ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಬಿಜೆಪಿಯತ್ತ ಮುಖ ಮಾಡಿದ 22 ಕಾಂಗ್ರೆಸ್ ಶಾಸಕರು

ಇತ್ತೀಚಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ನಂತರ ಈಗ 22 ಕಾಂಗ್ರೆಸ್ ಶಾಸಕರು ಕೂಡ ಸಿಂಧಿಯಾ ಹಾದಿ ಹಿಡಿದ್ದಾರೆ.

Last Updated : Mar 21, 2020, 08:27 PM IST
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಬಿಜೆಪಿಯತ್ತ  ಮುಖ ಮಾಡಿದ 22 ಕಾಂಗ್ರೆಸ್ ಶಾಸಕರು  title=
Photo courtesy: Twitter

ನವದೆಹಲಿ: ಇತ್ತೀಚಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ನಂತರ ಈಗ 22 ಕಾಂಗ್ರೆಸ್ ಶಾಸಕರು ಕೂಡ ಸಿಂಧಿಯಾ ಹಾದಿ ಹಿಡಿದ್ದಾರೆ.

ಶನಿವಾರದಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ದಾ ಅವರನ್ನು ಭೇಟಿಯಾದ ನಂತರ ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಎಲ್ಲಾ 22 ಕಾಂಗ್ರೆಸ್ ಶಾಸಕರು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆಯುವ ನಿರೀಕ್ಷೆಯಿದೆ.ನಡ್ಡಾ ಅವರನ್ನು ಭೇಟಿ ಸಂದರ್ಭದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಹಾಗೂ ಮಧ್ಯಪ್ರದೇಶದ ಇಬ್ಬರು ಪ್ರಮುಖ ನಾಯಕರಾದ ನರೇಂದ್ರ ತೋಮರ್ ಮತ್ತು ಕೈಲಾಶ್ ವಿಜಯವರ್ಗಿಯಾ ಕೂಡ ಉಪಸ್ಥಿತರಿದ್ದರು.

22 ಶಾಸಕರು ಕಮಲ್ ನಾಥ್ ಸರ್ಕಾರವನ್ನು ತೊರೆದ ನಂತರ ಅಲ್ಪಮತಕ್ಕೆ ಕುಸಿದ ಕಮಲ್ ನಾಥ ಸರ್ಕಾರ ಸಂಕಷ್ಟಕ್ಕೆ ಸಿಲುಕಿತ್ತು, ಈ ಹಿನ್ನಲೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಪರೀಕ್ಷೆ ಸಾಬೀತುಪಡಿಸಬೇಕಾಗಿತ್ತು, ಆದರೆ ಅದಕ್ಕೂ ಮುಂಚಿತವಾಗಿ ಕಮಲ್ ನಾಥ್ ಮುಖ್ಯಮಂತ್ರಿ ಹುದ್ದೆಯನ್ನು ತೊರೆದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದಲೂ ಕಮಲ್ ನಾಥ್ ಹಾಗೂ ಸಿಂಧಿಯಾ ನಡುವೆ ಶೀತಲ ಸಮರಕ್ಕೆ ಕಾರಣವಾಗಿತ್ತು, ಕೊನೆಗೆ ಇದು ಸಿಂಧಿಯಾ ಬಿಜೆಪಿ ಸೇರುವುದರ ಮೂಲಕ ಕಮಲ್ ನಾಥ್ ಸರ್ಕಾರದ ಪತನಕ್ಕೆ ಅಧಿಕೃತವಾಗಿ ನಾಂಧಿ ಹಾಡಿತು. 
 

Trending News