ನವದೆಹಲಿ: 2005ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅಪಹರಣ ಮತ್ತು ಕೊಲೆ ಪ್ರಕರಣ ಸಂಬಂಧ ಬಿಎಸ್‌ಪಿ ನಾಯಕ ಅಫ್ಜಲ್ ಅನ್ಸಾರಿಯನ್ನು ತಪ್ಪಿತಸ್ಥರೆಂದು ಘೋಷಿಸಿರುವ ಘಾಜಿಪುರ ನ್ಯಾಯಾಲಯ 4 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ವಿಧಿಸಿದೆ.
ಈ ಶಿಕ್ಷೆಯಿಂದ ಅಫ್ಜಲ್ ಅನ್ಸಾರಿ ತಮ್ಮ ಲೋಕಸಭಾ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ. ಇದೇ ಪ್ರಕರಣದಲ್ಲಿ ಅವರ ಸಹೋದರ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೃಷ್ಣಾನಂದ ರೈ ಹತ್ಯೆ ಪ್ರಕರಣದಲ್ಲಿ ಸಹೋದರರಿಬ್ಬರಿಗೂ ಶಿಕ್ಷೆಯಾಗಿದೆ. ಶಿಕ್ಷೆಯ ಘೋಷಣೆಯ ನಂತರ ಇದೀಗ ಅನ್ಸಾರಿ ಸಹೋದರರನ್ನು ಜೈಲಿಗೆ ಕರೆದೊಯ್ಯಲಾಗುತ್ತಿದೆ.
ಅಫ್ಜಲ್ ಅನ್ಸಾರಿ ಅವರು ಘಾಜಿಪುರ ಸಂಸದೀಯ ಕ್ಷೇತ್ರದ ಬಹುಜನ ಸಮಾಜ ಪಕ್ಷ (BSP) ಸಂಸದರಾಗಿದ್ದಾರೆ. ಅದೇ ರೀತಿ ಮುಖ್ತಾರ್ ಅನ್ಸಾರಿ ಅವರು ನೆರೆಯ ಜಿಲ್ಲೆಯ ಮೌವಿನ ಮೌ ಸದರ್ ವಿಧಾನಸಭಾ ಕ್ಷೇತ್ರದಿಂದ ಸತತ 5 ಬಾರಿ ಶಾಸಕರಾಗಿದ್ದಾರೆ.
ಇದನ್ನೂ ಓದಿ: PM Kisan ಯೋಜನೆ ಬಗ್ಗೆ ಕೇಂದ್ರದಿಂದ ಹೊರಬಿತ್ತು ಬಿಗ್ ಅಪ್ಡೇಟ್: ಇನ್ಮುಂದೆ ಈ ರೈತವರ್ಗಕ್ಕೂ ಸಿಗಲಿದೆ ಬಂಪರ್ ಗಿಫ್ಟ್
ಮುಖ್ತಾರ್‍ಗೆ 5 ಲಕ್ಷ ರೂ. ದಂಡ
14 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 4 ಲಕ್ಷ ರೂ. ದಂಡ ವಿಧಿಸಲಾಗಿದೆ. 2007ರ ನವೆಂಬರ್ 22ರಂದು ಗಾಜಿಪುರ ಜಿಲ್ಲೆಯ ಮೊಹಮ್ಮದಾಬಾದ್ ಕೊತ್ವಾಲಿಯಲ್ಲಿ ಕೊಲೆ ಪ್ರರಣದಡಿ ಸಂಸದರಾದ ಅಫ್ಜಲ್ ಅನ್ಸಾರಿ ಮತ್ತು ಮುಖ್ತಾರ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
ಇಬ್ಬರ ವಿರುದ್ಧವೂ ಆರೋಪ
2022ರ ಸೆಪ್ಟೆಂಬರ್ 23ರಂದು ಇಬ್ಬರ ವಿರುದ್ಧವೂ ಆರೋಪ ಮಾಡಲಾಗಿತ್ತು. ಬಳಿಕ ಪ್ರಾಸಿಕ್ಯೂಷನ್‌ನ ಸಾಕ್ಷ್ಯವನ್ನು ಪೂರ್ಣಗೊಳಿಸಲಾಯಿತು ಎಂದು ವಕೀಲರು ತಿಳಿಸಿದ್ದಾರೆ. ವಕೀಲರ ಪ್ರಕಾರ ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರದಂದು ನ್ಯಾಯಾಲಯವು ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ದಂಡ ವಿಧಿಸಿದೆ ಎಂದು ಅವರು ಹೇಳಿದರು. ಅದೇ ರೀತಿ ಅಫ್ಜಲ್ ಅನ್ಸಾರಿಗೆ 4 ವರ್ಷ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್‌ನ ಈ ಸರ್ಕಾರಿ ಯೋಜನೆ ನಿಮ್ಮ ಹಣವನ್ನು ದ್ವಿಗುಣಗೊಳಿಸುತ್ತದೆ!
ಮುಖ್ತಾರ್ ಅನ್ಸಾರಿಯವರು 2022ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಅವರ ಮಗ ಅಬ್ಬಾಸ್ ಅನ್ಸಾರಿ ಅವರು ಭಾರತೀಯ ಸಮಾಜ ಪಕ್ಷದಿಂದ (ಸುಭಾಸ್ಪ) ತಮ್ಮ ಅದೃಷ್ಟ ಪರೀಕ್ಷೆ ನಡೆಸಿ, ಅವರ ಸ್ಥಾನಕ್ಕೆ ಶಾಸಕರಾಗಿ ಆಯ್ಕೆಯಾದರು. ಮುಕ್ತಾರ್ ಅನ್ಸಾರಿ ಪ್ರಸ್ತುತ ಕ್ರಿಮಿನಲ್ ಪ್ರಕರಣಗಳಲ್ಲಿ ಬಂದಾ ಜೈಲಿನಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.