BJP Mission: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ವಿಜಯದ ನಂತರ ಬಿಜೆಪಿಯ ಮುಂದಿನ ಮಿಷನ್ ಏನು?

BJP Mission 2024: ಐದು ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಈಗ ಪಕ್ಷ 2024ಕ್ಕೆ ತಯಾರಿ ಆರಂಭಿಸಿದೆ.

Written by - Yashaswini V | Last Updated : Mar 14, 2022, 07:10 AM IST
  • ಬಿಜೆಪಿ ಮಿಷನ್ 2024 ರ ಸಿದ್ಧತೆಯಲ್ಲಿ ತೊಡಗಿದೆ
  • ಮತದಾನದ ಶೇಕಡಾವಾರು ಹೆಚ್ಚಳಕ್ಕೆ ತಂತ್ರ ಸಿದ್ಧವಾಗಿದೆ
  • ಏನಿದು ಬಿಜೆಪಿಯ ಮಿಷನ್ 2024?
BJP Mission: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ವಿಜಯದ ನಂತರ ಬಿಜೆಪಿಯ ಮುಂದಿನ ಮಿಷನ್ ಏನು? title=
BJP Mission 2024

BJP Mission 2024: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಂಜಾಬ್ ರಾಜ್ಯವನ್ನು ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿಗೆ ಹೆಚ್ಚಿನ ಉತ್ಸಾಹ ನೀಡಿದೆ. ಇಷ್ಟು ಕಷ್ಟಪಟ್ಟು ದೊಡ್ಡ ಗೆಲುವು ಸಾಧಿಸಿ ಬಿಜೆಪಿ ರಿಲ್ಯಾಕ್ಸ್ ಮೂಡ್‌ನಲ್ಲಿದೆ ಎಂದು ನೀವು ಯೋಚಿಸುತ್ತಿದ್ದರೆ ನಿಮ್ಮ ಆಲೋಚನೆ ತಪ್ಪು. ನಾಲ್ಕು ರಾಜ್ಯಗಳ ಚುನಾವಣೆಯ ವಿಜಯೋತ್ಸವದ ಬಳಿಕ ಬಿಜೆಪಿ ರಿಲಾಕ್ಸ್ 'ಮೂಡ್'ನಲ್ಲಿಲ್ಲ, ಬದಲಿಗೆ ಈಗಿನಿಂದಲೇ ಬಿಜೆಪಿ ಮಿಷನ್ 2024 (BJP Mission 2024)ಗಾಗಿ ತಂತ್ರಗಾರಿಕೆಯನ್ನು ಪ್ರಾರಂಭಿಸಿದೆ.

ಮತದಾನದ ಶೇಕಡಾವಾರು ಹೆಚ್ಚಳಕ್ಕೆ ತಂತ್ರ ಸಿದ್ಧವಾಗಿದೆ:
ಪಕ್ಷದ ಸಂಪೂರ್ಣ ಗಮನವು ಶೇಕಡಾವಾರು ಮತಗಳನ್ನು ಹೆಚ್ಚಿಸುವತ್ತ ನೆಟ್ಟಿದೆ. 2019ಕ್ಕಿಂತ ಹೆಚ್ಚು ಶೇಕಡಾವಾರು ಮತ ಗಳಿಸಲು ಕಾರ್ಯತಂತ್ರ ಸಿದ್ಧಪಡಿಸಲಾಗುತ್ತಿದೆ. ಎಲ್ಲ ರಾಜ್ಯಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಈಗಾಗಲೇ ಬಿಜೆಪಿ (BJP) ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮೂಲಗಳು ZEE ನ್ಯೂಸ್‌ಗೆ ತಿಳಿಸಿವೆ.

