ಭಗವಾನ್ ರಾಮ-ಕೃಷ್ಣರ ಬಗ್ಗೆ ವಿವಾದಿತ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ AAP ನಾಯಕ ಹೇಳಿದ್ದೇನು?

ರಾಜೇಂದ್ರ ಪಾಲ್ ಗೌತಮ್ ದೆಹಲಿಯ ಸೀಮಾಪುರಿ ವಿಧಾನಸಭೆಯ ಆಮ್ ಆದ್ಮಿ ಪಕ್ಷದ (AAP) ಶಾಸಕರಾಗಿದ್ದಾರೆ.

Last Updated : Nov 22, 2019, 12:47 PM IST
ಭಗವಾನ್ ರಾಮ-ಕೃಷ್ಣರ ಬಗ್ಗೆ ವಿವಾದಿತ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿದ AAP ನಾಯಕ ಹೇಳಿದ್ದೇನು? title=
File Photo

ನವದೆಹಲಿ: ಹಿಂದೂ ದೇವರುಗಳಾದ ಭಗವಾನ್ ರಾಮ ಮತ್ತು ಕೃಷ್ಣರ ವಿರುದ್ಧ ವಿವಾದಿತ ಟ್ವೀಟ್ ಮಾಡಿ ಇಕ್ಕಟ್ಟಿಗೆ ಸಿಲುಕಿರುವ ದೆಹಲಿ ಸರ್ಕಾರದ ಕ್ಯಾಬಿನೆಟ್ ಸಚಿವ ರಾಜೇಂದ್ರ ಪಾಲ್ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ (AAP) ಹಾನಿ ಮಾಡಲು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಅನ್ನು ದುರುಪಯೋಗಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಕುರಿತು ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

"ಚುನಾವಣೆಯ ಸಮಯದಲ್ಲಿ ನನ್ನ ಪಕ್ಷಕ್ಕೆ ಹಾನಿಯಾಗುವಂತೆ ಮಾಡಲು ಯಾರೋ ಕಿಡಿಗೇಡಿಗಳು ನನ್ನ ಟ್ವಿಟ್ಟರ್ ಹ್ಯಾಂಡಲ್ ಅನ್ನು ಹ್ಯಾಕ್ ಮಾಡಿದ್ದಾರೆ. ಧಾರ್ಮಿಕವಾಗಿ ಅವಹೇಳನಕಾರಿ ಟ್ವೀಟ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾನು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಪ್ರತಿಯೊಬ್ಬರೂ ತಮ್ಮ ಐಕಾನ್ ಅನ್ನು ನಂಬುವ ಹಕ್ಕನ್ನು ಹೊಂದಿದ್ದಾರೆ ಮತ್ತು ಪ್ರತಿಯೊಬ್ಬರ ನಂಬಿಕೆಯನ್ನು ನಾನು ಗೌರವಿಸುತ್ತೇನೆ" ಎಂದು ಗೌತಮ್ ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.

ವಾಸ್ತವವಾಗಿ, ಕೇಜ್ರಿವಾಲ್ ಸರ್ಕಾರದಲ್ಲಿ, ಎಸ್‌ಸಿ-ಎಸ್‌ಟಿ ಮತ್ತು ಸಮಾಜ ಕಲ್ಯಾಣ ಸಚಿವ ಗೌತಮ್ ಟ್ವಿಟ್ಟರ್ ನಲ್ಲಿ "ರಾಮ ಮತ್ತು ಕೃಷ್ಣ ನಿಮ್ಮ ಪೂರ್ವಜರು ಎಂದು ಸಾಬೀತಾದರೆ, ಇತಿಹಾಸದಲ್ಲಿ ಈ ಬಗ್ಗೆ ಏಕೆ ಕಲಿಸಲಾಗಿಲ್ಲ?" ಇವು ಪೌರಾಣಿಕ ಕಥೆಗಳು, ಐತಿಹಾಸಿಕವಲ್ಲ. ಪೆರಿಯಾರ್ ಜಿ ಅವರ ವಿಧಾನವು ದೃಡೀಕರಣ ಮತ್ತು ವೈಚಾರಿಕತೆಯನ್ನು ಆಧರಿಸಿದೆ” ಎಂದು ಬರೆಯಲಾಗಿತ್ತು. ಆದಾಗ್ಯೂ, ವಿವಾದದ ನಂತರ ಆ ಟ್ವೀಟ್ ಅನ್ನು ಅಳಿಸಲಾಗಿದೆ.

ದೆಹಲಿಯ ಸೀಮಪುರಿ ವಿಧಾನಸಭೆಯ ಆಮ್ ಆದ್ಮಿ ಪಕ್ಷದ ಶಾಸಕರಾಗಿರುವ ರಾಜೇಂದ್ರ ಗೌತಮ್ ಕೇಜ್ರಿವಾಲ್ ಸರ್ಕಾರದಲ್ಲಿ ಸಮಾಜ ಕಲ್ಯಾಣ, ಎಸ್‌ಸಿ / ಎಸ್‌ಟಿ, ಸಹಕಾರ, ಗುರುದ್ವಾರ ಚುನಾವಣಾ ಸಚಿವಾಲಯದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
 

Trending News