ಚೀನಿ ಆ್ಯಪ್‌ಗಳ ಬ್ಯಾನ್ ಬೆನ್ನಲ್ಲೇ ಈ ಭಾರತೀಯ ಆ್ಯಪ್‌ಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್...!

59 ಚೀನೀ ಮೊಬೈಲ್ ಅಪ್ಲಿಕೇಶನ್‌ಗಳ ನಿಷೇಧದ ಮಧ್ಯೆ, ಭಾರತೀಯ ಅಪ್ಲಿಕೇಶನ್ ಶೇರ್‌ಚಾಟ್ ಡೌನ್‌ಲೋಡ್‌ಗಳ ವಿಷಯದಲ್ಲಿ ದಾಖಲೆಗಳನ್ನು ಮುರಿದಿದೆ. ಈ ಪ್ಲಾಟ್‌ಫಾರ್ಮ್ ಪ್ರತಿ ಗಂಟೆಗೆ 5 ಲಕ್ಷ ಡೌನ್‌ಲೋಡ್‌ಗಳನ್ನು ಮುಟ್ಟಿದೆ.

Last Updated : Jul 2, 2020, 10:10 AM IST
ಚೀನಿ ಆ್ಯಪ್‌ಗಳ ಬ್ಯಾನ್ ಬೆನ್ನಲ್ಲೇ ಈ ಭಾರತೀಯ ಆ್ಯಪ್‌ಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡ್...! title=

ನವದೆಹಲಿ : 59 ಚೀನಿ ಆ್ಯಪ್‌ಗಳನ್ನು (Chinese apps)  ನಿಷೇಧಿಸಿದ ಮಧ್ಯೆ ಭಾರತೀಯ ಅಪ್ಲಿಕೇಶನ್ ಶೇರ್‌ಚಾಟ್ (Sharechat) ಡೌನ್‌ಲೋಡ್‌ಗಳ ವಿಷಯದಲ್ಲಿ ದಾಖಲೆಗಳನ್ನು ಮುರಿದಿದೆ. ಈ ಪ್ಲಾಟ್‌ಫಾರ್ಮ್ ಪ್ರತಿ ಗಂಟೆಗೆ 5 ಲಕ್ಷ ಡೌನ್‌ಲೋಡ್‌ಗಳನ್ನು ಮುಟ್ಟಿದೆ. ಕಳೆದ 36 ಗಂಟೆಗಳಲ್ಲಿ ಸುಮಾರು 1.50 ಕೋಟಿ ಬಳಕೆದಾರರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

59 ಚೈನೀಸ್ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಚೀನಾಕ್ಕೆ 5 ಕಟ್ಟುನಿಟ್ಟಿನ ಸಂದೇಶ ರವಾನಿಸಿದ ಭಾರತ

ಶೇರ್‌ಚಾಟ್ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ, ಅಲ್ಲಿ ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಬಹುದು ಮತ್ತು ಬಳಸಬಹುದು. ಶೇರ್‌ಚಾಟ್ ಅಪ್ಲಿಕೇಶನ್ ಫೇಸ್‌ಬುಕ್ ಮತ್ತು ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣವಾಗಿದೆ, ಇದನ್ನು ವಾಟ್ಸಾಪ್ (WHATSAPP), ಫೇಸ್‌ಬುಕ್ ಮತ್ತು ಟ್ವಿಟರ್‌ಗಳನ್ನು ಸಂಪರ್ಕಿಸುವ ಮೂಲಕ ರಚಿಸಲಾಗಿದೆ. ಇಲ್ಲಿರುವ ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಂತೆ ಬಳಕೆದಾರರು ಐಡಿ ರಚಿಸಬಹುದು ಮತ್ತು ಜನರನ್ನು ಫಾಲೋ ಮಾಡಬಹುದು. ಅಲ್ಲದೆ ಸ್ಟೇಟಸ್ ಫೋಟೋಗಳನ್ನು ಪೋಸ್ಟ್ ಮಾಡಬಹುದು.

ಭಾರತದಲ್ಲಿ 59 ಚೀನೀ ಅಪ್ಲಿಕೇಶನ್ ನಿಷೇಧ: ಚೀನೀಯರು ಹೆಚ್ಚು ಚಿಂತಿತರಾಗಿರುವುದೇಕೆ?

ಶೇರ್‌ಚಾಟ್ ಸಿಒಒ ಮತ್ತು ಸಹ-ಸಂಸ್ಥಾಪಕ ಫರೀದ್ ಅಹ್ಸಾನ್ ಅವರ ಪ್ರಕಾರ, ಜನರು ಶೇರ್‌ಚಾಟ್ ಅನ್ನು ಬಳಸುತ್ತಿರುವ ರೀತಿ, ಕಂಪನಿಯು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಿರ್ದಿಷ್ಟ ಭಾರತೀಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಶೇರ್‌ಚಾಟ್ ಆ್ಯಪ್ ತಯಾರಿಸಲಾಗಿದ್ದು, ಇದು ಬಳಕೆದಾರರು ತಮ್ಮ ಫಾಲ್ಲೋವೆರ್ಸ್ ಜೊತೆ ಫೋಟೋಗಳನ್ನು ಹಂಚಿಕೊಳ್ಳುವ ಸೌಲಭ್ಯ ಒದಗಿಸುತ್ತದೆ.

TikTok ಮತ್ತು Helo ಅಪ್ಲಿಕೇಶನ್ ಬಗ್ಗೆ ಗೂಗಲ್, ಆಪಲ್ ಸಹ ಕೈಗೊಂಡಿದೆ ಈ ಮಹತ್ವದ ನಿರ್ಧಾರ

ಚೀನೀ ಅಪ್ಲಿಕೇಶನ್‌ಗಳ ನಿಷೇಧದ ನಂತರ ಶೇರ್‌ಚಾಟ್‌ನಲ್ಲಿ 1 ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳು ಬಂದಿವೆ. ಈ ಪೋಸ್ಟ್‌ಗಳನ್ನು 10 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇಷ್ಟಪಟ್ಟಿದ್ದಾರೆ ಮತ್ತು ಅವರಲ್ಲಿ ಸುಮಾರು 5 ಲಕ್ಷ ಷೇರುಗಳನ್ನು ವಾಟ್ಸಾಪ್‌ನಲ್ಲಿ ಮಾಡಲಾಗಿದೆ. 15 ಭಾಷೆಗಳಲ್ಲಿ ಬಳಸುತ್ತಿರುವ ಶೇರ್‌ಚಾಟ್‌ನ 6 ಕೋಟಿಗಿಂತ ಹೆಚ್ಚು ಸಕ್ರಿಯ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.

Trending News