ಇದನ್ನೂ ಓದಿ- Narendra Modi : '2022 ರ ಚುನಾವಣಾ ಫಲಿತಾಂಶ 2024 ರಫಲಿತಾಂಶವನ್ನು ನಿರ್ಧರಿಸಿದೆ'

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸಿದೆ?
* ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ (Uttar Pradesh Assembly Elections) ಬಿಜೆಪಿ ಸ್ವಂತ ಬಲದಿಂದ 255 ಸ್ಥಾನಗಳನ್ನು ಪಡೆದಿದ್ದು, ಇದು ಬಹುಮತಕ್ಕಿಂತ ಹೆಚ್ಚು. ಮಿತ್ರಪಕ್ಷಗಳ ಗೆದ್ದ ಸ್ಥಾನಗಳನ್ನು ಇದರಲ್ಲಿ ಸೇರಿಸಿದರೆ, ಈ ಸಂಖ್ಯೆ 270 ಕ್ಕಿಂತ ಹೆಚ್ಚಾಗಿದೆ. 
* ಉತ್ತರಾಖಂಡದಲ್ಲೂ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿ 47 ಸ್ಥಾನಗಳನ್ನು ಗೆದ್ದುಕೊಂಡಿದೆ, ಇಲ್ಲಿಯೂ ಸಹ ಬಿಜೆಪಿಗೆ ಸರ್ಕಾರ ರಚಿಸಲು ಬೇರೆ ಪಕ್ಷಗಳ ಸಹಕಾರದ ಅಗತ್ಯವಿಲ್ಲ.
* ಮಣಿಪುರದಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದುಕೊಂಡಿದೆ, ಇದು ಬಹುಮತಕ್ಕಿಂತ ಹೆಚ್ಚು. * ಗೋವಾದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇದನ್ನೂ ಓದಿ- Narendra Modi : ಜನ ಸಾಗರದ ಮಧ್ಯ ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ!

ಏನಿದು ಬಿಜೆಪಿಯ ಮಿಷನ್ 2024 ? 
- 2019 ಕ್ಕಿಂತ ಹೆಚ್ಚು ಶೇಕಡಾವಾರು ಮತ ಪಡೆಯುವತ್ತ ಗಮನ
- ಎಲ್ಲಾ ರಾಜ್ಯಗಳಲ್ಲಿ ಮತಗಳ ಶೇಕಡಾವಾರು ಹೆಚ್ಚಳಕ್ಕೆ ಒತ್ತು
- ವಿವಿಧ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಒಂದಾಗಿದ್ದರೂ ಶೇಕಡಾವಾರು ಮತಗಳಲ್ಲಿ ಕಡಿಮೆ ಆಗದಂತೆ ಗಮನಹರಿಸಲು ಸಿದ್ಧತೆ. 
- ಪರಿಶಿಷ್ಟ ಜಾತಿ, ಪ.ಪಂಗಡದವರ ಮತ ಸೆಳೆಯಲು ಗಮನ ಕೇಂದ್ರೀಕರಿಸುವುದು.
- ಯಾದವೇತರ ಒಬಿಸಿಗಳನ್ನು ಸಂಪರ್ಕಿಸಲು ಪ್ರಯತ್ನಿಸುವುದು
- ಮುಸ್ಲಿಮರನ್ನು ಒಟ್ಟಿಗೆ ಸೇರಿಸಲು ವಿಭಿನ್ನ ತಂತ್ರಗಳನ್ನು ರೂಪಿಸುವುದು
- ಹೆಚ್ಚು ಹೆಚ್ಚು ಮುಸ್ಲಿಂ ಮಹಿಳೆಯರನ್ನು ಒಟ್ಟಿಗೆ ಸೇರಿಸಲು ಪ್ರಯತ್ನಿಸುವುದು
- ರಾಷ್ಟ್ರೀಯತೆಯ ವಿಷಯದಲ್ಲಿ ಜಾತಿಯ ಅಡೆತಡೆಗಳನ್ನು ಮುರಿಯುವ ತಂತ್ರ... ಈ ರೀತಿಯಾಗಿ ಬಿಜೆಪಿ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಶೇಕಡಾವಾರು ಮತದಾನವನ್ನು ಹೆಚ್ಚಿಸಲು ಹಲವು ತಂತ್ರಗಳನ್ನು ರೂಪಿಸಲು ಸಿದ್ಧತೆಯಲ್ಲಿ ತೊಡಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News