ನವದೆಹಲಿ: Google ನಲ್ಲಿ ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರುವ ಯಾವುದೇ ಒಂದು ಪ್ರಶ್ನೆಗೆ ಗೂಗಲ್ ನಲ್ಲಿ ಉತ್ತರ ದೊರಕಿಲ್ಲ ಎಂಬುದು ಆಗಲು ಸಾಧ್ಯವಿಲ್ಲ. ಪ್ರಶ್ನೆಗಳನ್ನು ಹೊರತುಪಡಿಸಿ ಇತರೆ ಕೆಲ ಸಂಗತಿಗಳ ಮಾಹಿತಿಯನ್ನೂ ಸಹ ಗೂಗಲ್ ನೀಡುತ್ತಿದ್ದು, ಇದು ವಾಟ್ಸ್ ಆಪ್ ಬಳಕೆದಾರರಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ವರದಿಯೊಂದರ ಪ್ರಕಾರ Google, WhatsApp ಗ್ರೂಪ್ ಗಳ ಪ್ರೈವೇಟ್ ಲಿಂಕ್ ಗಳನ್ನು ಇಂಡೆಕ್ಸ್ ಮಾಡುತ್ತಿದೆ. ಇದರಿಂದ ಯಾವುದೇ ವ್ಯಕ್ತಿ ಗೂಗಲ್ ಸರ್ಚ್ ಬಳಸಿ ನಿಮ್ಮ ವೈಯಕ್ತಿಕ WhatsApp ಗ್ರೂಪ್ ಸೇರಬಹುದಾಗಿದೆ. ಆದರೆ, ಇದಕ್ಕೆ ತಡೆ ನೀಡಲು ಗೂಗಲ್ ಮಾರ್ಪಾಟಕ್ಕೆ ಮುಂದಾಗಿದೆ.
Motherboard ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, WhatsApp ಗ್ರೂಪ್ ಚ್ಯಾಟ್ ಇನ್ವಿಟೇಶನ್ ಲಿಂಕ್ ಗಳನ್ನು ಗೂಗಲ್ ಮೂಲಕ ಇಂಡೆಕ್ಸ್ ಮಾಡಲಾಗುತ್ತಿದೆ. ಆದರೆ, site:chat.whatsapp.com Google ಮೇಲೆ ಹುಡುಕಾಟ ನಡೆಸಿದಾಗ, ಬಂದ ಪರಿಣಾಮಗಳಲ್ಲಿ ಈ ಕುರಿತು ಯಾವುದೇ ಅಧಿಕೃತ ಲಿಂಕ್ ಗಳು ದೊರತಿಲ್ಲ. Motherboard ತಂಡ google ಸರ್ಚ್ ಪರಿಣಾಮಗಳನ್ನು ಬಳಸಿ ಕೆಲ ಗ್ರೂಪ್ ಗಳನ್ನು ಕಂಡು ಹಿಡಿದಿದೆ ಎನ್ನಲಾಗಿದೆ. ಅಷ್ಟೇ ಯಾಕೆ UNನಿಂದ ಮಾನ್ಯತೆ ಪಡೆದ ಒಂದು ಸರ್ಕಾರೇತರ ಸಂಘಟನೆಯ ರೂಪದಲ್ಲಿ ಅವರು ಒಂದು ಗ್ರೂಪ್ ಅನ್ನು ಕೂಡ ಸೇರಿಕೊಂಡಿದ್ದಾರೆ. ಅವರ ಬಳಿ ಗ್ರೂಪ್ ನಲ್ಲಿರುವ ಎಲ್ಲ ಸದಸ್ಯರ ಫೋನ್ ನಂಬರ್ ಹಾಗೂ ಹೆಸರುಗಳನ್ನೂ ಕೂಡ ಪಡೆದುಕೊಂಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ whatsapp ನ ರಿವರ್ಸ್ ಇಂಜಿನಿಯರ್ ಜೇನ್ ವಾಂಗ್, Google ಬಳಿ ಮೇಲೆ ನಮೂದಿಸಲಾಗಿರುವ ಸುಮಾರು 4,70,000 ರಿಸಲ್ಟ್ಸ್ ಗಳಿದ್ದು, ಇವುಗಳಲ್ಲಿ ವಾಟ್ಸ್ ಆಪ್ ಗ್ರೂಪ್ ಗಳ ಇನ್ವೈಟ್ ಲಿಂಕ್ ಗಳಿವೆ ಎಂದಿದ್ದಾರೆ. ಅತ್ತ ಇನ್ನೊಂದೆಡೆ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಓರ್ವ ಟ್ವಿಟ್ಟರ್ ಬಳಕೆದಾರ ಜಾರ್ಡನ್ ವಿಲ್ಡನ್, ಒಂದು ವೇಳೆ ನೀವು ನಿಮ್ಮ WhatsApp ಖಾತೆ ಸುರಕ್ಷಿತವಾಗಿದೆ ಎಂದು ನಿಮಗೆ ಅನಿಸುತ್ತಿದ್ದರೆ ಅದು ಶುದ್ಧ ತಪ್ಪು ಎಂದು ಹೇಳಿದ್ದಾರೆ. ಇಲ್ಲಿದೆ ಟ್ವೀಟ್..
Your WhatsApp groups may not be as secure as you think they are.
The "Invite to Group via Link" feature allows groups to be indexed by Google and they are generally available across the internet. With some wildcard search terms you can easily find some… interesting… groups. pic.twitter.com/hbDlyN6g3q
— Jordan Wildon (@JordanWildon) February 21, 2020
ಈ ಕುರಿತು ಮಾಹಿತಿ ನೀಡಿರುವ Google ನ ಪಬ್ಲಿಕ್ ಸರ್ಚ್ ಲಾಯಿಸನ್ ಡ್ಯಾನಿ ಸುಲ್ಲಿವನ್, Google ಸೇರಿದಂತೆ ಇತರೆ ಓಪನ್ ಸರ್ಚ್ ಇಂಜಿನ್ ಗಳು ಸರ್ಚ್ ಪುಟಗಳ list ಸಿದ್ಧಪಡಿಸುತ್ತವೆ. ಯಾವುದೇ ಸೈಟ್ ಗಳು URL ಗಳನ್ನು ಸಾವಜನಿಕವಾಗಿ ಲಿಸ್ಟ್ ಮಾಡುವ ಅನುಮತಿ ನೀಡುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
New: Google is letting anyone find invite links to some private WhatsApp groups. Here is one we joined that is supposed to be for United Nations NGOs judging by its description. Can see members and get numbers https://t.co/TzWjqQmm2P pic.twitter.com/jda25POc0h
— Joseph Cox (@josephfcox) February 21, 2020