Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ

Rajasthan Declares Black Fungus As Pandemic: ಈ ಕುರಿತು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಮ್ಯೂಕರ್ ಮೈಕೊಸಿಸ್ (Mucormycosis)  ರೋಗಿಗಳ ಸಂಖ್ಯೆಯಲ್ಲಾಗುತ್ತಿರುವ ಸತತ ಏರಿಕೆ, ಬ್ಲಾಕ್ ಫಂಗಸ್ ಕೊರೊನಾ (Coronavirus) ಸೋಂಕಿನ ದುಷ್ಪ್ರಭಾವದ ರೂಪದಲ್ಲಿ ಹೊರಹೊಮ್ಮಿದ ಬಳಿಕ ಉಪಚಾರದ ಉತ್ತಮ ಸೌಕರ್ಯಗಳನ್ನು ಸುನಿಶ್ಚಿತಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

Written by - Nitin Tabib | Last Updated : May 19, 2021, 05:59 PM IST
  • ರಾಜಸ್ಥಾನದಲ್ಲಿ ಮಹಾಮಾರಿ ಎಂದು ಘೋಷಣೆಯಾದ ಬ್ಲಾಕ್ ಫಂಗಸ್.
  • ಈ ಕುರಿತು ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ.
  • ಚಿಕಿತ್ಸೆಗಾಗಿ ಸಿದ್ಧಪಡಿಸಲಾದ ಸ್ಪೆಷಲ್ ವಾರ್ಡ್ ಗಳು.
Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ title=
Rajasthan Declares Black Fungus As Pandemic (File Photo)

ಜೈಪುರ್: Rajasthan Declares Black Fungus As Pandemic - ಕೊರೊನಾವೈರಸ್ (Coronavirus) ಸೋಂಕಿನಿಂದ ಚೇತರಿಸಿಕೊಳ್ಳುವ ರೋಗಿಗಳಲ್ಲಿ ಕಂಡುಬರುತ್ತಿರುವ ಮ್ಯೂಕರ್ ಮೈಕೋಸಿಸ್ (Black Fungus) ರೋಗವನ್ನು ಸಾಂಕ್ರಾಮಿಕ ರೋಗವೆಂದು ರಾಜಸ್ಥಾನ ಸರ್ಕಾರ (Rajasthan Government) ಘೋಷಿಸಿದೆ. ಈ ಬಗ್ಗೆ ರಾಜ್ಯದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಮುಖ್ಯ ಸರ್ಕಾರಿ ಕಾರ್ಯದರ್ಶಿ (ವೈದ್ಯಕೀಯ ವಿಭಾಗ) ಅಖಿಲ್ ಅರೋರಾ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕರೋನಾದ ಪರಿಣಾಮದಿಂದಾಗಿ ಮ್ಯೂಕೋರ್ಮೈಕೋಸಿಸ್ ರೋಗಿಗಳ ಸಂಖ್ಯೆಯಲ್ಲಿ ನಿರಂತರ ಹೆಚ್ಚಳ, ಕಪ್ಪು ಶಿಲೀಂಧ್ರದ ಕರೋನಾ ವೈರಸ್ ಸೋಂಕಿನ ಅಡ್ಡಪರಿಣಾಮವಾಗಿ, ಕೋವಿಡ್ -19 (Covid -19) ಮತ್ತು ಕಪ್ಪು ಶಿಲೀಂಧ್ರದ ಸಮಗ್ರ ಮತ್ತು ಸಂಯೋಜಿತ ಚಿಕಿತ್ಸೆಯನ್ನು ಹೊಂದಲು  ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಕುರಿತು ಆತಂಕ ಹೊರಹಾಕಿದ್ದ ಸಿಎಂ 
ರಾಜಸ್ಥಾನದ ಮಹಾಮಾರಿ ಮಸೂದೆ 2020 ರ ಸೆಕ್ಷನ್ 3 ಮತ್ತು ಸಬ್ ಸೆಕ್ಷನ್ 4ರ ಅಡಿ ಮ್ಯೂಕರ್ ಮೈಕೊಸಿಸ್ (ಬ್ಲಾಕ್ ಫಂಗಸ್) ರೋಗವನ್ನು ಮಹಾಮಾರಿ ಹಾಗೂ ಅಧಿಸೂಚನೆಗೊಂಡ ರೋಗ ಎಂದು ತಿಳಿಸಲಾಗಿದೆ.  ಕೆಲ ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಮುಖ್ಯಮಂತ್ರಿಗಳಾಗಿರುವ ಅಶೋಕ್ ಗೆಹ್ಲೋಟ್ (CM Ashok Gehlot), ರಾಜಸ್ಥಾನ ಸೇರಿದಂತೆ ದೇಶಾದ್ಯಂತ ಕೊರೊನಾ (Coronavirus) ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲಾಕ್ ಫಂಗಸ್ ಅಥವಾ ಮ್ಯೂಕರ್ ಮೈಕೊಸಿಸ್ ಕಾಯಿಲೆಯ ಕುರಿತು ತಮ್ಮ ಚಿಂತೆಯನ್ನು ಹೊರಹಾಕಿದ್ದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ- Vaccine Mix And Match Study: Spain ನಲ್ಲಿ ಅಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ಪಡೆದವರಿಗೆ ಫೈಸರ್ ಲಸಿಕೆಯ ಎರಡನೇ ಪ್ರಮಾಣ! ಕಾರಣ ಏನು ಗೊತ್ತಾ?

