ಭೂಗತಪಾತಕಿ ಅಬು ಸಲೇಂನಿಂದ 'ಸಂಜು' ಚಿತ್ರ ನಿರ್ದೇಶಕರಿಗೆ ಲೀಗಲ್ ನೋಟಿಸ್

1993 ಬಾಂಬೆ ಸ್ಫೋಟದಲ್ಲಿನ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಭೂಗತ ಪಾತಕಿ ಅಬು ಸಲೇಂ ಇತ್ತೀಚೆಗೆ ಸಂಜು ಚಿತ್ರ ನಿರ್ದೇಶಕರಿಗೆ ಚಿತ್ರದಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಲೀಗಲ್ ನೋಟಿಸ್ ನ್ನು ಜಾರಿ ಮಾಡಿದ್ದಾರೆ.

Last Updated : Jul 27, 2018, 05:31 PM IST
ಭೂಗತಪಾತಕಿ ಅಬು ಸಲೇಂನಿಂದ 'ಸಂಜು' ಚಿತ್ರ ನಿರ್ದೇಶಕರಿಗೆ ಲೀಗಲ್ ನೋಟಿಸ್ title=
file photo

ಮುಂಬೈ: 1993 ಬಾಂಬೆ ಸ್ಫೋಟದಲ್ಲಿನ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಭೂಗತ ಪಾತಕಿ ಅಬು ಸಲೇಂ ಇತ್ತೀಚೆಗೆ ಸಂಜು ಚಿತ್ರ ನಿರ್ದೇಶಕರಿಗೆ ಚಿತ್ರದಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಲೀಗಲ್ ನೋಟಿಸ್ ನ್ನು ಜಾರಿ ಮಾಡಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆ ವರದಿಯಂತೆ ಅಬು ಸಲೆಮ್ ಅವರು ತಮ್ಮ ವಕೀಲರ ಮೂಲಕ, ಚಿತ್ರದಲ್ಲಿ ಅವರನ್ನು  ತಪ್ಪಾಗಿ ಚಿತ್ರೀಕರಿಸಿದ ಹಿನ್ನಲೆಯಲ್ಲಿ ಅದಕ್ಕೆ ಕ್ಷಮೆ ಕೋರಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 15 ದಿನಗಳ ಒಳಗೆ ಇದಕ್ಕೆ ಪ್ರತಿಕ್ರಿಯೆ  ನೀಡದಿದ್ದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಸಲ್ಲಿಸುವುದಾಗಿ  ತಿಳಿಸಿದ್ದಾರೆ ಎನ್ನಲಾಗಿದೆ.

ನೋಟಿಸ್ ನಲ್ಲಿ ಚಿತ್ರ ನಿರ್ಮಾಪಕ ರಾಜು ಹಿರಾನಿ, ವಿದೂ ವಿನೋದ್ ಚೋಪ್ರಾ ಮತ್ತು ಅನೇಕರ ಹೆಸರನ್ನು ಪ್ರಸ್ತಾಪಿಸಲಾಗಿದೆ.ಚಿತ್ರದಲ್ಲಿ ಸಂಜಯ್ ದತ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವು ದೃಶ್ಯಕ್ಕೆ ಅಬು ಸಲೆಮ್ ಅವರು  ಆಕ್ಷೇಪ ವ್ಯಕ್ತಪಡಿಸಿದ್ದಾರೆ  ಎಂದು  ತಿಳಿದು ಬಂದಿದೆ.

Trending News