/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

Weekly Horoscope: ಐದು ರಾಶಿಯವರಿಗೆ ಅದೃಷ್ಟ ವೃತ್ತಿಯಲ್ಲಿ ಪ್ರಗತಿ, ಬಂಪರ್ ಧನಲಾಭ

Weekly Horoscope July 08th to July 14th: ಜುಲೈ 08ರಿಂದ ಜುಲೈ 14ರವರೆಗೆ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಪಾರ ಕೀರ್ತಿ, ಯಶಸ್ಸು ಸಿಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 8, 2024, 11:02 AM IST
  • ಸಿಂಹ ರಾಶಿಯವರಿಗೆ ಇದು ಶುಭ ಫಲಗಳಿಂದ ಕೂಡಿದ ವಾರ
  • ವೃಶ್ಚಿಕ ರಾಶಿಯವರು ವಾರದ ಆರಂಭದಲ್ಲಿ ಹಿತ ಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿರಿ
  • ಕುಂಭ ರಾಶಿಯವರಿಗೆ ವಾರದ ಮೊದಲಾರ್ಧ ಹಣಕಾಸಿನ ವಿಚಾರವಾಗಿ ಚಿಂತೆ ಕಾಡಬಹುದು.
Weekly Horoscope: ಐದು ರಾಶಿಯವರಿಗೆ ಅದೃಷ್ಟ ವೃತ್ತಿಯಲ್ಲಿ ಪ್ರಗತಿ, ಬಂಪರ್ ಧನಲಾಭ  title=

Weekly Horoscope in Kannada From July 08th to July 14th: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜುಲೈ ತಿಂಗಳ ಎರಡನೇ ವಾರ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಚಕ್ರದ ಜನರಿಗೆ ವೃತ್ತಿ ಭವಿಷ್ಯ ಹೇಗಿದೆ. ಮುಂಬರುವ ವಾರ ಯಾವ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಪ್ರಾಪ್ತಿಯಾಗಲಿದೆ. ಯಾವ ರಾಶಿಯವರು ತಾಳ್ಮೆಯಿಂದ ಇರುವುದು ಅವಶ್ಯಕ ಎಂದು ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ವಾರಪೂರ್ತಿ ಒಂದಿಲ್ಲೊಂದು ಉತ್ತಮ ಫಲಗಳನ್ನು ಅನುಭವಿಸುವಿರಿ. ಕುಟುಂಬಸ್ಥರೊಂದಿಗೆ ಪ್ರವಾಸ ಕೈಗೊಳ್ಳಬಹುದು. ವೃತ್ತಿ ಬದುಕಿನಲ್ಲಿ ಮನೆಮಾಡಿದ್ದ ಸಣ್ಣ-ಪುಟ್ಟ ಸಮಸ್ಯೆಗಳು ಬಗೆಹರಿಯಲಿವೆ. ಹೊಟೇಲ್ ಸಂಬಂಧಿತ ಉದ್ಯೋಗಿಗಳಿಗೆ ಅದೃಷ್ಟದ ವಾರ. ವಾರದ ದ್ವಿತೀಯ ಭಾಗದಲ್ಲಿ ಅನಿರೀಕ್ಷಿತ ಮೂಲಗಳಿಂದ ಆರ್ಥಿಕ ಆದಾಯವನ್ನು ಗಳಿಸಬಹುದು. ಹಣಕಾಸಿನ ಸ್ಥಿತಿಯಲ್ಲಿ ಪಾಸಿಟಿವ್ ಬದಲಾವಣೆಗಳನ್ನು ಕಾಣಬಹುದು.