ದೆಹಲಿಯಲ್ಲಿಯೂ ಪತ್ತೆಯಾದ ಹಲವು ಪ್ರಕರಣಗಳು
ಏತನ್ಮಧ್ಯೆ ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ  (Sir Gangaram Hospital ) ಬ್ಲಾಕ್ ಫಂಗಸ್ ಹೊಂದಿರುವ ಸುಮಾರು 40 ರೋಗಿಗಳು ದಾಖಲಾಗಿದ್ದಾರೆ. ಆದರೆ ಇದುವರೆಗೆ ಈ ಮ್ಯೂಕರ್ಮೈಕೊಸಿಸ್ ರೋಗಿಗಳಿಗೆ ಇನ್ನೂ ಬೆಡ್ ವ್ಯವಸ್ಥೆ ಮಾಡಲಾಗಿಲ್ಲ ಎನ್ನಲಾಗಿದೆ. ಈ ರೋಗದ ಚಿಕಿತ್ಸೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇದಕ್ಕಾಗಿ ಕೆಜ್ರಿವಾಲ್ ಸರ್ಕಾರ ಒಂದು ಮೂರು ಸದಸ್ಯರ ಸಮೀತಿ ಕೂಡ ನೇಮಕ ಮಾಡಿದೆ. ಈ ಸಮಿತಿ ಈ ರೋಗದ ಚಿಕಿತ್ಸೆಗೆ ಬಳಸಲಾಗುವ ಇಂಜೆಕ್ಷನ್ ಪೂರೈಕೆಯನ್ನು ಸುನಿಶ್ಚಿತಗೊಳಿಸಲಿದೆ.

ಇದನ್ನೂ ಓದಿ- ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ, 7ನೇ ವೇತನ ಆಯೋಗದ ಅಪ್ರೆಸಲ್ ಅವಧಿ ವಿಸ್ತರಣೆ

ಸಕ್ಕರೆ ಕಾಯಿಲೆ ಇರುವವರಿಗೆ ಹೆಚ್ಚಿನ ಅಪಾಯ
ಈ ಕಾಯಿಲೆಯ ಕುರಿತು ತಜ್ಞರು ನೀಡಿರುವ ಹೇಳಿಕೆಯ ಪ್ರಕಾರ, ಕೊರೊನಾ ವೈರಸ್ ನಿಂದ ಚೇತರಿಸಿಕೊಂಡ ಮಧುಮೇಹ ರೋಗಿಗಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ ಎಂದಿದ್ದಾರೆ. ಈ ರೋಗದಿಂದ ಬಳಲುವವರು ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದರ ಜೊತೆಗೆ ವಸಡುಗಳನ್ನು ತೆಗೆದು ಹಾಕುವ ಪರಿಸ್ಥಿತಿ ಎದುರಾಗುತ್ತಿದೆ. ರಾಜಸ್ಥಾನದಲ್ಲಿ ಸುಮಾರು 100 ರೋಗಿಗಳು ಬ್ಲಾಕ್ ಫಂಗಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಎಲ್ಲಾ ರೋಗಿಗಳ ಚಿಕಿತ್ಸೆಗಾಗಿ ಜೈಪುರದ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಸಂಪೂರ್ಣ ಮಾರ್ಗಸೂಚಿಗಳ ಅಡಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ-ಒಂದೇ ದಿನದಲ್ಲಿ 20 ಲಕ್ಷ ಕೊರೊನಾ ಪರೀಕ್ಷೆ ಕೈಗೊಂಡ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News