VK Singh : 'ಹಿಂಸಾಚಾರದ ಹಿಂದೆ ಪ್ರತಿಪಕ್ಷಗಳ ಕೈವಾಡ, ರಾಹುಲ್ ಉಳಿಸುವ ಪ್ರಯತ್ನ'

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್, ಹಿಂಸಾಚಾರದ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ. ಇದರಿಂದ ರಾಹುಲ್ ಗಾಂಧಿಯನ್ನು ಉಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Jun 17, 2022, 06:35 PM IST
  • ಮೋದಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ
  • ಯೋಜನೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ
  • ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್
VK Singh : 'ಹಿಂಸಾಚಾರದ ಹಿಂದೆ ಪ್ರತಿಪಕ್ಷಗಳ ಕೈವಾಡ, ರಾಹುಲ್ ಉಳಿಸುವ ಪ್ರಯತ್ನ' title=

Agnipath Scheme : ಮೋದಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ ಯೋಜನೆ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣ ಮತ್ತು ಬಿಹಾರದಲ್ಲಿ ಹಲವಾರು ರೈಲುಗಳಿಗೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ವಿದ್ವಾಂಸಕ ಕೃತ್ಯ ಮೆರೆದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್, ಹಿಂಸಾಚಾರದ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ. ಇದರಿಂದ ರಾಹುಲ್ ಗಾಂಧಿಯನ್ನು ಉಳಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.

ಜೀ ನ್ಯೂಸ್ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಸಚಿವ ವಿಕೆ ಸಿಂಗ್, ಈ ಗಲಭೆಕೋರರು ಪ್ರತಿಭಟಿಸುತ್ತಿದ್ದಾರೆ, ಅವರು ದೇಶ ಸೇವೆ ಮಾಡಲು ಬಯಸುವವರಲ್ಲ. ದೇಶಕ್ಕೆ ಸೇವೆ ಸಲ್ಲಿಸಲು ಬಯಸುವವರು ಸಾರ್ವಜನಿಕ ಆಸ್ತಿಯನ್ನ ಹಾನಿ ಮಾಡುವುದಿಲ್ಲ. ಈ ಹಿಂಸಾಚಾರದ ಹಿಂದೆ ಜನರನ್ನು ಪ್ರಚೋದಿಸುವ ಕೆಲಸ ಬಿಟ್ಟರೆ ಸಾರ್ವಜನಿಕರಿಗೆ ಬೇರೆ ಕೆಲಸವಿಲ್ಲ. ಇಡಿ ಪ್ರಶ್ನಿಸುತ್ತಿರುವ ಪಕ್ಷದ ನಾಯಕರೊಬ್ಬರಿದ್ದಾರೆ ಎಂದು ರಾಹುಲ್ ಗಾಂಧಿ ಹೆಸರಿಸದೆ ಹೇಳಿದ್ದಾರೆ. ಗಲಭೆಗಳು ಸಂಭವಿಸಿದರೆ, ಬಹುಶಃ ಇಡಿ ತಮ್ಮ ನಾಯಕನನ್ನು ಬಿಟ್ಟುಬಿಡುತ್ತದೆ ಎಂದು ಅವರ ಪಕ್ಷ ಭಾವಿಸುತ್ತದೆ ಎಂದರು.

ಇದನ್ನೂ ಓದಿ : Agnipath Scheme Protest : ಅಗ್ನಿಪಥ್ ವಿರೋಧಿಸಿ ಪ್ರತಿಭಟನೆ : ಪೊಲೀಸ್ ಗುಂಡಿಗೆ 1 ಬಲಿ, ಇಂಟರ್ನೆಟ್, SMS ಸ್ಥಗಿತ!

ಇನ್ನು ಮುಂದುವರೆದು ಮಾತನಾಡಿದ ವಿಕೆ ಸಿಂಗ್, ಅಗ್ನಿಪಥ ಯೋಜನೆಯಲ್ಲಿ ಯಾವುದೇ ವಿವಾದವಿಲ್ಲ, ಆದರೆ ಪ್ರತಿಪಕ್ಷಗಳು ವಿವಾದವನ್ನು ಸೃಷ್ಟಿಸುತ್ತಿವೆ, ಇದಕ್ಕಿಂತ ಹೆಚ್ಚೇನೂ ಇಲ್ಲ. ಇಡಿ ಅವರನ್ನು ಎಲ್ಲಾ ಕಡೆಯಿಂದಲೂ ಸುತ್ತುವರಿದಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News