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope): 
ವಾರದ ಆರಂಭವು ಸಮಸ್ಯೆಗಳಿಂದ ತುಂಬಿರುತ್ತದೆ. ನಿಮ್ಮ ಆಪ್ತ ಮೂಲದವರೇ ನಿಮಗೆ ಅನ್ಯಾಯ ಮಾಡಬಹುದು. ಇದು ನಿಮ್ಮ ಮನಸ್ಸನ್ನು ಹೆಚ್ಚು ಘಾಸಿಗೊಳಿಸುವ ಸಂಬಹವವಿದೆ.  ಆದಾಗ್ಯೂ ವಾರದ ಮಧ್ಯದಲ್ಲಿ ಎಲ್ಲವೂ ಬಗೆಹರಿದು ಜೀವನ ಸಹಜ ಸ್ಥಿತಿಗೆ ಮರಳಲಿದೆ. ಹೊಸ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು. ಯಾವುದೇ ನಿಯೋಜಿತ ಕೆಲಸಗಳಲ್ಲಿ ಯೋಜನೆಯನ್ನು ರೂಪಿಸಿ ಕಾರ್ಯನಿರ್ವಹಿಸುವುದರಿಂದ ಯಶಸ್ಸು ಖಂಡಿತ. ಸಂವಹನ ಸುಧಾರಿಸುವುದರಿಂದ ವ್ಯಾಪಾರ ವೃದ್ಧಿಯಾಗುತ್ತದೆ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ವಾರದ ಮೊದಲಾರ್ಧ ಅದೃಷ್ಟದ ವಾರ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭದಿಂದ ಮನಸ್ಸಿಗೆ ಉಲ್ಲಾಸ ಇರಲಿದೆ. ಆದರೆ, ವಾರದ ದ್ವಿತೀಯಾರ್ಧ ತೊಂದರೆಗಳಿಂದ ಸುತ್ತುವರೆಯಲಿದೆ. ಹಣಕಾಸಿನ ವಿಷಯಗಳಲ್ಲಿ ತುಂಬಾ ಜಾಗರೂಕರಾಗಿರಿ. ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ದೊರೆಯುತ್ತದೆ. ಆದರೆ, ನಿರ್ಲಕ್ಷ್ಯ ವಹಿಸಿದರೆ ಉತ್ತಮ ಕೆಲಸವೂ ಹಾಳಾಗಬಹುದು, ಎಚ್ಚರ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Weekly Horoscope): 
ವಾರದ ಆರಂಭದಲ್ಲಿ ಮಕ್ಕಳ ಕಡೆಯಿಂದ ಸಂತಸದ ಸುದ್ದಿಗಳನ್ನು ನಿರೀಕ್ಷಿಸಬಹುದು. ಶಿಕ್ಷಣದಲ್ಲಿ ಪ್ರಗತಿ ಕಂಡುಬರಲಿದೆ. ವೃತ್ತಿಪರವಾಗಿ ನಿಮ್ಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ವ್ಯವಹಾರದಲ್ಲಿ ಭಾವನಾತ್ಮಕವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಾರದ ಮಧ್ಯ ಭಾಗವು ಪ್ರತಿಯೊಂದು ದೃಷ್ಟಿಕೋನದಿಂದ ಅನುಕೂಲಕರವಾಗಿರುತ್ತದೆ. ಹಿಂದೆ ಮಾಡಿದ ಸಾಲಗಳನ್ನು ಹಿಂದಿರುಗಿಸುವ ಸಾಧ್ಯತೆ ಇದೆ. 

ಇದನ್ನೂ ಓದಿ- ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀ

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಶುಭ ಫಲಗಳಿಂದ ಕೂಡಿದ ವಾರ ಇದಾಗಿದ್ದು, ಮನೆಯಲ್ಲಿ ಮಂಗಳ ಕಾರ್ಯಗಳಿಂದ ಸಂತೋಷದ ವಾತಾವರಣ ಇರಲಿದೆ. ವಾರದ ಮಧ್ಯದಲ್ಲಿ ಪ್ರಯಾಣದ ಸಾಧ್ಯತೆಯೂ ಇದೆ. ವೃತ್ತಿಪರವಾಗಿ, ದಿಟ್ಟ ಹೆಜ್ಜೆಗಳನ್ನು ಇಡಲು ಇದು ಉತ್ತಮ ವಾರ. ಅನಿರೀಕ್ಷಿತ ಲಾಭದಿಂದಾಗಿ ಧನಾಗಮನ ಸಾಧ್ಯತೆ ಇದ್ದು ಹಣಕಾಸಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ವಾರದ ಕೊನೆಯ ಭಾಗದಲ್ಲಿ ನೀವು ಮಕ್ಕಳ ಕಡೆಯಿಂದ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ವಾರದ ಆರಂಭದಲ್ಲಿ ಕೆಲವು ಕೆಟ್ಟ ಸುದ್ದಿಗಳು ನಿಮ್ಮನ್ನು ಬಾಧಿಸಬಹುದು. ಆದರೆ, ವಾರದ ಮಧ್ಯ ಭಾಗದಲ್ಲಿ ಭೂಮಿಗೆ ಸಂಬಂಧಿಸಿದ ವ್ಯವಹಾರ ಮಾಡುವವರಿಗೆ ಅದೃಷ್ಟದ ವಾರ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಜನರು ವೃತ್ತಿಯಲ್ಲಿ ಪ್ರಗತಿ, ಬಡ್ತಿಯನ್ನು ಕಾಣಬಹುದು. ಆದಾಗ್ಯೂ, ಯಾವುದೇ ರೀತಿಯ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ವಾರದ ಆರಂಭದ ದಿನಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ವಾರದ ಮಧ್ಯ ಭಾಗದಲ್ಲಿ ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ.  ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ. ವಾರಾಂತ್ಯದಲ್ಲಿ ಮಕ್ಕಳ ಬಗ್ಗೆ ಸಣ್ಣ ಚಿಂತೆಗಳು ನಿಮ್ಮನ್ನು ಕಾಡಬಹುದು. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವಾರದ ಆರಂಭದಲ್ಲಿ ಹಿತ ಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿರಿ. ಸಾಧ್ಯವಾದಷ್ಟು ವಿವಾದಗಳಿಂದ ದೂರ ಉಳಿಯಲು ಪ್ರಯತ್ನಿಸಿ. ಮಕ್ಕಳ ಕಡೆಯಿಂದ ಧನಾತ್ಮಕ ಸುದ್ದಿಗಳನ್ನು ಕೇಳುವಿರಿ. ವೈವಾಹಿಕ ಜೀವನವೂ ಮಧುರವಾಗಿರುತ್ತದೆ. ಮೆಡಿಕಲ್ ಸಂಬಂಧಿತ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ಸಮಯ. ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿರುವವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದರಿಂದ ಯಶಸ್ಸು. ಹೂಡಿಕೆಯಿಂದ ಬಂಪರ್ ಲಾಭ ಸಾಧ್ಯತೆ. 

