ಷರ ವ್ಯಾಪಾರ ಮತ್ತು ಉತ್ಪಾದನಾ ನೀತಿಯ ಸಹಾಯಕ ಪೀಟರ್ ನವರೊ, "ತುಲ್ಸಾ ಜಾಥಾದಲ್ಲಿ ಪಾಲ್ಗೊಳ್ಳಲು ಇದೇ ಚೀನೀ ಟಿಕ್ ಟಾಕ್ ಬಳಸಲಾಗಿದೆಯೇ?" ಎಂದು ಪ್ರಶ್ನಿಸಿದ್ದರು. ಭಾರತ ಈ ಆಪ್ ಗಳನ್ನು ಶಿಷೆಧಿಸಿದರ ಬಗ್ಗೆ ಪೀಟರ್ ನವರೊ ದಿ ನ್ಯೂಯಾರ್ಕ್ ಟೈಮ್ಸ್ ನ ಸುದ್ದಿ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ಇದೆ ವೇಳೆ ಫಾಕ್ಸ್ ನ್ಯೂಸ್ ಸುದ್ದಿ ನಿರೂಪಕ ಲಾರಾ ಇಂಗ್ರಾಹಮ್ ಅಮೆರಿಕವನ್ನು ಇದೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಟಿಕ್ ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್‌ಗಳನ್ನು ಮಾತ್ರ ಭಾರತ ನಿಷೇಧಿಸಿದೆ ಎಂದು ಲೇಖಕ ಗಾರ್ಡನ್ ಚಾಂಗ್ ಹೇಳಿದ್ದಾರೆ. ಅಮೆರಿಕ ಇದನ್ನು ಏಕೆ ಮಾಡಲು ಸಾಧ್ಯವಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ. ಫೋರ್ಬ್ಸ್ ಪ್ರಕಾರ, ಐಒಎಸ್ 14 ರ ಬೀಟಾ ಆವೃತ್ತಿಯಲ್ಲಿ ಹೊಸ ಕ್ಲಿಪ್‌ಬೋರ್ಡ್ ಎಚ್ಚರಿಕೆ ಬಿಡುಗಡೆ ಮಾಡುವುದರ ಮೂಲಕ ಟಿಕ್‌ಟಾಕ್ ಒಂದು ಅಸಾಧಾರಣ ಪದ್ಧತಿಯ ಮೂಲಕ ಕ್ಲಿಪ್ ಬೋರ್ಡ್ ಅನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ರಿಪಬ್ಲಿಕನ್ ಸೆನೆಟರ್ ಜೋಶುವಾ ಡೇವಿಡ್ ಹಾಲೆ ಏಪ್ರಿಲ್ನಲ್ಲಿ ಫೆಡರಲ್ ನೌಕರರು ಸರ್ಕಾರ ನೀಡುವ ಸಾಧನಗಳಲ್ಲಿ ಸಾಮಾಜಿಕ ಮಾಧ್ಯಮ ವಿಡಿಯೋ ಅಪ್ಲಿಕೇಶನ್ ಟಿಕ್ ಟಾಕ್ ಅನ್ನು ಬಳಸುವುದನ್ನು ನಿಷೇಧಿಸುವ ಕಾನೂನು ಪರಿಚಯಿಸಿದ್ದರು. ಅಮೆರಿಕದ ಭದ್ರತೆಯನ್ನು ರಕ್ಷಿಸಲು ಇದು ಅಗತ್ಯವಾದ ಹೆಜ್ಜೆಯಾಗಿದೆ ಎಂದು ಹಾಲೆ ಹೇಳಿದ್ದರು. ಕಾಂಗ್ರೆಸ್ಸಿನ ಕೆನ್ ಬಕ್ ಅವರು ಕೂಡ ಇದೇ ರೀತಿಯ ಕಾನೂನನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಪರಿಚಯಿಸಿದ್ದಾರೆ.

Trending News