'ಲೋಕ' ಫಲಿತಾಂಶಕ್ಕೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಜಿಗಿತ...!

ಬಾಂಬೆ ಶೇರು ಮಾರುಕಟ್ಟೆ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ 140 ಪಾಯಿಂಟ್ ಗಳ ಏರಿಕೆಯನ್ನು ಕಂಡಿದೆ.ಬ್ಯಾಂಕಿಂಗ್ ಹಾಗೂ ಆಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇರು ಹರಿದು ಬಂದಿದೆ ಎಂದು ತಿಳಿದುಬಂದಿದೆ. 

Last Updated : May 22, 2019, 07:06 PM IST
 'ಲೋಕ' ಫಲಿತಾಂಶಕ್ಕೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಜಿಗಿತ...! title=
ಸಾಂದರ್ಭಿಕ ಚಿತ್ರ

ಮುಂಬೈ: ಬಾಂಬೆ ಶೇರು ಮಾರುಕಟ್ಟೆ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ 140 ಸೂಚ್ಯಂಕಗಳ ಏರಿಕೆಯನ್ನು ಕಂಡಿದೆ.ಬ್ಯಾಂಕಿಂಗ್ ಹಾಗೂ ಆಟೋದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇರು ಹರಿದು ಬಂದಿದೆ ಎಂದು ತಿಳಿದುಬಂದಿದೆ. 

ದಿನದಾಂತ್ಯಕ್ಕೆ 300 ಸೂಚ್ಯಂಕಗಳಷ್ಟು ಏರಿಕೆ ನಂತರ, 30 ಷೇರುಗಳ ಸೂಚ್ಯಂಕ 140.41 ಅಂಕಗಳು, ಅಥವಾ 0.36 ಶೇಕಡಾ, 39,110.21 ಕ್ಕೆ ಮುಕ್ತಾಯಗೊಂಡಿತು.ಇನ್ನೊಂದೆಡೆಗೆ ಎನ್ಎಸ್ಇ ನಿಫ್ಟಿ 28.80 ಸೂಚ್ಯಂಕ ಅಥವಾ ಶೇ 0.25 ರಿಂದ  11,737.90 ಕ್ಕೆ ಏರಿತು.ಸನ್ ಫಾರ್ಮಾ, ಬಜಾಜ್ ಆಟೋ, ಭಾರ್ತಿ ಏರ್ಟೆಲ್, ಕೋಲ್ ಇಂಡಿಯಾ, ಟಾಟಾ ಮೋಟಾರ್ಸ್, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಹೀರೋ ಮೋಟೋಕಾರ್ಪ್, ಒಎನ್ಜಿಸಿ, ಎಚ್ಡಿಎಫ್ಸಿ, ವೇದಾಂತ, ಎಲ್ ಮತ್ತು ಟಿ, ಕೋಟಾಕ್, ಅತಿ ಹೆಚ್ಚು ಲಾಭ ಗಳಿಸಿದೆ. ಮಾರುತಿ ಮತ್ತು ಆಕ್ಸಿಸ್ ಬ್ಯಾಂಕ್ ನಲ್ಲಿ ಶೇ  ​2.92 ರಷ್ಟು ಶೇರು ಅಧಿಕಗೊಂಡಿದೆ.ಮತ್ತೊಂದೆಡೆ ಯೆಸ್ ಬ್ಯಾಂಕ್, ಐಟಿಸಿ, ಪವರ್ಗ್ರಿಡ್, ಟಿಸಿಎಸ್ ಮತ್ತು ಎಚ್.ಯು.ಎಲ್ ಶೇ  2.34 ರಷ್ಟು ಕುಸಿತ ಕಂಡಿವೆ ಎಂದು  ತಿಳಿದುಬಂದಿದೆ.

ಬಹುತೇಕ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ ಹಿನ್ನಲೆಯಲ್ಲಿ ಹೂಡಿಕೆದಾರರ  ಸಕರಾತ್ಮಾಕ ಧೋರಣೆಯನ್ನು ಹೊಂದಿದ್ದಾರೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
 

Trending News