ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತೀ ಎತ್ತರದ ಶಿವ ಮೂರ್ತಿ! ವಿಶೇಷತೆ ಏನು ಗೊತ್ತಾ?

ಸುಮಾರು 750 ಕಾರ್ಮಿಕರ ನಾಲ್ಕು ವರ್ಷಗಳ ಸತತ ಪರಿಶ್ರಮದಿಂದಾಗಿ ಈ ಮೂರ್ತಿ ಸಿದ್ಧವಾಗುತ್ತಿದೆ. 

Last Updated : Nov 19, 2018, 06:57 PM IST
ರಾಜಸ್ಥಾನದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತೀ ಎತ್ತರದ ಶಿವ ಮೂರ್ತಿ!  ವಿಶೇಷತೆ ಏನು ಗೊತ್ತಾ? title=

ಜೈಪುರ: ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಜರಾತ್'ನ 597 ಅಡಿ ಎತ್ತರದ ಸರ್ದಾರ್ ವಲ್ಲಭಾಭಾಯಿ ಪಾಟೇಲರ 'ಏಕತಾ ಮೂರ್ತಿ' ಉದ್ಘಾಟನೆಯ ಬೆನ್ನಲ್ಲೇ ರಾಜಸ್ಥಾನದಲ್ಲಿ ವಿಶ್ವದ ಅತೀ ಎತ್ತರದ ಶಿವನ ಪ್ರತಿಮೆ ಉದ್ಘಾಟನೆಗೆ ಸಿದ್ಧವಾಗುತ್ತಿದೆ.

ರಾಜಸ್ಥಾನದ ನಾಥ್​ದ್ವಾರದಲ್ಲಿ 351 ಅಡಿ​ ಎತ್ತರದ ಶಿವ ಮೂರ್ತಿಯನ್ನು ಸ್ಥಾಪನೆ ಮಾಡಲಾಗುತ್ತಿದ್ದು,  ಇದು ಪ್ರಪಂಚದಲ್ಲಿಯೇ ಅತೀ ಎತ್ತರದ ಶಿವಮೂರ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜಸ್ಥಾನದ ಉದಯಪುರದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ನಾಥ್​ದ್ವಾರದಲ್ಲಿನ ಗಣೇಶ್ ಟೆಕ್ರಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಶೇ.85ರಷ್ಟು ಪ್ರತಿಮೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, 2019 ಮಾರ್ಚ್​ ತಿಂಗಳಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. 

2012ರ ಆಗಸ್ಟ್ 18 ರಂದು ಮೂರ್ತಿ ಸ್ಥಾಪನೆಗೆ ಫೌಂಡೇಷನ್ ಹಾಕಲಾಗಿತ್ತು. ಅಂದಿನ ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್, ಪೂಜ್ಯ ಮುರಾರಿ ಬಾಪು ಅವರು ಈ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಶಿವ ಪ್ರತಿಮೆಯ ವಿಶೇಷತೆ:
* ಸುಮಾರು 750 ಕಾರ್ಮಿಕರ ನಾಲ್ಕು ವರ್ಷಗಳ ಸತತ ಪರಿಶ್ರಮದಿಂದಾಗಿ ಈ ಮೂರ್ತಿ ಸಿದ್ಧವಾಗುತ್ತಿದೆ. 
* ಆಸ್ಟ್ರೇಲಿಯಾದ Mirage Group ಕಂಪೆನಿ ಕಾಮಗಾರಿ ವಹಿಸಿಕೊಂಡಿದೆ.
* ವಿಶ್ವದ ಅತ್ಯಂತ ಎತ್ತರದ ಶಿವನ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಲಿರುವ 351 ಆಡಿ ಎತ್ತರದ ಶಿವನ ಪ್ರತಿಮೆ.
* 3000 ಟನ್ ಉಕ್ಕನ್ನ ಬಳಸಿ, ಬರೋಬ್ಬರಿ 30 ಸಾವಿರ ಟನ್ ತೂಕದ ಶಿವನ ಪ್ರತಿಮೆ ನಿರ್ಮಾಣ
* ಪ್ರವಾಸೋದ್ಯಮ ಅಭಿವೃದ್ಧಿಯ ಉದ್ದೇಶದಿಂದ 280 ಫೀಟ್ ಎತ್ತರದವೆರೆಗೆ ನಾಲ್ಕು ಲಿಫ್ಟ್ ಮತ್ತು ಮೂರು ಎಸ್ಕಲೇಟರ್​​ಗಳ ಅಳವಡಿಕೆ. 
* ಪ್ರತಿಮೆಯನ್ನು ಸುಮಾರು 20 ಕಿ.ಮೀ. ದೂರದಿಂದಲೇ ವೀಕ್ಷಿಸಬಹುದು.
* ಶಿವನ ವಿಗ್ರಹ ನಿರ್ಮಾಣ ಸ್ಥಳದಲ್ಲಿ ಮನೋರಂಜನೆಗಾಗಿ ರಂಗಮಂದಿರ ಹಾಗೂ ಉದ್ಯಾನವನಗಳ ನಿರ್ಮಾಣ.

Trending News