ಇದನ್ನೂ ಓದಿ- ನಾಲ್ಕು ದಿನಗಳಲ್ಲಿ ವೃಷಭ ರಾಶಿಗೆ ಮಂಗಳನ ಪ್ರವೇಶ, ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಹೆಚ್ಚಾಗಲಿದೆ ಸಮಸ್ಯೆ

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ವಾರದ ಆರಂಭದ ಭಾಗವು ಅದ್ಭುತವಾಗಿದೆ. ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಶುಭ ಫಲಗಳು ದೊರೆಯಲಿದೆ. ಕುಟುಂಬದೊಂದಿಗೆ ದೂರದ   ಪ್ರಯಾಣ ಕೈಗೊಳ್ಳಬಹುದು. ರಕ್ಷಣಾತ್ಮಕ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಪ್ರಮೋಷನ್ ಭಾಗ್ಯ ಸಾಧ್ಯತೆ. ವ್ಯಾಪಾರ-ವ್ಯವಹಾರದಲ್ಲಿ ತಾಳ್ಮೆಯಿಂದ ಮುಂದುವರೆದರೆ ಒಳಿತು. ಆತುರದ ನಿರ್ಧಾರಗಳಿಂದ ಭಾರೀ ನಷ್ಟ ಸಾಧ್ಯತೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ನಿಮ್ಮ ಭಾಷೆಯ ಬಗ್ಗೆ ವಿಶೇಷ ನಿಗಾವಹಿಸಿ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಈ ವಾರ ಸಮಸ್ಯೆಗಳಿಂದ ಕೂಡಿದ ವಾರ. ವಾರದ ಆರಂಭದಲ್ಲಿ ತಾಯಿಯೊಂದಿಗೆ ಆಸ್ತಿ ವಿಚಾರದಲ್ಲಿ ವಿವಾದಗಳು ಏರ್ಪಡಬಹುದು. ಆರ್ಥಿಕ ದೃಷ್ಟಿಯಿಂದ ಸಮಯ ಉತ್ತಮವಾಗಿಲ್ಲದ ಕಾರಣ ಅತಿಯಾದ ಖರ್ಚಿಗೆ ಕಡಿವಾಣ ಹಾಕಿ.  ಹೊಸ ವ್ಯವಹಾರದಲ್ಲಿ ಭಾರೀ ನಷ್ಟ ಸಾಧ್ಯತೆ ಇರುವುದರಿಂದ ಈ ವಾರ ವ್ಯವಹಾರದ ದೃಷ್ಟಿಯಿಂದ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ವಾರದ ಮಧ್ಯ ಭಾಗದಲ್ಲಿ  ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಆಫರ್ ಲೆಟರ್ ದೊರೆಯಬಹುದು. ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ವಾರದ ಮೊದಲಾರ್ಧ ಹಣಕಾಸಿನ ವಿಚಾರವಾಗಿ ಚಿಂತೆ ಕಾಡಬಹುದು. ಆದರೆ ಈ ಸಮಯದಲ್ಲಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ನಿಮ್ಮ ಚಿಂತೆಗಳಿಗೆ ಪರಿಹಾರ ದೊರೆಯಬಹುದು. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಮಾಡುವುದನ್ನು ತಪ್ಪಿಸಿ. ವಾರದ ಮಧ್ಯ ಭಾಗದಲ್ಲಿ ಸಹೋದರ ಸಹೋದರಿಯರಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಿಗಳಿಗೆ ಉತ್ತಮವಾದ ವಾರ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ವಾರದ ಮೊದಲ ಭಾಗದಲ್ಲಿ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. ಪ್ರಯಾಣದಿಂದ ಹಣಕಾಸಿನ ಮೂಲಗಳು ವೃದ್ಧಿ. ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಯೋಚಿಸಬಹುದು. ವೈವಾಹಿಕ ಜೀವನದಲ್ಲಿ ಸೌಹಾರ್ದ ಸಂಬಂಧಗಳು ಉಳಿಯುತ್ತವೆ. ಆದರೆ, ಆರೋಗ್ಯ ದೃಷ್ಟಿಯಿಂದ ಈ ವಾರ ಅಷ್ಟು ಉತ್ತಮವಾಗಿಲ್ಲ. ಅದರಲ್ಲೂ ಅಸ್ತಮಾ ರೋಗಿಗಳು ಈ ವಾರ ಜಾಗರೂಕರಾಗಿರಬೇಕು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.